ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾನ್ನೀ ಮಣಿಮಂಜರಿ, ನಂತೆ. ಅವಳು ಚಿಂತಾಕುಲಿತಳಾಗಿರುವ ಕಾರಣವನ್ನು ವಿಚಾರಿಸಿ, ನೀವು ಕೊಲ್ಲಾಪುರಕ್ಕೆ ಹೋಗಿ, ಅಲ್ಲಿ ಜಗದಂಬೆ ಯನ್ನು ಸೇವಿಸಿದ ಪಕ್ಷದಲ್ಲಿ ಸಂತಾನವುಂಟಾಗುವುದು, ಎಂದು ಹೇಳಿ ಹೊರಟುಹೋದನಂತೆ. ಆಂಧ್ರದೇಶದಲ್ಲಿ ಬೆಜವಾಡದ “ಕನಕದುರ್ಗಿಯೆಂಬ” ದೇವತೆಯು ಹೇಗೆ ಪ್ರಖ್ಯಾತಿಯನ್ನು ಪಡೆದಿರುವಳೋ, ಹಾಗೆಯೇ ಮಹಾರಾನ್ಮ ದೇಶದಲ್ಲಿ ಕೊಲ್ಲಾಪುರದ ಜಗದಂಬೆಯು” ಬಹು ಪ್ರಖ್ಯಾತಿಯುಳ್ಳವ ೪ಾಗಿರುವಳು. ಬೈರಾಗಿ ಹೇಳಿದ ಪ್ರಕಾರ ಆನಂದರಾವೂ, ಅವನ ಪತ್ನಿಯ ಕೊಲ್ಲಾಪುರಕ್ಕೆ ಹೋಗಿ, ಅಲ್ಲಿಯ ಜಗ ದಂಬೆಯನ್ನು ಒಂದು ವರುಸದ ವರೆಗೂ ಪೂಜಿಸುತ್ತಿದ್ದರು. ವರುಷದ ಕೊನೆಯಲ್ಲಿ ಜಗದಂಬೆ ಆನಂದರಾವಿಗೆ ಸ್ವದಲ್ಲಿ ಕಾಣಿಸಿಕೊಂಡು, “ನೀನು ಸಂವತ್ಸರದಿಂದಲೂ ದೃಢಭಕ್ತಿ ಯಿಂದ ಮಾಡಿದ ಪೂಜೆಗೆ ಸಂತುಷ್ಯಳಾದೆನು. ಇನ್ನು ನೀನು ನಿನ್ನ ಗ್ರಾಮಕ್ಕೆ ಹೋಗಬಹುದು. ನಿನ್ನ ಕೋರಿಕೆ ನೆರವೇರುವುದಕ್ಕೆ ನಾನೇ ನಿನ್ನ ಹೊಟ್ಟೆಯಲ್ಲಿ ಜನಿಸುವೆನು.” ಎಂದು ಹೇಳಿದಳಂತೆ, ಆನಂದರಾವಿಗೆ ಇ೦ಥ ಸ್ವಪೈನಾ ದೊಡನೆಯೇ ಅವನ ಹೆಂಡತಿಗೂ ಕೂಡ ಇಂಥ ಸ್ವಪ್ನವೇ ಉಂಟಾಯಿತಂತೆ. ತರುವಾಯ ಸ್ವಲ್ಪ ದಿನಗಳಲ್ಲಿಯೇ ಅವನ ರಿಗೆ ಜಗದಂಬೆಯ ಅಂಶದಿಂದ ಅಹಲ್ಯಾಬಾಯಿ ಹುಟ್ಟಿದ ೪ಂತೆ. ಹೀಗೆ ಅಹಲ್ಯಾಬಾಯಿ ದೇವತಾಂಶ ಭೂತಗಳೆಂದು ಸ್ಥಾಪಿಸುವುದಕ್ಕೆ, ಅನೇಕ ಕಥೆಗಳನ್ನು ಹೇಳುವರು. ೩, ಈಸಂಗತಿಗಳೆಲ್ಲಾ ನಿಜವಲ್ಲದಿದ್ದರೂ, ಇದರಿಂದ ಅಹ ಲ್ಯಾಬಾಯಿಯು ದೇವತೆಗಳಿಗೆ ಶೋಭಿಸುವ ಸದ್ಗುಣ ಸಂಪನ್ನ