ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಭಾರತ ಸಾಧೈ ಮಣಿಮಂಜರಿ, ಅಹಲ್ಯಾಬಾಯಿ ಕೆಲವು ಸಂವತ್ಸರಗಳು ಸೌಖ್ಯಸಮುದ್ರ ದಲ್ಲಿ ಮುಳುಗಿದಳು. ಓದುವರಿರಾ ! ಚರಿತ್ರೆನಾಟಕದ ಸೌಖ್ಯ ಪೂರಿತವಾದ ಎರಡನೇಅಂಕವು ಸಮಾಪ್ತಿಯ ಗಿದೆ. ಇನ್ನು ಮೂರನೇ ಅಂಕದ ಕಡೆಗೆ ಲೇಖಿಸಿಯನ್ನು ತಿರಿಗಿಸೋಣ ತೃತೀಯಅಂಕ ಅಸ೮ಬಾ ಧ ರೂ, ಆಕೆಯ ರಭ•ತ ಮಾಡುವ. ರ್ಗ, ಇದುವರೆಗೂ ಮನರಂಜಕವಾದ ವರ್ಣನೆಗಳನ್ನು ಕೇಳಿದ ವಾಚಕರೇ! ದುಃ ಪರಂಪರೆಗಳೊಡನೆ ವ್ಯಾಪ್ತವಾಗಿ ರುವ ವರ್ಣನಗಳನ್ನು ಮುಂದೆ ಕೇಳಲು ಧೈರ್ಯವನ್ನು ಅವ ಲಂಬಿಸಿ ಸಿದ್ಧರಾಗಿ. ಈ ಮೂರನೇ ಅಂಕದಲ್ಲಿ ಅಹಲ್ಯಾ ಬಾಯಿಯ ಕಸ್ಮಗಳನೇಕಗಳು ವರ್ಣಿಸಲ್ಪಟ್ಟಿದ್ದರೂ, ಯಾವ ಸತ್ಕಾರಗಳಿಂದ ಆಕೆಯ ಕೀರ್ತಿಯು ಅಜರಾಮರ ವಾಯಿತೋ, ಅಂತಹ ಕೃತ್ಯಗಳು ಕೂಡ ವರ್ಣಿಸಲ್ಪಡುವುವು ಆದುದರಿಂದ ಈ ಅಂಕವು ಶುಭಾ ಶುಭ ವರ್ಣನೆಗಳಿಂದ ತುಂಬಿ ಇರುವುದು, ೨೦. ಮೇಲೆ ಬರೆದ ಪ್ರಕಾರ ಅಹಲ್ಯಾಬಾಯಿಯು ಪರಮ ಸೌಖ್ಯವನ್ನು ಅನುಭವಿಸುತ್ತಿರುವಾಗ, ಎಲ್ಲಾ ಐಹಿಕ ಸುಖಗಳ ಹೇಗೆ ಕ್ಷಣಭಂಗುರವಾಗುವುವೋ, ಹಾಗೆ ಇವಳ ಸೌಖ್ಯಗಳೆಲ್ಲವೂ ಕ್ಷಣಿಕವಾದುವುಗಳಾಗಿರುತ್ತವೆ. ಆಕೆಯ ಸೌಖ್ಯವು ಕ್ಷಣಭಂಗುರವಾಯಿತು. ಅಂಥ ಸೌಖ್ಯದಲ್ಲಿ ಅಕೆಯು ಬಹು ದಿನಗಳು ಇದ್ದ ಪಕ್ಷದಲ್ಲಿ ಆಕೆಯ