ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ. ಪ್ರಥಮಾಂಕ ಒನನ ಮತ ಬಾ' ವು. ೧. ಬೊಂಬಾಯಿ ಪ್ರಾಂತದಅಹಮದ್ ನಗರವೆಂಬ ತಾಲ್ಲೂ ಕಿನೊಳಗೆ ಪಾಥರವಡೀ ಎಂಬ ಚಿಕ್ಕ ಗ್ರಾಮ. ವುಂಟು ಈ ಗ್ರಾಮದಲ್ಲಿ ಪೂ: Fಳಗೆ ಆನಂದರಾವ್ ನಿಂಧಿಯ. ನ೦ಬ ಒಬ್ಬ ಮರಾಟೆಯ ಗೃಹಸ್ಸನಿದ್ದನು. ಇವನು ಆ ಗ್ರಾಮದಲ್ಲಿ ದೊಡ್ಡ ಮನುಷ್ಯನೆಂದು ಹೆಸರು ಪಡೆದಿದ್ದನು. ಇವನು ಧನವಂತನಲ್ಲದಿದ್ದುದರಿಂದ, ವ್ಯವಸಾಯ ಮಾಡಿ ಕೊಂಡು ಜೀವನ ಮಾಡುತ್ತಿದ್ದನು. ಇವನ ಹೆಂಡತಿಯು ಸ್ವಭಾವದಲ್ಲಿ ಇವನನ್ನೇ ಹೋಲಿದ್ದಳು. ಸತ್ವಗುಣಪ್ರಧಾನ ರಾದ ಈ ದಂಪತಿಗಳಿಗೆ, ೧೭೩೩ನೆಯ ಸಂವತ್ಸರದಲ್ಲಿ ಒಂದು ಕನ್ಯಾ ರತ್ನವು ಹುಟ್ಟಿತು. ಈ ಹುಡುಗಿಗೆ ಇವರು ಅಹಲ್ಯ ಎಂದು ಹೆಸರನ್ನಿಟ್ಟರು. ಇವಳೇ ಕರಿತ್ರನಾಯಿಕೆಯಾದ ಅಹಲ್ಯಾಬಾಯಿ. ಇವಳು ಆಮೇಲೆ ತೋರಿಸಿದ ಅಸಮಾನ ಸದ್ಗುಣಗಳನ್ನು ಕಂಡು, ಇವಳು ಸಾಮಾನ್ಯ ಸ್ತ್ರೀಯಲ್ಲ ವೆಂತಲೂ, ಅವತಾರ ಮೂರ್ತಿಯೆಂತಲೂ, ಮಹಾರಾಷ್ಟ್ಯ. ಗ್ರಂಥಕರ್ತರನೇಕರು ದೇವಿ ಅಹಲ್ಯಾಬಾಯಿಯೆಂದು ನಿಶ್ಚ ಯಿಸಿದ್ದಾರೆ. ಇವಳು ಜಗದಂಬೆಯ ಒಂದು ಅವತಾರವೆಂದು ಹೀಗೆ ಒಂದು ಕಥೆ ಹೇಳುವರು. ೨. ಬಹಳ ದಿವಸಗಳವರೆಗೂ ಆನಂದರಾವಿಗೆ ಸಂತಾನ ವಿಲ್ಲದಿತ್ತಂತೆ. ಆಗ, ಒಂದು ದಿನ ಅವನ ಹೆಂಡತಿಯು ಚಿಂತಾ ಕ್ರಾಂತಳಾಗಿರಲು, ಅವರ ಮನೆಗೆ ಒಬ್ಬ ಬೈರಾಗಿಯು ಬಂದ