ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಅಹಲ್ಯಾಬಾಯಿ, ಮತ್ತು ಕೀರ್ತಿಯುಂಟಾಗಲಾರದು” ಇಂಥ ವರ್ತಮಾನವನ್ನು ಕೇಳಿ ರಘೋಬನು ನಾಚಿಕೆ ಪಟ್ಟು, ಅಪಜಯವಾಗುವುದೋ ಏನೋ ಎಂದು ಯೋಚಿಸಿ, “ಅಹಲ್ಯಾಬಾಯಿಯವರನ್ನು ಪುತ್ರ ಮರಣದಿಂದ ಆದರಿಸುವುದಕ್ಕೆ ಬರುತ್ತೇನೆಯೇ ಹೊರತು ರಾ ಜ್ಯವನ್ನು ತೆಗೆದು ಕೊಳ್ಳಲು ಬರುವುದಿಲ್ಲವೆಂದು ವರ್ತ ಮಾನವನ್ನು ಹೇಳಿ ಕಳುಹಿಸಿದನು. ಸೈನ್ಯವೆಲ್ಲವನ್ನೂ ಹಿಂ ದೆಯೇ ನಿಲ್ಲಿಸಿ, ಕೆಲವುಜನಗಳೊಂದಿಗೆ ಇಂದೂರಿಗೆ ಬಂದು, ಅಹಲ್ಯಾಬಾಯಿ ಯನ್ನು ಆದರಿಸಿ, ಪೂನಾವಿಗೆ ಹೊರಟು ಹೋ ದನು. ಈ ಪ್ರಕಾರ ಅಹಲ್ಯಾಬಾಯಿ ಭರ್ತೃ, ಶ್ವಶುರ, ಪುತ್ರ ಮರಣ ಶೋಕಗಳಿಂದ ಬಹಳಚಿಂತೆಯ ಪಾಲಾಗಿದ್ದರೂ ಅ ದನ್ನು ಅಡಗಿಸಿ, ಅನೇಕ ಉಪಾಯಗಳನ್ನು ಆಲೋಚಿಸಿ, ರಘೋಬನಂತಹ ಅಸಮಾನ ಶೂರನನ್ನು ಸಹಿತ, ಯಾವ ಅಪಾ ಯವೂ ಮಾಡದೆ ಹೋಗುವಹಾಗೆ ಮಾಡಿದವಳಾದ್ದರಿಂದ, ಆಕೆಯು ಶೌಯ್ಯ, ಧೈರ, ಸಾಹಸಾದಿ ಗುಣಗಳುಳ್ಳವಳೆಂದು ಹೇಳಲು ಸಂದೇಹವಿಲ್ಲ. ೨೯, ಹೀಗೆ ರಾಜ್ಯದಲ್ಲಿ ಸಂಪೂರ್ಣಾಧಿಕಾರವು ಪ್ರಾಪ್ತ ವಾದ ತರುವಾಯ ೧೭೬೫ನೆಯ ಸಂವತ್ಸರದಿಂದ ೧೭೯ರ ವರೆಗೂ, (ಮೂವತ್ತು ವರುಷಗಳು) ರಾಜ್ಯವನ್ನು ಆಳಿ, ಅಹ ಲ್ಯಾಬಾಯಿ ಆ ಚಂದ್ರಾರ್ಕವಾಗಿ ಶಾಶ್ವತವಾದ ಕೀರ್ತಿಯನ್ನು ಸಂಪಾದಿಸಿಕೊಂಡಳು. ಆಕೆಯು ತನಗೆ ದೂರಬಂಧುವಾದ ತುಕೋಜಿರಾಯನೆಂಬುವನನ್ನು ತನ್ನ ವ ೦ತ್ರಿಯಾಗಿ ನೇಮಿ ಸಿಕೊಂಡಳು. ದಂಡೆತ್ತಿ ಹೋಗುವುದೂ, ಸೈನ್ಯಗಳನ್ನು ಕೂಡಿ