ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨ ಅಹಲ್ಯಾಬಾಯಿ. ೧೪. ಗೌತಮಾಬಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಅ ವರಿಬ್ಬರೂ ಖಂಡೆರಾಯನಿಗಿಂತ ದೊಡ್ಡವರೇ, ಖಂಡೇರಾಯರ ಗೊಡ್ಡ ಅಕ್ಕನ ಹೆಸರು ಹರಕ್ಬಾಯಿ, ಚಿಕ್ಕ ಅಕ್ಕನ ಹೆ ಸರು ಔದಾಬಾಯಿ. ಇವರನ್ನು ಅಹಲ್ಯಾಬಾಯಿ ತನ್ನ ಸ್ವಂತ ಅಕ್ಕಂದಿರಹಾಗೆ ನೋಡುತಿದ್ದಳು. ಇದರಿಂದ, ಅವರೂ ಆ ನಾದಿನಿಯಮೇಲೆ ಅತ್ಯಂತಾನುರಾಗದಿಂದ ಇದ್ದರು. ಹಿಂದೆ ರಾ ಯರಮದುವೆ ಆಗುವದಕ್ಕೆ ಮುಂಚೆಯೇ ಇವರಿಗೆ ವಿವಾಹವಾ ಗಿದ್ದದ್ದರಿಂದ, ಅಹಲ್ಯ ಬಂದ ತರುವಾಯ, ಇವರು ಬಹುಶಃ ಅತ್ತೆಮನೆಯಲ್ಲಿಯೇ ಇರುತ್ತಿದ್ದರು. ಆದರೂ ಅಹಲ್ಯಾಬಾಯಿ ಅವರನ್ನು ಆಗಾಗ್ಗೆ ಕರೆಸಿಕೊಂಡು, ಬಹಳ ದಿವಸಗಳ ನ ರೆಗೂ ತನ್ನ ಹತ್ತಿರ ಇರಿಸಿಕೊಂಡು, ಅವರಿಗೆ ತಾನುಕಲಿತ ವಿದ್ಯೆಯನ್ನು ಕಲಿಸಿದಳು. ತಾನು ಕೇಳಿರುವ ಕಥೆಗಳೆಲ್ಲ ವನ್ನೂ ಅವರಿಗೆ ಹೇಳಿದಳು. ಹೀಗೆ ಇವರು ಮೂವರೂ ನಿಷ್ಕಪಟವಾದ ಪ್ರೇಮದಿಂದ, ಅಕ್ಕತಂಗಿಯರಹಾಗೆ ವರ್ತಿಸು ತಿದ್ದರು. ಅಹಲ್ಯಾಬಾಯಿಗೆ ಸೇವೆ ಮಾಡುವದಕ್ಕಾಗಿ ಅನೇಕ ದಾಸದಾಸಿಯರಿದ್ದರೂ, ಅವರನ್ನು ಯಾವಾಗಲೂ ಬಾಧೆಪಡಿ ನಿದವಳಲ್ಲ. ಅವರನ್ನು ಎಂದಾದರೂ ಬೈದು ಅರಿಯಳು. ಎಲ್ಲ ರನ್ನೂ ಬಹುದಯೆಯಿಂದ ನೋಡುತ್ತಿದ್ದಳು. ತನಗೆ ಅತ್ತೆ ಮಾವಂದಿರು ಕೊಟ್ಟ ದ್ರವ್ಯವನ್ನು ತನ್ನ ಸೇವಕರ ಆಶತೀರಿ ಸುವುದಕ್ಕೋಸ್ಕರ ಖರ್ಚುಮಾಡುತಿದ್ದಳು. ಬಡವರ ಸಂ ತೋಷವನ್ನು ನೋಡಿ, ತಾನೂ ಸಂತೋಷ ಪಡುತ್ತಿದ್ದಳು. ಈ ಸದ್ದು ಣಗಳಿಂದಲೇ ತರುವಾಯ ಅಹಲ್ಯಾಬಾಯಿಯು ವಿ ಶೇಪ ಕೀರ್ತಿಯನ್ನು ಪಡೆದಳು.