ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈ ಮಣಿಮಂಜರಿ, ೧೭ ಇಂಥ ನಿಷ್ಟುರತೆಯನ್ನು ವಹಿಸಿ, ನನ್ನನ್ನೂ, ಮಕ್ಕಳನ್ನೂ ಬಿಟ್ಟು ಹೋಗಬಹುದೇ ?” ಹೀಗೆ ಅನೇಕ ವಿಧಗಳಿಂದ ಕೇಳಿ ಕೊಂಡು, ಅವಳಿಗೆ ಅನೇಕ ವಿಧವಾಗಿ ಸಮಾಧಾನ ಹೇಳಿ ಆಕೆಯು ಸಹಗಮನವನ್ನು ಮಾಡದ ಹಾಗೆ ಮಾಡಿದನು. ಆಗ ಅಹಲ್ಯಾಬಾಯಿ, ಲೋಕೋಪಕಾರವನ್ನು ಮಾಡುತ್ತಾ, ವೈಧವ್ಯದಲ್ಲಿಯೇ ಕಾಲವನ್ನು ಕಳೆಯಲು ನಿಶ್ಚಯಿಸಿದಳು. ೨೩. ಹಿಂದೂ ಸ್ತ್ರೀಯರಿಗೆ ವೈಧವ್ಯದಂಥಾ ನರಕವು ಬೇರೊಂದಿಲ್ಲ ಎಂಬುದು ಸಕಲ ಜನಗಳಿಗೂ ತಿಳಿದವಿಸ ಯವೇ ! ಹೀಗೆ ಹಿಂದೂ ವೈಧವ್ಯದಲ್ಲಿ ಅನುಪಮೇಯ ನರಕ ಕೂಪದಲ್ಲಿ ಮುಳುಗಿ, ಅಹಲ್ಯಾಬಾಯಿಯು ಈಶ್ವರಭಕ್ತಿ ಮೊದಲಾದ, ಸಾಧನೆಗಳಿಂದ, ಮಹಾಧ್ಯೆರದೊಡನೆ ಕಾಲ ವನ್ನು ಕಳೆಯುತ್ತಿದ್ದಳು. ಆದರೆ ಇವಳು ಎಷ್ಟು ಧೈಯ್ಯನ ನ್ನು ಅವಲಂಸುತ್ತಿದ್ದಳೋ ಅಸ್ಮಷ್ಟು ಅಧಿಕ ದುಃಖಗಳು ಬರುತ್ತಲಿದ್ದು ವು. ಹೀಗೆ ಕಸ್ಯಗಳನ್ನು ಅವಳಮೇಲೆ ತಂ ದಿದ್ದಕ್ಕೆ ಈಶ್ವರನನ್ನು ನಿಂದಿಸಕೂಡದು. ಏಕೆಂದರೆ ? ಹೀಗೆ ಅವಳಿಗೆ ಕಷ್ಟಗಳು ಪ್ರಾಪ್ತವಾಗದೆ ಇದ್ದಿದ್ದರೆ ಆ ನಾರೀಮಣಿಯ ಪ್ರಭಾವವು ಅಡಗಿಹೋಗುವದೆಂತಲೂ, ಆರ್ಯಸ್ತ್ರೀಯರಾದ ನಮಗೆ ನಮ್ಮಲ್ಲಿ ಇಂಥ ಸಾಧ್ಯೆಯರಿರುವ ರೆಂಬ ಅಹಂಕಾರಕ್ಕೆ ಅವಕಾಶವಿಲ್ಲದೆ ಹೋಗುವುದೆಂತಲೂ, ವಿದ್ಯೆ ಕಲಿತಸ್ತ್ರೀಯರು ಕಸ್ಮಸಮಯದಲ್ಲಿ ಸನ್ಮಾರ್ಗವನ್ನು ಬಿಡದೆ ಇರುವರೆಂತಲೂ, ಸಿದ್ದಾಂತಮಾಡುವುದಕ್ಕೆ ಈಶ್ವರನು ಕಸ್ಮಗಳನ್ನು ಅಹಲ್ಯಾಬಾಯಿಗೆ ಕೊಟ್ಟನೆಂದು ತಿಳಿಯ