ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಮಹಾರಾಣಿ ಲಕ್ಷಮ್ಮಣ್ಣಿ. ವಕನು ಸ್ವಾಮಿ ಹಿಯಾಗಿ, ಹೈದರನ ಮಗನಿಗೆ ತಿಳಿ ಯಪಡಿಸಿದನು. ಹೈದರನು 1782ನೇ ಡಿಶಂಬರು 7ರಲ್ಲಿ ಆರ್ಕಾಡು ಬಲಿ ಮೃತನಾದನು, ಟವೂ ಲಕ್ಷಮ್ಮಣ್ಣಿ ಮಾಡಿದ ಪಿತೂರಿಸಂಗತಿಯ ನ್ನು ಕೇಳಿ, ಬಗಳ ಕೋಸವುಳ್ಳವನಾಗಿ, 1783ನೇ ಸಂವ ತೃರದಲ್ಲಿ ರಾಣಿಗೆ ಅನುಕೂಲರಾದವರೆಲ್ಲರನ್ನೂ ಬಹಳ ಬಾಧೆಪಡಿಸಿ, ಕಾರಾಗೃಹ ಬದ್ದ ರನ್ನಾಗಿ ಮಾಡಿದನು. ಅವರಲ್ಲಿ ಅನೇಕರನ್ನು ಯಮಸದನಕ್ಕೆ ಕಳುಹಿಸಿದನು. ಹೀಗೆ ತನ್ನ ಪ್ರಯತ್ನಕ್ಕೆ ವಿಘ್ರವು ಬಂತೆಂದು ಲಕ್ಷ ಮಣಿಯವರು ತಿಳಿದು, ಹಿಂದಿನ ಪ್ರಯತ್ನಗಳನ್ನು ಬಿಡದೆ ಅಂತರಂಗದಲ್ಲಿಯೇ ಕಂಪೆನಿಯವರಿಂದ ಉತ್ತರ ಪ್ರತ್ಯುತ್ತರಗಳನ್ನು ನಡೆಸುತ್ತಾ ಟಿಪ್ಪುವಿನ ನಾಶಪ್ರಯ ತವನ್ನು ನಡೆಸುತ್ತಲೇ ಇದ್ದಳು. ಆಕೆಯು ಅಬಲೆ ಯಾಗಿದ್ದರೂ, ತನ್ನ ಪ್ರಯತ್ನಗಳಿಗೆ ಅನೇಕವಿಘ್ನಗಳು ಅಡ್ಡಬರುತ್ತಿದ್ದರೂ ಧೈರ್ಯವನ್ನು ಬಿಡಲಿಲ್ಲ. ಹಾಗಿ ರುವುದು ಸಾಮಾನ್ಯವಾದುದಲ್ಲ. ಪುರುಷರಿಗಾದರೂ ಇಂಧಾ ಧೈರ್ಯವಿರುವುದು ಕವು. ಆ ಸಮಯದಲ್ಲಿ ( ಟಪ್ಯೂ?” ಎಂದರೆ ಇಂಗ್ಲೀಷಿನವರೂ ಕೂಡ ಅವನನ್ನು (( ಮೈಸೂರು ಹೆಬ್ಬುಲಿ ” ಯೆಂದು ಹೇಳಿಕೊಳ್ಳುತ್ತಿದ್ದ ರು. ಅಂಥಾ ದುಷ್ಕಾಲದಲ್ಲಿಯೂ ಆ ವೃದ್ದರ್ರಾಸಿಯು ಟಿಪ್ಪು ವನ್ನು ನಶಿಸುವಂತೆ ಮಾಡಿ, ಮೈಸೂರನ್ನು ಮರಳಿ ಸಂಪಾ ದಿಸಬೇಕೆಂಬ ಧೈರ್ಯವನ್ನೂ, ಇಚ್ಛೆಯನ್ನೂ, ಸ್ಪದೇ ಶಾಭಿಮಾನವನ್ನೂ ಬಿಡದೆ ಇದ್ದಳು. ಆಹಾ ! ಇಂಥ ಧೈ ರ್ಯವು ದುರ್ಲಭವಲ್ಲವೆ ?