ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಭಾರತ ಸಾಧೀಮಣಿಮಂಜರಿ. ನೇಕ ವಿಧವಾದ ಬಾಧೆಗಳನ್ನು ಅನುಭವಿಸುತ್ತಲೇ ಇರುವೆ ವು. ಅವನು ನಮ್ಮಗಳಿಗೆ ದಿನದಿನಕ್ಕೂ ಅಧಿಕ ದುಃಖವ ನ್ನುಂಟುಮಾಡುತ್ತಾನೆ. ಸ್ಫೋಟಕ ವಿಷ ಬಿಟ್ಟು ಚಾ ಮರಾಜ ಒಡೆಯರನ್ನು ಗುಪ್ತವಾಗಿ ಕೊಂದನು, ನಮ್ಮ ನ್ನು ರಾಜಮಂದಿರದಲ್ಲಿ ಇರಲಿಸದೆ ಅಲ್ಲಿಂದ ಹೊರ ಡಿಸಿದನು, ನಾವು ಅಲ್ಲಿಂದ ಬಂದಾಗ ಅಲ್ಲಿದ್ದ ಕಾವ ಶಿನವರು ನಮ್ಮನ್ನು ಪರೀಕ್ಷೆ ಮಾಡಿ ಅಗೌರವ ಹಡಿಸಿ ದರು, ಅವರು ನಮ್ಮ ಮೈಮೇಲಿದ್ದ ನಗಗಳೆಲ್ಲವನ್ನೂ ತೆಗದುಕೊಂಡು, ನಮಗೆ ಉಟ್ಟುಕೊಳ್ಳುವುದಕ್ಕೆ ಹಳೇ ವಸ್ತ್ರವನ್ನು ಕೊಟ್ಟರು. ನಮಗೆ ಕಂಠಿ ರವ ಅರಸಿ ನವರ ಹಳೇಮನೆಯ ಒಂದು ಭಾಗದಲ್ಲಿರುವುದಕ್ಕೆ ಸ್ಥಳ ವನ್ನು ಕೊಟ್ಟರು, ನಮ್ಮ ಸುತ್ತಲೂ ಹರೆಯಿಟ್ಟರು ವರು, ನಮ್ಮ ದಾಸೀಜನಗಳಪೈಕಿ ನಮಗೆ ಹನ್ನೆರಡುಜನ ರನ್ನು ಮಾತ್ರ ಕೊಟ್ಟು, ಮಿಕ್ಕವರಲ್ಲಿ ಕೆಲವರನ್ನು ಮರ ಮದೀಯಮತಸ್ಥರನ್ನಾಗಿಮಾಡಿ, ಅವರಿಗೆ ಅತಿನಿಕೃ ಗಳಾದ ಕೆಲಸಗಳನ್ನು ಹೇಳಿದರು. ಇನ್ನು ಕೆಲವರನ್ನು ಅತಿದೂಹ್ಯವಾದ ವೃತ್ತಿಯನ್ನು ಅವಲಂಬನೆ ಮಾಡಿಸಿದ ರು. ಟಿಪ್ಪುವು ತೃರೆಯಲ್ಲಿಯೇ ನಮ್ಮನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿರುವನಂತೆ ! ಅವನು ನಮ್ಮ ಪ್ರಾಣಗಳ ನ್ನು ಯಾವಾಗತೆಗಿಯುವನೋ ತಿಳಿಯದು. ನಮಗೆ ಒ ಳ್ಳೆದನ್ನು ಮಾಡಬೇಕೆಂದೆಣಿಸಿ ನೀವು ಅನೇಕ ವಿಧವಾದ ಸಂಕಟಗಳನ್ನು ಅನುಭವಿಸಿದಿರಿ, ನಮಗೋಸ್ಕರವಾಗಿ ನೀವು ಇಂಗ್ಲಿಷಿನವರ ಸಂಗಡ ಸ್ನೇಹಬಳಸುವದಕ್ಕಾಗಿ ರ್ಜಾಸರ್ವ (John Sullivan) ರವರೊಡನೆಯೂ,