ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ೨ ಶ್ರೀ ಕಾ ರ ರಾ . ದೆ ಅಶಕ್ತನಾಗುವನೋ ಅಂತಹವನು ದ್ವಾದಶಿಯಲ್ಲಿ ವಿಷ್ಣು ಪೂಜೆಯಂ ಮಾಡಿ ಅನಂತರದಲ್ಲಿ ಪಾರಣೆಯನ್ನು ಮಾಡಬಹುದು. ಇಲ್ಲಿ ವ್ರತಾಂಗ. ಪೂಜೆಯನ್ನು ಮಾಡಿ ತಾನು ಉಪವಾಸಮಾಡಲು ಶಕ್ತನಲ್ಲದ್ದರಿಂದ ಉಪ ವಾಸಕ್ಕೆ ಬದಲಾಗಿ ವಿಷಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿಕೊಂಡು ಮತ್ತೆ ಪೂಜೆಮಾಡಬೇಕು. ಇಲ್ಲಿ ದ್ವಾದಶಿಯಲ್ಲಿ ಶ್ರವಣ ನಕ್ಷತ್ರಯೋಗವಿಲ್ಲದೆ ಏಕಾದಶಿಗೆ ಮಾತ್ರ ಯೋಗವಿದ್ದರೆ ಆದಿನವೇ ಶ್ರ ವಣ ದ್ವಾದಶೀ ವ್ರತವನ್ನು ಮಾಡಬೇಕು ನಿದ್ದೆ ಕಾದಶಿಯಲ್ಲಿ ಶ್ರವಣ ಯೋಗವುಂಟಾದರೆ ಯಾರಿಗೆ ಆ ದಿನದಲ್ಲಿ ಏಕಾದಶೀವ್ರತವು ನಡೆಯಬೇ ಕಾಗಿದೆಯೋ ಅವರುತಂತ್ರದಿಂದ ಎರಡುಉಪವಾಸಗಳನ್ನು ಮಾಡಬೇಕು. ಶ್ರಾವಣ ದ್ವಾದಶೀವ್ರತವನ್ನು ಹಿಡಿದಿರುವ ಇತರರು ಎರಡುಉಪವಾಸಗ ಳನ್ನೂ ಮಾಡಬೇಕು. ಈ ವಿಷಯದಲ್ಲಿ ಶಕ್ತಿ ಇಲ್ಲದವರು ಮೊದಲದಿನದ ಲ್ಲಿ ಫಲಾಹಾರವನ್ನೂ, ಎರಡನೆಯದಿನದಲ್ಲಿ ಉಪವಾಸವನ್ನೂ ಮಾಡಬೇ ಕೆಂದು ತೋರುವುದು. -ಸರಣೆಯು ಪಾರಣೆಯು-ತಿಥಿ ಮತ್ತು ನಕ್ಷತ್ರ ಇವೆರಡರ ಕೊನೆಯಲ್ಲಿ ಈ ರಣೆಮಾಡುವುದೇ ಮುಖ್ಯ ಪಕ್ಷವು. ಇವೆರಡರಲ್ಲೊಂದರ ಕೊನೆಯಲ್ಲಿ ಚಾರಣೆ ಮಾಡುವುದು ಎರಡನೆಯ ಸಕ್ಷವು, ವಿಪ್ಪು ಶೃಂಖಲ ಯೋಗವಿಲ್ಲ ದಿದ್ದರೆ ತ್ರಯೋದಶಿಯಲ್ಲಿ ಎರಡರ ಕೊನೆಯಲ್ಲಿ ಪಾರಣೆಯು, ವಿಷ್ಣು ಶೃಂಖಲಯೋಗವಿದ್ದಲ್ಲಿ ಪೂರದಿನದಲ್ಲಿ ತಂತ್ರದಿಂದ ಮಾಡಿರುವ ಉಪ ವಾಸದಯಕ್ಕೆ, ಎರಡನೆಯದಿನದಲ್ಲಿ ಶ್ರವಣನಕ್ಷತ್ರಕ್ಕಿಂತಲೂ ದ್ವಾದ ಶಿಯು ಹೆಚ್ಚು ಕಾಲವಿರುವುದಾದರೆ ಶ್ರವಣವು ಕಳೆದಮೇಲೆ ದ್ವಾದಶಿಯ ಲ್ಲಿ ಪಾರಣೆಯಾಗಬೇಕು. ದ್ವಾದಶಿಗಿಂತಲೂ ಶ್ರವಣವೇ ಹಚ್ಚ ಕಾಲವಿ ರುವುದಾದರೆ ಏಕಾದಶೀವತವಾರಣೆಗಾಗಿ ದ್ವಾದಶಿಯನ್ನು ನಿರಾಕರಿ ಸುವುದರಿಂದ ದೋಷವುಂಟಾಗುವುದಾದ ಕಾರಣ ದಾದಶಿಯಲ್ಲಿಯೇ ಮರಣೆಯು, ತಿಥಿ ನಕ್ಷತ್ರಗಳೊಂದರ ಕೊನೆಯನ್ನೂ ನಿರೀಕ್ಷಿಸಬೇಕಾ ದಿಲ್ಲ. ಸಂದರ್ಭ ವಾದರೆ ಶ್ರವಣನಕ್ಷತ್ರ ಮಧ್ಯಭಾಗವೆನ್ನಿಸಿಕೊಳ್ಳುವ ಆ ಪ್ಪತ್ತುಗಳಿಗೆಗಳ ಕಾಲವನ್ನು ಬಿಟ್ಟು ಪಾರಣೆಯನ್ನು ಮಾಡಬೇಕು.