ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭ: ಪಾವ್ರಯ ಧರ್ಮಸನ್ನು ಸಾರ ೧ng ದಲ್ಲಿ ಎಳ್ಳನ್ನು ತಿರುವಿ ತಲೆಗೆ ಹಾಕಿಕೊಂಡು ಸ್ನಾನಮಾಡುವುದು, ಎಳ್ಳಿ ನಿಂದ ಹೋಮಮಾಡುವುದು, ಎಳುತುಂಬಿದ ಪಾತ್ರೆಯನ್ನು ದಾನಮಾ ಡುವುದು, ಎಳ್ಳೆಣ್ಣೆಯ ದೀಪ ದಾನಮಾಡುವುದು, ಪಿತೃಗಳಿಗೆ ತಿಲತರ್ಪ ಣಮಾಡುವುದು. ಜೇನುತುಪ್ಪದೊಡನೆ ಎಳನ್ನು ದಾನಮಾಡುವುದು ಇವೆಲ್ಲವೂ ಮಹಾಫಲವನ್ನುಂಟುಮಾಡತಕ್ಕವು. 'ತಿಲದಾನಕ್ಕೆ ಮಂತ್ರ ವು- “ ತಿಲಾವೈ ಸೋಮದೈವತ್ಸಾತಿ ಸುರೈಃಸೃಪಾಸುಗೊಸವೇ | ಸ್ಪ ರ್ಗಪ್ರದಾಸ್ಸ ತಂತ್ರಾಕ್ಷತೇಮಾಂ ರಕ್ಷಂತುನಿತ್ಯಶಃ ||oll” ದೇವತೆಗಳು ಗೋಯಜ್ಞಾರ್ಥವಾಗಿ ಸೃಷ್ಟಿಸಿರುವ ಸೋಮದೇವತಾಕವಾಗಿಯೂ, ಸ್ವಾತಂತ್ಯವುಳ್ಳದ್ದಾಗಿಯೂ, ಸರ್ಗಲೋಕವನ್ನು ಕಲ್ಪಿಸಿಕೊಡುವು ದಾಗಿಯೂ ಇರುವ ಈ ಎಳ್ಳು ಸರದಾ ನನ್ನನ್ನು ಕಾಪಾಡಲಿ!lolವೈಶಾ ಖಶುದ್ಧ ದ್ವಾದಶಿ ಅಥವಾ ಪಲ್ಲವಿಯಲ್ಲಿ ವೈಶಾಖಸ್ಥಾನವನ್ನೂ,ಉದ್ಘಾ ಪನೆಯನ್ನೂ ಮಾಡಬೇಕು. ಎಕಾದಶಿ ಅಥವಾ ಬೌದ್ಧನಿಯಲ್ಲಿ ಉಪೋ ಮಾಡಿ ಕಲಶಸ್ಥಾಪನೆ ಮಾಡಿ ಅದರಲ್ಲಿ ಚಿನ್ನದ ಲಕ್ಷ್ಮಿನಾರಾಯಣ ಪ್ರತಿಮೆಯನ್ನಿಟ್ಟು ಪೂಜೆಮಾಡಿ ರಾತ್ರಿಯಲ್ಲಿ ಜಾಗರಣೆ ಮಾಡಿ ಬೆಳಗಿನ ಲ್ಲಿ ನವಗ್ರಹಾರಾಧನೆಮಾಡಿ ಪಾಯಸದಿಂದಾಗಲಿ, ತಿಲಾಜ್ಯಗಳಿಂದಾಗಲಿ, ಯವೆಯಿಂದಾಗಲಿ ನೂರೆಂಟುಹೋಮಗಳನ್ನು ಮಾಡಬೇಕು. 'ಪತ . ದಿಷ್ಟು' ಅಥವಾ 'ಇದಂ ವಿಷ್ಣು' ಎಂಬುದೇ ಹೋಮಮಂತವು. ಹೋಮವು ಸಾಂಗವಾಗುವುದಕ್ಕಾಗಿ ಗೋದಾನ, ಎಕ್ಕಡ, ಜೋಡು, ಛತ್ರ, ಬೀಸಣಿಗೆ, ಉದಕುಂಭ, ಶಯ್ಯಾ, ಮೊದಲಾದ ದಾನ ಗಳನ್ನ ಮಾಡಬೇಕು. ಇಷ್ಟು ಮಾಡುವುದಕ್ಕೆ ಶಕ್ತಿ ಇಲ್ಲದಿದ್ದರೆ ಎಳ್ಳ ಮೊದಲಾದ ಅನ್ನಗಳಿಂದ ಹತ್ತು ಜನ ಬ್ರಾಹ್ಮಣರಿಗೆ ಭೋಜನ ಮಾಡಿ ಸಬೇಕು. ಈ ಪೌರ್ಣಮಾಸ್ಯ ಮೊದಲ್ಗೊಂಡು ಜೈ ಶುದ್ಧ ಏಕಾ ದಶಿಯವರೆಗೆ ಜಲಾಧಿವಾಸಮಾಡಿಸಿ ವಿಷ್ಣುವಿಗೆ ಪೂಜೆಯನ್ನೂ, ಉತ್ಸವ ವನ್ನೂ ಮಾಡಬೇಕು. ವೈಶಾಖದ ಅಮಾವಾಸ್ಯೆಗೆ 'ಭಾವುಕಾ' ಎಂಬ ಹೆಸರು. ಮರುದಿನಕ್ಕೆ 'ಕರಿ' ಎಂಬಹೆಸರು. ಈ ಎರಡುದಿನಗಳಲ್ಲಿಯ ಶುಭಕಾರಗಳೊಂದನ್ನೂ ಮಾಡಕೂಡದು. ಇಂತು ವೈಶಾಖಮಾಸಕ್ಕೆ ತದ್ದೇಶವು,