ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಶಾ ರ ದಾ .

                • • • • Tv

ತಿಥಿಯಲ್ಲಿ ಮಾಡಿದ್ದೇ ಆದರೆ ಅಂತಹ ತಿಥಿಯಲ್ಲಿ ಮಾಡಿದ ದೇವ ಕಾರ್ ವನ್ನು ದೇವತೆಗಳೂ, ಶ್ರಾದ್ಧಾದಿಗಳನ್ನು ಪತೃಗಳೂ ಸ್ವೀಕರಿಸುವುದಿಲ್ಲ. (ಎಂದು ವ್ರತರಾಜ ಮತ್ತು ನಿರ್ಣಯ ಸಿಂಧುಗಳಲ್ಲಿ ಹೇಳಿದೆ.) ಈ ದಿನದಲ್ಲಿ ಜಪ, ಹೋಮ, ಪಿತೃತರ್ಪಣ, ದಾನ ಮೊದಲಾದು ವುಗಳನ್ನು ಅಲ್ಪವಾಗಿ ಮಾಡಿದಾಗ ಅಕ್ಷಯವಾಗುವುದು. ಈ ದಿನದ ಲ್ಲಿ ರೋಹಿಣಿ ನಕ್ಷತ್ರವೂ, ಬುಧವಾರವೂ ಕೂಡಿದರೆ ಮಹಾ ಪುಣ್ಯಪ್ರ ದವಾದದ್ದು, ಈ ದಿವಸದಲ್ಲಿ ಮಾಡಬೇಕಾದ, ಜಪ, ಹೋಮಾದಿಗಳಿಗೆ, ಮುಂದೆ ಹೇಳಹೋಗುವ, ಯುಗಾದಿಯಂತೆಯೇ ನಿಲ್ಲಯವು, ಈ ತಿ ಥಿಯು ಕೃತಯುಗಕ್ಕೆ ಮೊದಲನೆಯದು. ಈ ದಿನದಲ್ಲಿ ಯುಗಾದಿ ) ಯುಕ್ತವಾಗಿ ಸಂಕಲ್ಪ ಶ್ರಾದ್ಧವನ್ನು ಮಾಡಬೇಕು' ಶ್ರಾದ್ಧವನ್ನು ಮಾಡ ದಪಕ್ಷದಲ್ಲಿ ತಿಲತರ್ಪಣವನ್ನು ಮಾಡಬೇಕು, ಇಲ್ಲಿ ಶುಕ್ಲಯುಗಾದಿ ಕಾರವನ್ನು ಪೂರಾಷ್ಟ್ರದಲ್ಲಿ ಮಾಡಬೇಕು, ಆಗ ಮಾಡುವುದಕ್ಕಾಗದಿ ದ್ದರೆ ಅಪರಾಹ್ನದಲ್ಲಾದರೂ ಮಾಡಬಹುದು. ಕೃಷ್ಣಯುಗಾದಿ ಕಾರ ವನ್ನು ಅಪರಾಷ್ಟ್ರದಲ್ಲಿ ಮಾಡಬೇಕೆಂಬುದೇ ಮೊದಲಾದ ಮನಾಂದಿಯ) ಲ್ಲಿ ಹೇಳಿರುವದೇ ಇದಕ್ಕೂ ನಿಶ್ಚಯವು. ಎರಡುಭಾಗವಾಗಿ ಭಾಗಿಸಿದ ಅಹಃಪ್ರಮಾಣದ ಗಳಿಗೆಯ ಒಂದು ಭಾಗಕ್ಕೆ ವ್ಯಾಪ್ತಿಯು ಎರಡುದಿನ ಗಳಿಗೂ ಇದ್ದರೆ ಮರುಮುಹೂರಕ್ಕಿಂತ ಹೆಚ್ಚಾದ ವ್ಯಾಪ್ತಿಯಿದ್ದರೆ ಎರಡನೆಯ ತಿಥಿಯನ್ನೂ, ಅದಕ್ಕೆ ಕಡಿಮೆಯಾಗಿದ್ದಲ್ಲಿ ಮೊದಲನೆಯದ ನ್ಯೂ ಗ್ರಹಿಸಬೇಕು. - ಮನಾದೌತಯುಗಾದೌ ಚ ಗ್ರಹಣೇ ಚಂದ್ರಸೂರಯೋಃ | ವ್ಯತೀಪಾತೇವೈಧೃತಳ ತಾಲವ್ಯಾಂಪಿನೀಕ್ರಿಯಾ |loll ಮನ್ನಾದಿ, ಯುಗಾದಿ, ಚಂದ್ರಸೂರ್ ಗ್ರಹಣ, ವ್ಯತೀಪಾತ, ವೈಧೃತಿ, ಇವುಗಳಲ್ಲಿ ಮಾಡಬೇಕಾದ ಕರಗಳಿಗೆ ಕರ ಕಾಲವ್ಯಾಪ್ತಿ ಯಿರುವುದನ್ನು ನೋಡಿಕೊಂಡು ಆಯಾ ಕರವನ್ನು ಮಾಡಬೇಕು!lol! ಎಂಬ ವಚನದಿಂದ ಸಂಪೂರವ್ಯಾಪ್ತಿ ಇರಬೇಕೆಂದು ಹೇಳುವವಾಕ್ಯಗ ೪ಗೆ ಅಪವಾದವು (ತಿರಸ್ಕಾರ) ವುಂಟಾಗುವುದರಿಂದ ಶ್ರಾದ್ಧಾದಿಗಳನ್ನು ತೃತಿಯಾತಿಥಿಯ ಮಧ್ಯಭಾಗದಲ್ಲಿಯೇ ಮಾಡಬೇಕು. ' ಪುರುಷಾರ್ಥ