ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ. ಯನ್ನು ಅಹಲ್ಯ ಎಂಬ ಸಾಮಾನ್ಯ ಹೆಸರಿನಿಂದ ಕರೆಯದೆ “ಅಹಲ್ಯಾಬಾಯಿ”, ಎಂಬ ಹೆಸರಿನಿಂದಲೇ ಕರೆಯೋಣ. ಹೀಗೆ ಅಹಲ್ಯಾಬಾಯಿಯ ಚರಿತ್ರ ನಾಟಕದಲ್ಲಿ ಪ್ರಥಮಾಂ ಕವು ಸಮಾಪ್ತಿಯಾಯಿತು. ಆದರೆ, ಎರಡನೇ ಅಂಕದೊ ೪ಕ್ಕೆ ಹೋಗುವುದಕ್ಕೆ ಮುಂಚೆ ಅಹಲ್ಯಾಬಾಯಿಯ ಭರ್ತ ನಾದ ಖಂಡೇರಾಯನ ವಂಶವನ್ನು ಕುರಿತು ಕೊಂಚ ಬರಿ ಯಲು ಅಪ್ರಸಂಗ ವಾಗಲಾರದೆಂದು ಇಲ್ಲಿ ಸಂಗ್ರಹವಾಗಿ ಬರೆಯುವೆವು. - ೯, ಪೂನಾಪಟ್ಟಣದ ಸವಿಾಪದಲ್ಲಿ “ಹೋಳ” ಎಂಬ ಚಿಕ್ಕ ಹಳ್ಳಿ ಇತ್ತು. ಅಲ್ಲಿ “ಖಂಡೋಜಿ” ಎಂಬ ಗೊಲ್ಲರವನು ವಾಸ ಮಾಡಿಕೊಂಡಿದ್ದನು. ಅವನಿಗೆ ಮಲ್ಲಾರಿ ಎಂಬ ಮಗನು ಹುಟ್ಟಿದನು. ಆಮಗನು ಚಿಕ್ಕತನದಲ್ಲಿರುವಾಗಲೇ ಖಂಡೋ ಜಿಯು ಮೃತಿ ಹೊಂದಿದನು. ತಂದೆ ಮೃತಿ ಹೊಂದಿದ ನಂತರ ಮಲ್ಲಾರಿಯು ತನ್ನ ಸೋದರಮಾವನ ಮನೆಯ ಲ್ಲಿಯೇ ಬೆಳೆಯುತ್ತಿದ್ದನು. ಅಲ್ಲಿ ಈತನು ಮಾವನ ಹಸುಗ ಳನ್ನು ಮೇಯಿಸುತ್ತಿದ್ದನು. ಚಿಕ್ಕತನದಿಂದ ಅನೇಕ ವೇಳೆ ಗಳಲ್ಲಿ ಮಲ್ಲಾರಿಯ ಸಾಹಸವೂ, ಕೌರವೂ, ಆಜ್ಞಾಧಾರಕ ತ್ಯವೂ, ಕಂಡು ಬಂದುವು. ಆಗ ಅವನು ತನ್ನ ಸೋದರ ಳಿಯನನ್ನು ಹಸುಗಳನ್ನು ಕಾಯಬೇಡವೆಂದು ಹೇಳಿ, ಅವ ನಿಗೆ ಬಾದಾಡೆ ಸೈನ್ಯಾಧಿಪತಿಯ ಸೈನ್ಯದಲ್ಲಿ ಒಂದು ಚಿಕ್ಕ ಜವಾನ ಕೆಲಸವನ್ನು ಸಂಪಾದಿಸಿ ಕೊಟ್ಟನು. ಆಗಿನಿಂದ ಮಲ್ಲಾರಿಯ ಕೌಲ್ಯವು ಕಂಡುಬರುತ್ತಿತ್ತು. ಎಷ್ಟು ಶೌಲ್ಯ ಉಂ ಟಾಗಿದ್ದರೂ, ಈ ಗುಣವನ್ನು ತೋರಿಸುವುದಕ್ಕೆ ಯೋಗ್ಯ