ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಅಹಲ್ಯಾಬಾಯಿ. ದೂಷಣವಲ್ಲವು. ಅಂಥ ಜನಕಂಟಕನು ಮಗನಾದರೂ ಪುತ್ರ ಪ್ರೇಮವನ್ನು ತೊರೆದು ಜನಗಳಿಗೆ ಹಿತವಾಗುವುದಕ್ಕೆ ಅವನ ನ್ನು ವಧಿಸುವುದೇ ಅಧಿಕ ಭೂಷಣಾಸ್ಪದವು, ಯಾವುದು ಹೇ ಗಿದ್ದರೂ,ಮಾಲೆರಾವು ಸತ್ತದ್ದರಿಂದ ದೇಶಕ್ಕೆ ಬಹಳ ಮೇಲಾ ಯಿತೆಂದು ಹೇಳಲು ಸಂದೇಹವಿಲ್ಲ. ಹಾಗಲ್ಲದೆ ಅವನು ಜೀವಿಸಿ ದ್ದ ಪಕ್ಷದಲ್ಲಿ, ತದ್ದೇಶೀಯರಿಗೆ ಅನೇಕ ಕನ್ಮಗಳುಂಟಾಗಿ, ದೇಶವೆಲ್ಲವೂ ಹಾಳಾಗುತ್ತಿತ್ತು. ೨೭. ಅಹಲ್ಯಾಬಾಯಿಯವರ ಸದ್ದು ಣಗಳು:-ಮಾಲೇ ರಾವು ಮೃತಿಹೊಂದಿದೊಡನೆಯೇ, ರಾಜ್ಯವು ಯಾರ ಹೆಸರಿನಲ್ಲಿ ನಡೆಸಬೇಕೋ ಎಂಬ ವಿಚಾರಣೆಗೆ ಪ್ರಾರಂಭವಾಯಿತು. ಪೂನಾಪಟ್ಟಣದ ಪೇಪೈಯವರು ಇವರಿಗೆ ಪ್ರಭುಗಳಾದ್ದ ರಿಂದ, ಅವರಿಗೆ ಈ ವರ್ತಮಾನವನ್ನು ತಿಳಿಯಪಡಿಸಿದರು. ಆಗ ಮಾಧವರಾಯರು ಸೇವೆಯಾಗಿದ್ದರು. ಆದರೂ ಅಧಿಕಾ ರವೆಲ್ಲವೂ ರಘನಾಥರ ಕೈಯಲ್ಲಿತ್ತು. ಮಾಧವರಾಯರು ಯಾ ವಾಗಲೂ ನ್ಯಾಯಮಾರ್ಗ ಪ್ರವರ್ತಕರಾಗಿ, ಅನ್ಯಾಯಾರ್ಜ ನೆಯಲ್ಲಿ ಇಚ್ಛೆ ಇಲ್ಲದೆ ಇದ್ದರು. ರಘನಾಥರಾಯನು ತಿಳು ವಳಿಕೆಯುಳ್ಳವನಾದರೂ, ಅವನು ಭಿಕ್ಷುಕನ ಹಾಗೆ ಮೂರ್ಖ ತನವನ್ನೇ ಮಾಡುತ್ತಿದ್ದನು. ಮಾಲೆರಾವು ಕಾಲವಾದ ತರುವಾ ಯ ಅಹಲ್ಯಾಬಾಯಿಯವರಿಗೆ ಗಂಗಾಧರ ಯಶೋವಂತನು ಮಂತ್ರಿಯಾಗಿದ್ದನು. ಆತನು ಅಹಲ್ಯಾಬಾಯಿಗೆ ಹೀಗೆ ಉಪ ದೇಶಮಾಡಿದನು. “ ನಿಮ್ಮ ಸ್ವಗೋತ್ರನಾಗಿರುವ ಯಾವನಾದ ರೂ ಒಬ್ಬ ಚಿಕ್ಕ ಹುಡುಗನನ್ನು ದತ್ತು ತೆಗೆದುಕೊಂಡು ಅವ ನಿಗೆ ಈ ರಾಜ್ಯವನ್ನು ಸಮರ್ಪಿಸುವುದು; ಅವನು ದೊಡ್ಡವನಾ