ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ರ ದಾ ಪೂರಾತಿಥಿಗಳಲ್ಲಿ ಸ್ತ್ರೀಸಂಗವು ಕೂಡದು. ಭಾನುವಾರದಲ್ಲಿ ಅಭ್ಯಂ ಜನ ಸ್ನಾನವನ್ನೂ, ಮಂಗಳವಾರದಲ್ಲಿ ಕ್ಷೌರವನ್ನೂ, ಬುಧವಾರದಲ್ಲಿ ಸ್ತ್ರೀಸಂಗವನ್ನೂ ಬಿಡಬೇಕು. ಚಿತ್ರಾ, ಹಸ್ತ, ಶ್ರವಣ, ನಕ್ಷತ್ರಗಳಲ್ಲಿ ಎಣ್ಣೆಯನ್ನು ಬಿಡಬೇಕು. ವಿಶಾಖೆಯಲ್ಲಿಯೂ, ಪ್ರತಿಪತ್ತಿನಲ್ಲಿಯ ರವು ಕೂಡದು. ಮಘಾ, ಕೃತ್ತಿಕಾ, ಉತ್ತರಾ, ಉತ್ತರಾಷಾಢ, ಉತ್ತರಾಭಾದ್ರೆಗಳಲ್ಲಿ ಸ್ತ್ರೀ ಸಂಗಮವು ಯೋಗ್ಯವಾದದ್ಧಲ್ಲ. ತಿಲತರ್ಪ ಇವೂ ತಿಲಭಕ್ಷಗಳೂ, ಸಪ್ತಮಿಯಲ್ಲಿ ತಕ್ಕದ್ದಲ್ಲ. ಅಮ್ಮಮಿಯಲ್ಲಿ ತೆಂಗಿನಕಾಯನ್ನೂ, ನವಮಿಯಲ್ಲಿ ಸೋರೆಯ ಕಾಯನ್ನೂ, ದಶಮಿ ಯಲ್ಲಿ ಪಡವಲಕಾಯನ್ನೂ, ಏಕಾದಶಿಯಲ್ಲಿ ಅವರೆಯ ಕಾಳನ್ನೂ, ದಾದಶಿಯಲ್ಲಿ ಕಿರುಗಡಲೆಯನ್ನೂ, ತ್ರಯೋದಶಿಯಲ್ಲಿ ಬದನೆಯ ಕಾ ಯನ್ನೂ ಸ್ವೀಕರಿಸಬಾರದು. ಪೂಗ್ಲಿ ಮಾದರ್ಶಸಂಕ್ರಾಂತಿ ಚತುರ ಶೃಮಿಾಪುಟ | ನರಕ್ಷ೦ಡಾಲಯೋನ್‌ಸ್ಯಾ ಅನ್ನಿಮಾಂಸ ಸೇವನಾತ್‌itall ಪೌರ್ಣಮಿ, ದರ್ಶ, ಸಂಕ್ರಾಂತಿ, ಚತುರ್ದಶಿ, ಅಪ್ಪನಿಗಳಲ್ಲಿ, ಎಣ್ಣೆ, ಸ್ತ್ರೀ, ಮಾಂಸ, ಇವುಗಳನ್ನು ಸ್ವೀಕರಿಸುವವನು ಚಂಡಾಲನಾಗಿ ಹುಟ್ಟುವನು lol! ಪೂರ್ಣಿಮಾ, ದರ್ಶ, ಸಂಕ್ರಾಂತಿ, ದ್ವಾದಶಿ, ಶ್ರಾ ದ್ದ ದಿನಗಳು, ಇವುಗಳಲ್ಲಿ ಹೊಸಬಟ್ಟೆಗಳನ್ನು,ಹಿಂಡಕೂಡದು, ರಾತ್ರಿಯಲ್ಲಿ ಮಣ್ಣು, ಸಗಣಿ, ನೀರು ; ಇವುಗಳನ್ನು ತೆಗೆದುಕೊಂಡು ಬರಬಾರದು. ಸಂಜೆಯಲ್ಲಿ ಗೋಮೂತ್ರವನ್ನು ತರಬಾರದು, ಅಮಾವಾಸ್ಯೆ ಮೊದ ೧೮ಾದ ಪರಗಳಲ್ಲಿ ಶಾನ್ವರ್ಥವಾಗಿ ತಿಲಹೋಮವನ್ನು ಅವಶ್ಯಕವಾಗಿ ಮಾಡಬೇಕು. ಪೀಡಾ ಪರಿಹಾರಾರ್ಥವಾಗಿಯೂ, ಸಂರಕ್ಷಣೆಗಾಗಿಯೂ ದಾನಗಳನ್ನು ಮಾಡಬೇಕು. ಪರಕಾಲಗಳಲ್ಲಿ ವೇದಾಧ್ಯಯನ ಮಾಡಬಾ ರದು. ಮೃತ್ತಿಕಾ ಶೌಚ, ಆಚಮನ, ಬ್ರಹ್ಮ ಚರವ್ರತ, ಮೊದಲಾದವು ಗಳನ್ನು ಮಾಡಬೇಕು. ಪ್ರತಿಪತ್ತು, ದರ್ಶ, ಪವಿ,ನವಮಿ, ಈತಿಥಿಗಳ ಲ್ಲಿಯೂ, ಪಿತೃದಿನದಲ್ಲಿಯ, ಜನ್ಮತಿಥಿಯಲ್ಲಿಯೂ, ವುತ, ಉಪವಾಸ, ಇವುಗಳಲ್ಲಿಯೂ, ಭಾನುವಾರದಲ್ಲಿಯೂ, ಮಧ್ಯಾಹ್ನದ ಸ್ನಾನ ಮಾಡು ವಾಗಲೂ, ಕಡ್ಡಿಯಿಂದ ಹಲ್ಲುಜ್ಜಬಾರದು.