ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷಮ್ಮಣ್ಣ, ಯವನ್ನು ಯೋಚನೆ ಮಾಡತೊಡಗಿದಳು. ಆಕೆಯು ಅದಕ್ಕೆ ಮುಂಚಿತವಾಗಿ ಯಾವಾಗಲೂ ಅಂತಃಪುರದಲ್ಲಿ ದೃಳಲ್ಲದೆ ರಾಜ್ಯಭಾರದ ತಂಟೆಗೆ ಹೋದವಳಲ್ಲ. ಆದ್ದ ರಿಂದ ಸಮಯಾನುಕೂಲವಾದ ರಾಜ್ಯ ಕಾರ್ಯಗಳೇನ ಆಕೆಗೆ ತಿಳಿಯಲು ಸಂಭವವಿರಲಿಲ್ಲ. ಆದರೆ ಸಂಕಟವು ದಾಹವಾದೊಡನೆಯೇ ಧೀರರಾದ ಮನುಸ್ಮರಬುದ್ದಿ ಯು ಹೇಗೆಪ್ರಜ್ವಲಿಸುತ್ತದೆ ಎಂಬುವದನ್ನು ಇವಳ ಚರಿ ತೆಯಿಂದ ತಿಳಿಯಬಹುದು. ರಾಜ್ಯಕ್ಕೆ ಬಾಲಕನು ಇ ಲ್ಲವೆಂದು ತೋಚಿದ ಒಡನೆಯೆ ತನ್ನ ಸಹೋದರಿಯ ಕುಮಾರನಾದ ನರಸರಾಜನನ್ನಾಗಲಿ, ತನ್ನ ಸೋದರ ಳಿಯನಾದ ಸಿದ್ದರಾಜನನ್ನಾಗಲಿ, ತಾನು ದತ್ತುಸುತ ನನ್ನಾಗಿ ಮಾಡಿಕೊಳ್ಳ ಬೇಕೆಂದು ಯೋಚಿಸಿ, ಈ ಸಂಗತಿಯನ್ನು ಹೈದರನಿಗೆ ತಿಳಿಸಿದಳು. ಮಹಾರಾಣಿ ಲಕಮಣಿಯು ಗುಣವತಿಯಾಗಿಯ, ಚಾತುರ್ಯ ವತಿಯಾಗಿಯ, ತೆಜಸ್ಸಿಯಾಗಿಯ, ಇರುವಳೆಂದು ಅದುವರೆಗೆ ಎಲ್ಲರಿಗೂ ತಿಳಿದಿದ್ದರಿಂದ, ಹೈದರನು ಸರ್ವಸಾಧೀಶನಾಗಿದ್ದರೂ, ಆಕೆಯೊಡನೆ ಹೋರಾಡು ವುದಕ್ಕೆ ಸಂಶಯಪಡುತಿದ್ದನು. ಆದ್ದರಿಂದ “ ನೀವು ದತ್ತು ವಿಧಾನ ಮಾಡಿಕೊಳ್ಳಕೂಡದು ” ಎಂದು ರಾಣಿಯಲ್ಲಿ ಹೇ ಳುವುದಕ್ಕೆ ಅವನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ಬಹಳ ಯೋಚಿಸಿ, ರಾಣಿಗೆ ಹೀಗೆಂದು ವರ್ತಮಾನವ ನ್ನು ಹೇಳಿ ಕಳುಹಿಸಿದನು. ನಿಮಗೆ ದತ್ತುಬೇಕಾಗಿ ದ್ದ ಪಕ್ಷದಲ್ಲಿ, ರಾಜ್ಯವನ್ನಾಳುವುದಕ್ಕೆ ಸಮರ್ಥನಾದ ಬಾಲಕನನ್ನು ನಾನೇ ಪರೀಕ್ಷಿಸಿ, ತಮಗೆ ತೋರಿಸು