ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಶಾ ಕ ದಾ. M ಈ ಹಣ್ಣುಗಳು, ತೆಂಗಿನಕಾಯಿ, ಅಳಲೆಕಾಯಿ, ಹಿಪ್ಪಲಿ, ಜೀರಿಗೆ, ಕುಂಠಿ, ಹುಣಿಸೆ, ಬಾಳೆ, ಲವಲಿ, ನೆಲ್ಲಿ, ಹಣ್ಣುಗಳು, ಬೆಲ್ಲವಲ್ಲದೆ ಕಬ್ಬಿ ನಿಂದಾಗುವ ಪದಾರ್ಥಗಳು (ಕಲ್ಲುಸಕ್ಕರೆ ಮೊದಲಾದದ್ದು) ಎಣ್ಣೆಯಿಂದ ಬೇಯಿಸಿದ ಪದಾರ್ಥಗಳು, ಕೆಲವು ಸಂದರ್ಭಗಳಲ್ಲಿ ಹಸುವಿನ ಮಜ್ಜಿಗೆ ಮತ್ತು ಎಮ್ಮೆಯ ತುಪ್ಪವು, ಇವೆಲ್ಲ ಹವಿಷ್ಯವಸ್ತುಗಳು, -ಕಾವ್ಯವ್ರತಗಳು- ಬೆಲ್ಲವನ್ನು ಬಿಡುವುದರಿಂದ ಧ್ವನಿಯು ಇಂಪಾಗುವದು, ಎಣ್ಣೆಯ ನ್ನು ಬಿಟ್ಟರೆ ಸೌಂದರವುಂಟಾಗುವುದು, ಯೋಗಾಭ್ಯಾಸಮಾಡುವವನು ಬ್ರಹ್ಮ ಲೋಕವನ್ನು ಪಡೆವನು, ತಾಂಬೂಲವನ್ನು ಬಿಡುವುದರಿಂದ ಭೋ ಗಿಯಾಗುವನು, ದಿವ್ಯವಾದ ಶಾರೀರವುಂಟಾಗುವುದು ತುಪ್ಪವನ್ನು ಬಿಡುವು ದರಿಂದ ದೇಹಕಾಂತಿಯು ವೃದ್ಧಿ ಹೊಂದುವುದು, ಕಾಯಿಪಲ್ಯವನ್ನು ಬಿಡುವವನು ಮೃಷ್ಟಾನ್ನವನ್ನು ಹೊಂದುವನು. ಅಭ್ಯಂಜನ ಸ್ನಾನ ಡುವಾಗ ಕಾಲುಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳದೆ ಬಿಟ್ಟರೆ ದೇಹವು ಸುವಾಸನೆಯುಳ್ಳದ್ದಾಗುವುದು, ಮೊಸರು, ಹಾಲು, ಮಜ್ಜಿಗೆ ಇವುಗಳ ನ್ನು ಬಿಟ್ಟರೆ ವಿಷ್ಣು ಲೋಕ ಪ್ರಾಪ್ತಿಯಾಗುವದು, ಪಾತ್ರೆಯಲ್ಲಿ ಅಟ್ಟ ಅ ನ್ಯವನ್ನು ಭೋಜನಮಾಡದಿದ್ದರೆ ದೀರ್ಘಾಯುಷ್ಯವುಳ್ಳ ಮಕ್ಕಳು ಹು ಟ್ಟು ವವು, ನೆಲದಮೇಲೆ ದರ್ಭೆಗಳನ್ನು ಹಾಸಿಕೊಂಡು ಮಲಗುವವನು ವಿಷ್ಣು ದಾಸನಾಗುವನು, ನೆಲವನ್ನು ಸರಿಸಿ ಅದರಲ್ಲಿ ಊಟಮಾಡುವುದ ರಿಂದ ದೊರೆತನವು ಬರುವುದು, ಮಧು, ಮಾಂಸಗಳನ್ನು ಬಿಟ್ಟವನು ಗ ಸಿಯಾಗುವನು, ದಿನ ಬಿಟ್ಟು ದಿನ( ಎರಡುದಿನಕ್ಕೊಂದುಸಾರಿ) ಊಟಮಾ ಡುವವನು ಬ್ರಹ್ಮ ಲೋಕವನ್ನು ಹೊಂದುವನು, ತಲೆಯನ್ನೂ ಉಗುರು ಗಳನ್ನೂ ಬೆಳೆಯಬಿಡುವುದರಿಂದ ಸರದಾ ಗಂಗಾಸ್ನಾನ ಫಲವು ಬರವ ದು,ವನವನ್ನು ಮಾಡುವುದರಿಂದ ಆಚ್ಛಾಶಕ್ತಿಯುಂಟಾಗುವುದು, ವಿಷ್ಣು. ವಿಗೆ ನಮಸ್ಕಾರಮಾಡವುದರಿಂದ ಗೋದಾನದ ಫಲವು ಬರುವುದು, ವಿಷ್ಣುಪಾದವನ್ನು ಮುಟ್ಟುವುದರಿಂದ ಕೃತಾರ್ಥತೆ ಯುಂಟಾಗುವುದು, ವಿಷ್ಣು ದೇವಾಲಯದಲ್ಲಿ ಗುಡಿಸುವುದು ಸಾರಿಸುವುದು ಇವುಗಳಿಂದ ರಾಷ್ಟ್ರಪ್ರಾಪ್ತಿ, ನೂರು ಪ್ರದಕ್ಷಿಣೆಗಳನ್ನು ಮಾಡಿದರೆ ವಿಷ್ಣುಲೋಕಪಾ