ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಮೀ ಮಣಿ ಮಂಜರಿ. ೧೧ ಸಿಗೆ ಸೇವೆಮಾಡಿ ಆತನ ಆಜ್ಞೆಯನ್ನು ತಪ್ಪದೆ ಕೇಳುತ್ತ, ದಿನ, ದಿನವೂ ಆತನ ಕೃಪೆಯನ್ನು ಪಡೆದಳು. ಅದನ್ನು ನೋಡಿ ಮನೆಯಲ್ಲಿರುವವರಿಗಿಂತಲೂ ಈಕೆಯನ್ನು ಮಾವನು ಅಧಿಕ ವಾಗಿ ಪ್ರೀತಿಸುತ್ತಿದ್ದನು. ಈಕೆಯು ಮನೆಗೆ ಬಂದಾಗಿನಿಂ ದಲೂ ಅನೇಕ ಯುದ್ಧಗಳಲ್ಲಿ ಜಯವು ಸಂಪಾಸ್ವನಾದ್ದರಿಂದ ಮಲ್ಲಾರಿರಾವು ತನ್ನ ಸೊಸೆಯನ್ನು ಜಯಶ್ರೀಯ ಅಪರಾವತಾ ರನೆಂದು ಎಣಿಸುತ್ತಿದ್ದನು. ಯಾವ ಯುದ್ಧಕ್ಕೆ ಹೊರಟರೂ ಅಹಲ್ಯಾಬಾಯಿಯ ಆಜ್ಞೆಯನ್ನು ತೆಗೆದುಕೊಂಡು, ಆಕೆಯು ವಿಜಯ ರಕುವುದೆಂದು ಹೇಳಿದ್ದಾ ದರೆ ಯುದಗಳಿಗೆ ಹೋಗುವನು. ಹೀಗೆ ವಿನಯಾದಿ ಸದ್ಗುಣಗಳಿಂದ ಅಹಲ್ಯಾ ಬಾಯಿಯು ಮಾವನವರ ಪೂರ್ಣ ಕೃಪೆಯನ್ನು ಹೊಂದಿದಳು, ೧೩. ಈಕೆಯ ಅತ್ತೆಯಾದ ಗೌತಮಾಬಾಯಿಯು ಗೃಹ ಕೃತ್ಯಗಳಲ್ಲಿ ಬಹು ತಿಳಿವಳಿಕೆಯುಂಟಾಗಿದ್ದರೂ ಬಹಳ ಕೋ ಸವುಳ್ಳವ', ವಿವಾಹವಾಗುತ್ತಲೇ ಸಕ. ಬರಿಯು ೮ ಅಹಿಯ , ಅತ್ತೆಯ ಕೋಸಸ್ಯಭಾವವನ್ನು ತಿಳಿದು ಕೊಂಡು, ಆರ್ಕೆ' ಕೊಸಪು ಬಾರದ ಹಾಗೆ ವರ್ತಿಸುತ್ತಿದ್ದಳು. ಯಾವುದನ್ನು ಕುರಿತಾಗಲಿ ಅತ್ತೆಯವರಿಗೆ ಎದುರುಮಾತನಾಡು ತಿರಲಿಲ್ಲ. ಯಾವಾಗಲೂ ಅತ್ತೆಯವರ ಇಸ್ಮಪ್ರಕಾರನ ಡೆದುಕೊಳ್ಳುತ್ತಲೂ, ಅತ್ತೆಯವರ ಸದ್ಗುಣಗಳನ್ನು ಗ್ರಹಿಸಿ ಸುತ್ತಲೂ, ಆಕೆಯಿಂದ ಯಾವಾಗಲೂ ಆಶೀಶ್ವಾದವನ್ನೇ ಪಡೆ ಯುತ್ತಲೂ ಇದ್ದಳು. ಇಂಥ ಚಿಕ್ಕವಯಸ್ಸಿನಲ್ಲಿ ಹೀಗೆ ವರ್ತಿ ಸುವಾಕೆಯು, ಎಂಥ ವಿದ್ಯಾವಿಧಿಗಳುಳ್ಳವಳೋ ಎಂಬುದನ್ನು ವಾಚಕರೇ ಯೋಚಿಸಬಹುದು.