ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರಿತ ಸಾಧಿಮಣಿ ಮಂಜರಿ. ದಕ್ಕೆ ತಕ್ಕ ಇಬ್ಬರು ರಾಜಕುಮಾರರೂ ಮೃತ್ಯುಮುಖವ ನ್ನು ಸೇರಿದ್ದರಿಂದ, ತನಗೆ ಎದುರು ಬರುವವರು ಯಾರೂ ಇಲ್ಲವೆಂದು ಹೈದರನು ಪರಮಾನಂದಭರಿತನಾಗಿದ್ದನು. ಅದುವರೆಗೆ ಅಂತಃಪುರದಲ್ಲಿ ನಿರ್ಬಂಧದಲ್ಲಿದ್ದ ಲ ಕ್ಷಮ್ಮಣ್ಣಿಗೆ, ಒಂದೇಸಾರಿ ಅಪಾರವಾದ ಸಮುದವು ವುಕ್ಕಿಬಂದಂತಾದುದು. ಪಿಯಸತಿಯ, ನಾಣಸವಾ ನಾದ ಆ ಕುಮಾರರೂ, ಹೈದರನ ಬಾಧೆಯಿಂದ ಈ ಲೋಕವನ್ನು ಬಿಟ್ಟರೆಂತಲೂ, ದುಷ್ಟನಾದ ಹೈದರನ ಕೈ ತಾನು ಸಿಕ್ಕಿರುವೆನೆಂಬ ಯೋಚನೆಯಿಂದಲೂ, ಇವಳು ಕೃಶವಾಗುತ್ತಬಂದಳು. ಹೀಗೆ ಅಪಾರವಾದ ದುಃಖಸಾಗರದಲ್ಲಿ ಮುಳುಗಿ ಕೆಲವು ತಿಂಗಳುವರೆಗೂ ಇ ತರ ವಿಷಯಗಳೇನೂ ತೋರದೆ ಸುಮ್ಮನಿದ್ದಳು, ಹೀಗಿ ರಲಾಗಿ, ಪ್ರಾಚೀನವಾದ ಹಿಂದೂರಾಜ್ಯವು ಅನ್ಯಾಯ ವಾಗಿ ನಾಶವಾಗುತ್ತದೆಯೆಂದೂ, ತಾನು ಸುಮ್ಮನಿದ್ರ ಪಕ್ಷದಲ್ಲಿ ತುರುಕರು ರಾಜ್ಯವೆಲ್ಲವನ್ನೂ ಆಕ್ರಮಿಸು ವರೆಂದೂ, ಆಕೆಗೆ ಒಂದು ಘನತರವಾದ ವಿಚಾರವು ಉಂ ಟಾಯಿತು. ರಾಣಿ ಲಕ್ಷಮ್ಮಣ್ಣಿಯು ಒಬ್ಬ ಅಬಲೆಯಾ ದರೂ, ಇವಳಲ್ಲಿ ಸ್ವಾಭಿಮಾನವೂ, ತೇಜವೂ ಬಹಳ ವಾಗಿದ್ದುವು. ಮೈಸೂರು ಹಿಂದೂಸಿಂಹಾಸನವು ನಗ್ನ ವಾಗಿ ಯವನ ರಾಜ್ಯವು ಸ್ಥಾಪಿಸಲ್ಪಡುವುದೆಂಬ ಯೋಚ ನೆಯು ಮನಸ್ಸಿಗೆ ಬರಲು, ಅದುವರೆಗೂ ಅಡಗಿದ್ದ ಸ್ವಾಭಿ ಮಾನಪ್ರಕಾಶವು ಅವಳಲ್ಲಿ ಆಕಸ್ಮಿಕವಾಗಿ ಉದಯಿಸಿ ತು, ಅವಳು ಅಷ್ಟು ದು:ಖಗಳೆಲ್ಲವನ್ನೂ ಬಹಳ ಧೈರ್ಯ ದಿಂದ ಅಡಗಿಸಿಕೊಂಡು, ಹಿಂದೂರಾಜ್ಯ ರಕ್ಷಣೋಪಾ