ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಮಹಾರಾಣಿ ಲಕ್ಷಮ್ಯ. ಶ್ರೀರಂಗನಾಧನು ತಪ್ಪದೆ ನಿಮಗೆ ಸಹಾಯಮಾಡುವನೆಂ ದು ನಂಬುವೆವು, 2) ಆ ಕಾಲದಲ್ಲಿ ಮೈಸೂರಿನಲ್ಲಿದ್ದ ರಾಜಕೀಯಸ್ಥಿತಿಗೆ ಳೆಲ್ಲವೂ ಈ ಉತ್ತರಗಳಿಂದ ಕಣ್ಣಿಗೆ ಎದುರಾಗಿದ್ದಂತೆ ಕಾಣಬರುತ್ತಿರುವುವು. ಅಂಥ ಭಯಂಕರಸಮಯದಲ್ಲಿ ನರವ್ಯನಾದ ಟಿಪ್ಪುವಿಗೆ ವಿರುದ್ಧವಾಗಿ ಪ್ರಯತ್ನಮಾ ಡುವುದಕ್ಕೆ ಎಷ್ಟು ದುಸ್ತರವಾಗಿದ್ದಿರುವುದೋ ಓದುವವ ರೇ ಈ ಉತ್ತರದಿಂದ ತಿಳಿಯಬಲ್ಲರು. ಇಂಧ ಮಹಾಸಂ ಕಟಸಮಯದಲ್ಲಿ ಲಕ್ಷ ಮಣಿಯು ಎಷ್ಟು ಮಾತ್ರವೂ ವ್ಯಸನದಡದೆ ನಿಸ್ಕರಂಗವಾದ ಸಮುದ್ರದಹಾಗೆ, ಶಾಂತಿ ಯನ್ನು ಅವಲಂಬಿಸಿಯ, ಅಚಲರರ್ವತದಹಾಗೆ ಧೈಯ್ಯ ವನ್ನು ಸ್ವೀಕರಿಸಿಯೂ ಇದ್ದುದನ್ನು ನೋಡಿ, ಎಂಥಾ ಧೀರನೂ ಗದ್ಗದಕಂಡವುಳ್ಳವನಾಗದೆ ಇರನು ಸ್ತ್ರೀಯರ ಅಚಲಧೈರ್ಯವು ಅತ್ಯುತ್ತು ಸ್ಮವಾದ್ದೆಂಬುದು ಈ ಆ ದಾಹರಣೆಯಿಂದ ತಿಳಿಯಬರುವುದು. ತರುವಾಯ ಪೂನಾನೇಪೈಯವರೂ, ಹೈದರಾಬಾ ದು ನೈಜಾಮರೂ, ಇಂಗ್ಲಿಷಿನವರೂ ಕೂಡಿ, 1799 ಮೇವ ರುಸದಲ್ಲಿ ಟಿಪ್ಪುವಿನಸಂಗಡ ಮಾಡಿದಯುದ್ಧವು ಚರಿತ್ರೆಯ ನ್ನು ಓದಿದವರಿಗೆಲ್ಲಾ ತಿಳಿದೇ ಇರುವುದು, ಆದ್ದರಿಂದ ಇ ಲ್ಲಿ ಆ ಯುದ್ಧದಸಂಗತಿಯನ್ನು ವರ್ಣಿಸಬೇಕಾಗಿಲ್ಲ : ರಂಗಪಟ್ಟಣದಲ್ಲಿ ನಡೆದ ಘೋರಯುದ್ಧದಲ್ಲಿ ಟಿಪ್ಪುವು ಮೇ ತಿಂಗಳು ನಾಲ್ಕನೇ ತಾರೀಖಿನಲ್ಲಿ ಮೃತಿಹೊಂದಿದನಾದ 8ಂದ, ಮೈಸೂರು ಸಿ೦ಹಾಸನವು ಬಂಧಮುಕ್ತವಾಯಿತು.