ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಅಹಲ್ಯಾಬಾಯಿ. ಸವಿಾಪಕ್ಕೆ ಕಳುಹಿಸಿದಳು. ಆ ರಾಜನ ಪರಾಭವವನ್ನು ಹೊಂದಿ ಅಹಲ್ಯಾಬಾಯಿಗೆ ಶರಣಾಗತನಾದನು. ಆಗ ಅವಳು ಆತನನ್ನು ಕ್ಷಮಿಸಿದಳು. 9 . ೩೬. ಮೂವತ್ತು ವರುಷಗಳವರೆಗೂ ಇವಳು ರಾಜ್ಯ ವನ್ನು ಆಳಿದಳು. ತನ್ನ ರಾಜ್ಯದಲ್ಲಿಯೂ, ಪರರಾಜ್ಯದ ಲ್ಲಿಯೂ ಇವಳಿಗೆ ಬಹುಮಾನ್ಯತೆಗಳಿದ್ದವು. ಇವಳ ರಾಜ್ಯ ದಲ್ಲಿ ಅಧಿಕಾರಿಗಳೆಲ್ಲರೂ ಇವಳಿಗೆ ಬಹಳ ಭಯಪಡ ತಿದ್ದರು. ಭೀಮದಾಸನೆಂಬ ಒಬ್ಬ ಸಾಹುಕಾರನು ಇವಳ ರಾಜ್ಯದಲ್ಲಿ ಅಪುತ್ರವಂತನಾಗಿ ಮೃತಿಹೊಂದಿದನು. “ಕಮಾಲೀಸದಾರ” ಎಂಬ ಅಧಿಕಾರಿಯು ಈ ಸಾಹುಕಾರನ ಪತ್ನಿಯನ್ನು ಅಂಕ ಕೇಳಿದನು. ಅವಳು ಲಂಚ ಕೊಡದಿದ್ದದರಿಂದ ಆ ಅಧಿಕಾರಿ ಈ ಧನವೆಲ್ಲವನ್ನೂ ಜಪ್ತಿ ಮಾಡುವೆನೆಂದು ಇವಳನ್ನು ಭಯ ಪಡಿಸಿದನು. ಈ ಸಂಗತಿ ತಿಳಿದಕೂಡಲೇ ಅಹಲ್ಯಾಬಾ ಯಿಯು ಆ ಅಧಿಕಾರಿಯನ್ನು ಅಧಿಕಾರದಿಂದ ತೊಲಗಿಸಿ, ಭೀಮದಾಸನ ಹೆಂಡತಿಗೆ ದತ್ತು ಪುತ್ರನನ್ನು ತೆಗೆದುಕೊಳ್ಳಬ ಹುದೆಂದು ಆಜ್ಞೆ ಮಾಡಿದಳು. ಅತ್ಯುಗ್ರ ಶಾಸನ, ಭೂತದಯೆ, ನ್ಯಾಯಬದ್ಧ ಮೊದಲಾದ ಪರಸ್ಪರ ವಿರುದ್ಯಾಭಾಸವೆಂಬ ಸದ್ಗುಣಗಳನ್ನು ಧರಿಸುವುದು ರಾಜರುಗಳಿಗೆ ಅತ್ಯಾವಶ್ಯಕ ವೆಂದು ಬೇರೆ ಹೇಳಬೇಕೆ ? - ೩೭. ಆಕೆಯಸ್ವಭಾವವು:-ಇದುವರೆಗೂ ಬರೆದ ವರ್ಣನೆಗಳಿಂದ ಇವಳ ಸ್ವಭಾವವು ಇಂಥಾದ್ದೆದು ಸಹಜವಾ ಗಿಯೇ ತೋರ್ಪಡುವುದು. ಆದರೂ ಒಂದೆರಡುಗುಣಗಳನ್ನು