ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ. ೪ಾದ್ದರಿಂದ, ಲೋಕದವರಿಗೆ ಆಕೆಯಲ್ಲಿ ಅಮಿತ ಪೂಜ್ಯಭಾವವು ಉಂಟಾಗಿತ್ತೆಂದು ತಿಳಿಯಬಹುದು. ಅಹಲ್ಯಗೆ ಐದು ಸಂವ ತೃರವಾದ ತರುವಾಯ, ಆಕೆಯಲ್ಲಿ ಸದ್ಗುಣಗಳ ಅಂಕುರವು ಕಾಣಿಸಲು ಪ್ರಾರಂಭವಾಯಿತು. ತನ್ನ ಜತೆಯಲ್ಲಿ ಆಡುವು ದಕ್ಕೆ ಬರುವ ಅಕ್ಕಪಕ್ಕದ ಮಕ್ಕಳನ್ನು ಬಹಳವಾಗಿ ಪ್ರೀತಿ ಸುತ್ತಿದ್ದಳು. ಅವಳಿಗೆ ತಿನ್ನುವುದಕ್ಕೆ ಯಾರಾದರೂ ಯಾವ ಪದಾರ್ಥವನ್ನು ಕೊಟ್ಟ ರೂ, ಅದರ ಒಂದು ಭಾಗವನ್ನು ತನ್ನ ಗೆಳತಿಯರಿಗೆ ಕೊಟ್ಟ ಹೊರತು, ತಾನು ಭುಂಜಿಸುತ್ತಿರ ಲಿಲ್ಲ. ಯಾವ ಪದಾರ್ಥವನ್ನಾದರೂ ಈಶ್ವರನ ಹಾಗೆ ಭಾವಿಸಿ, ಅದನ್ನು ಪೂಜಿಸುವುದು ಆಕೆಗೆ ಪ್ರಿಯವಾದ ಆಟ ಗಳಲ್ಲಿ ಒಂದಾಗಿತ್ತು, ಮತ್ತು ಚಿಕ್ಕ ವಯಸ್ಸಿನಿಂದಲೂ, ಈಕೆಗೆ ಸತ್ಯದಲ್ಲಿ ವಿಶೇಷ ಭಕ್ತಿ ಇತ್ತು. ಈಕೆಯು ಯಾವಾ ಗಲೂ ಅಸತ್ಯವಾಡಿದವಳಲ್ಲ. ಯಾರಾದರೂ ಅಸತ್ಯವನ್ನು ಹೇಳಿದ ಪಕ್ಷದಲ್ಲಿ ಅಹಲ್ಯಾಬಾಯಿ ಅವರ ಸಂಗಡ ಮಾತನಾ ಡುವುದನ್ನೇ ಬಿಟ್ಟು ಬಿಡುತ್ತಿದ್ದಳು. ೪. ಆ ಗ್ರಾಮದಲ್ಲಿ ಒಂದು ಚಿಕ್ಕ ಮಠವಿತ್ತು. ಆ ಮಠವು ಈಗಿನ ಪಾಠಶಾಲೆಗಳಂತಲ್ಲಗೆ, ನಮ್ಮ ದೇಶದಲ್ಲಿ ಜೀವನಕ್ಕೊಸ್ಕರ ಕೆಲವರು ಬಡಬ್ರಾಹ್ಮಣರು ಚಿಕ್ಕ ಚಿಕ್ಕ ಕುಗ್ರಾಮಗಳಲ್ಲಿ ಇಟ್ಟಕೊಂಡಿರುವ ಕೊಲೀ ಮಠಗಳ ಹಾಗೆ ಇತ್ತು. ಆದರೆ, ಪಾಪಭೀತನಾಗಿಯೂ, ಸ್ವಕರ್ಮ ನಿಷ್ಠೆಯುಳ್ಳವನಾಗಿಯೂ, ಈಶ್ವರ ಭಕ್ತಿಯುಳ್ಳವನಾಗಿಯೂ ಇರುವ ಒಬ್ಬ ಬಡಬ್ರಾಹ್ಮಣನು ಆ ಮಠದಲ್ಲಿ ಗುರುವಾಗಿ ಇದ್ದನು. ಇವನಿಗೆ ಹುಡುಗರಿಂದ ಅಮಾವಾಸ್ಯೆ, ಪೌರ್ಣ