ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಭೀಮಣಿಮಂಜರಿ. ತೇನೆ " ಎಂದು ಹೇಳಿ, ಅವನು ಅನೇಕ ಬಾಲಕರನ್ನು ಕರೆಯಿಸಿ, ಅವರೆಲ್ಲರನ್ನೂ ಒಂದು ಕೋಣೆಯಲ್ಲಿ ಇರಿಸಿ ದನು, ಅವರ ಸಮೀಪದಲ್ಲಿ ವಿಧವಿಧವಾದ ಭೂ ಪ ದಾರ್ಥಗಳನ್ನೂ, ಆಟದ ವಸ್ತುಗಳನ್ನೂ, ಅನೇಕವಿಧ ಆ ಯುಧಗಳನ್ನೂ ಇರಿಸಿ (ನಿಮಗೆ ಇಷ್ಮವಾದ ಪದಾರ್ಥಗ ಳನ್ನು ತೆಗೆದುಕೊಳ್ಳಿ ರೆಂದು, ಆ ಬಾಲಕರಿಗೆ ಹೇಳಿದನು. ಆಮೇಲೆ ಅವರೆಲ್ಲರಲ್ಲಿಯ ಅರಿ ಕುಠಾರದ ದೇವರಾಜ ಪುತ್ರನಾದ ಚಾಮರಾಜನೆಂಬ ಚಿಕ್ಕ ಹುಡುಗನು ಒಂದು ಖಡ್ಗ ವನ್ನೂ, ಒಂದು ದರ್ಪಣವನ್ನೂ ತೆಗೆದುಕೊಂಡ ನಂತೆ ! ಅದರಮೇಲೆ ಆ ಚಿಕ್ಕ ಹುಡುಗನನ್ನು ಲಕ್ಷ ಮಣ್ಣಿಯವರು ದತ್ತು ಮಾಡಿಕೊಂಡರು. ಮೂರು ಸಂ ವತ್ಸರ ಪ್ರಾಯವುಳ್ಳ ಆ ಬಾಲಕನನ್ನು ನಾಮಮಾತ್ರಕ್ಕೆ ರಾಜನನ್ನಾಗಿ ಮಾಡಿ, ಹೈದರನು ರಾಜ್ಯಭಾರವನ್ನೆಲ್ಲಾ ತಾನೇ ಮಾಡುತಿದ್ದನು. “ ಮಹಾರಾಣಿ ಲಕ್ಷಮ್ಮಣ್ಣಿ ಗೆ ಈ ಕಪಟವೆಲ್ಲವೂ ತಿಳೆದಿದ್ದರೂ ಹೈದರನ ಜೊತೆಯಲ್ಲಿ ಹೋರಾಡುವುದಕ್ಕೆ ಅವಕಾಶವಿಲ್ಲದೆ ಇತ್ತು. ಆದ್ದರಿಂದ ಹೈದರನಲ್ಲಿ ಬಹಿರಂಗವಾಗಿ ವಿರೋಧವನ್ನು ಬೆಳೆಸುವುದು ದುಸ್ತರವೆಂದು ಎಣಿಸಿ, ಆ ಚತುರ ರಾಣಿಯು ಗುಪ್ತವಾಗಿ ಪರರಾಜರೊಡನೆ ಸಂಧಿಮಾಡಿಕೊಂಡು, ಹೈದರನನ್ನು ಹದ ಚ್ಯುತನನ್ನಾಗಿ ಮಾಡಬೇಕೆಂದು ನೆನಸಿದಳು. ಅದಕ್ಕಾ ಗಿ ಆಕೆಯು, ಚನ್ನಪಟ್ಟಣದ (ಮದ್ರಾಸ್) ಗೌರರಾಗಿದ್ದ ಸಿಗಲ್ ದೊರೆ (Lord Pigot) ಯೊಂದಿಗೆ ಗುಪ್ತವಾಗಿ ಪತ್ರ ವ್ಯವಹಾರವನ್ನು ಜರುಗಿಸಲು ಯತ್ನ ಮಾಡಿದಳು, ಮೈಸೂರು ರಾಜ್ಯವನ್ನು ಮುಸಲ್ಮಾನರ ಕೈಯಿಂದ ದಕ್ಕಿ