ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿನ್ನು ಸಣರ. ೧೦ ಚರ್ಯ ಮೊದಲಾದ ನಿಯಮಗಳನ್ನು ನಡೆಯಿಸಬೇಕು. ಹೀಗೆ ಕಡೆಯವರೆಗೂ ಸಂಪೂರ್ಣವಾಗಿ ಸ್ನಾನಮಾಡುವುದಕ್ಕೆ ಶಕ್ತಿಯಿಲ್ಲ ದಿದ್ದರೆ ಕೊನೆಯಲ್ಲಿ ತ್ರಯೋದಶಿ ಮೊದಲು ಪರ್ಣಮೂಾವರೆಗೆ ಮೂರು ದಿನಗಳಾದರೂ ಸ್ನಾನ ಮಾಡಬೇಕು. ಈ ಪೌರ್ಣಮಾಸ್ಯೆಯು ಮನ್ನಾ ದಿಯೆಂದು ಮೊದಲಿನಲ್ಲಿಯೇ ತಿಳಿಸಿದೆ. ಚೈತ್ರ ಬಹುಳ ತ್ರಯೋದಶಿಯು ಶತಭಿಷಾ ನಕ್ಷತ್ರದೊಡನೆ ಸೇರಿದ್ದರೆ ವಾರುಣೀ' ಎಂಬ ಹೆಸರು. ಆಗ ಸ್ನಾನಾದಿಗಳನ್ನು ಮಾಡುವುದರಿಂದ ಗ್ರಹಣ ಮೊದಲಾದ ಪರ ಕಾಲ ಗಳಲ್ಲಿ ಸ್ನಾನದಾನಾದಿಗಳನ್ನು ಮಾಡುವುದರಿಂದುಂಟಾಗುವ ಫಲವು ಬರ ವುದು. ಶನಿವಾರವು ಈ ದಿನದಲ್ಲಿ ಸೇರಿದರೆ ' ಮಹಾ ವಾರುಣಿ ಎಂತ ಲೂ, ಶುಭಯೋಗವೂ, ಶನಿವಾರವೂ, ಶತಭಿಷೆಯ,ಒಟ್ಟಾಗಿ ಸೇರಿದರೆ (ಮಹಾಮಹಾವಾರುಣೀ' ಎಂತಲೂ ಹೆಸರು. ವಾರುಣೀ ಯೋಗದಲ್ಲಿ ಬಹುಳ ಪತಿಪತ್ತು ಮೊದಲ್ಗೊಂಡು ಪರ್ಣಮಿಾವರೆಗೆ ತಿಂಗಳಾಗು ವುದು, ಅಮಾವಾಸ್ಯೆಗೆ ತಿಂಗಳು ಪೂರಯಿಸಬೇಕಾದರೆ ಫಾಲ್ಲು ಣ ಕೃ. ತ್ರಯೋದಶಿಯನ್ನು ಗ್ರಹಿಸಬೇಕು. ಚೈತ್ರ ಬಹುಳ ಚತುರ್ದಶಿ ಯಲ್ಲಿ ಈಶ್ವರಸನ್ನಿಧಿಯಲ್ಲಿ ಸ್ನಾನಮಾಡಿದರೂ, ಅದೇ ದಿನದಲ್ಲಿ ಮಂಗಳ ವಾರವು ಸೇರಿದಾಗ ಗಂಗಾನದಿಯಲ್ಲಿ ಸ್ನಾನಮಾಡಿದರೂ, ನಿಶಾಚತವು (ಹಿಡಿದಪಿಶಾಚವು) ನಿವಾರಣೆಯಾಗುವುದು, ಇಂತು ಚೈತ್ರಮಾಸ ಕೃತ್ಯ ನಿರ್ಣಯೋದ್ದೇಶವು ಮುಗಿದುದು loll

  • . (೨) ವೈಶಾಖಮಾಸವು. (೨) ವೈಶಾಖಮಾಸವು-ಈ ಮಾಸದಲ್ಲಿ ಆಗುವ ವೃಷಭ ಸಂಕ ಮಣಕ್ಕೆ ಪೂರ್ವದಲ್ಲಿ ಹದಿನಾರುಗಳಿಗೆಗಳು ಪುಣ್ಯ ಕಾಲವು. ರಾತ್ರಿಯಲ್ಲಿ ಸಂಕ್ರಮಣವಾದಾಗ ಮೊದಲ ೧೬ ಗಳಿಗೆಗಳ ಪುಣ್ಯಕಾಲವು. ಪುಣ್ಯಕಾಲದಲ್ಲಿ ಪ್ರಾತಃಕಾಲದ ಸನ್ನನವನ್ನೂ, ಪಿತೃಗಳಿಗೆ ತಿಲೋದಕ ತರ್ಪಣವನ್ನೂ, ಧರ್ಮ ಸಂಪಾದನೆಗಾಗಿ ಉದಕುಂಭದಾನವನ್ನೂ ಮಾಡಬೇಕು. ಈ ದಿನದಲ್ಲಿ ವಸಂತಪೂಜೆ ಮಾಡಿ ಬ್ರಾಹ್ಮಣರಿಗೆ ಗಂಧ ಹೂ, ಪಾನಕ, ಪನಿವಾರಗಳನ್ನು ಕೊಟ್ಟು ತೃಪ್ತಿ ಪಡಿಸಬೇಕು.