ಭಾವಾಮಯ ಧಸಿಂಧುರ. ೧rಳಿ h••y nwwwwwwwww vv • • MMMMM ಕೈ ಬೇರೆ ಪಾತ್ರೆಯಲ್ಲಿ ಅನ್ನವನ್ನು ತಂದುಕೊಳ್ಳಬೇಕು. ಮಹಾಲ ಯದಲ್ಲಿ ಎಲ್ಲಾ ಪಾರ್ವಣಗಳಿಗೂ, ಏಕೋದ್ದಿ ಸ್ಮಗಳಿಗೂ ಒಂದೇ ಬರ್ಹಿ ಸ್ಸು (ದರ್ಭಾಸನ) ದರ್ಶಾ ದಿಗಳಲ್ಲಿ ಪುತಿ ಸಾರ್ವಣಕ್ಕೂ ಬೇರೆಬೇರೆ ಬ ರ್ಹಿಗಳಿರಬೇಕು. ಉಳಿದ ಶ್ರಾದ್ದ ಪ್ರಯೋಗವನ್ನೂ, ಅನೇಕ ಮಾತೃ ಗಳಿದ್ದರೆ ಅಂಜನಾಭ್ಯಂಜನಾದಿಗಳಲ್ಲಿ ಹೇಳಬೇಕಾದ ಮಂತ್ರಗಳ ಊಹೆ (ತಿದ್ದಿಕೊಂಡು ಹೇಳುವಿಕೆ) ಯನ್ನೂ, ಶ್ರಾದ್ಧ ಸಾಗರದಿಂದಲೂ, ತಮ್ಮ ತಮ್ಮ ಶಾಖೆ ಪ್ರಯೋಗದ ಗ್ರಂಥಗಳಿಂದಲೂ ತಿಳಿಯತಕ್ಕದ್ದು. ಸ ಕನ್ನಹಾಲಯದಲ್ಲಿ ಶ್ರಾದ್ಧಾಂಗವಾದ ತಿಲತರ್ಪಣವನ್ನು, ಎಲ್ಲ ಪಿತೃಗಳ ನ್ಯೂ ಉದ್ದೇಶಿಸಿ, ಎರಡನೇ ದಿನದಲ್ಲಿಯೇ, ಪಾತಃ ಸಂಧ್ಯಾವಂದನೆಯ ನ್ನು ಮಾಡುವದಕ್ಕಿಂತ ಮುಂಚೆ , ಪ್ರಾತಃ ಸಂಧ್ಯಾವಂದನಾನಂತರದ ಲ್ಲಾಗಲಿ, ಬ್ರಹ್ಮಯಜ್ಞಾಂಗವಾದ ತರ್ಪಣಕ್ಕಿಂತ ಭಿನ್ನವಾಗಿ (ಅದರೊಡನೆ ಸೇರಿಸದೆ) ಮಾಡಬೇಕು. ಪ್ರತಿಪತ್ತು ಮೊದಲಾದ, ಮತ್ತು ಪಂಚಮಿ ಮೊದಲಾದ ಪಕ್ಷಗಳಲ್ಲಿ, ವಿಪ್ರವಿಸರ್ಜನೆಯಾದ ಕೂಡಲೆ ಶ್ರಾದ್ಧದಲ್ಲಿ ಪೂಜಿತರಾದ ಪಿತೃಗಳನ್ನುದ್ದೇಶಿಸಿ ತರ್ಪಣಮಾಡಬೇಕು, ಪತ್ನಿಯು ರಜಸ್ವಲೆಯಾಗಿರುವಾಗ, ಬೇರೆ ಕಾಲಗಳೂ ಇರುವದರಿಂದ ಸಕ್ಷನ್ನಹಾ ಲಯವನ್ನು ಮಾಡಕೂಡದು. ಅಮಾವಾಸ್ಯೆಯಲ್ಲಿ ರಜೋ ದೋಷವುಂ ಟಾದರೆ, ಆಶ್ವಯುಜ ಶುದ್ಧ ಪಂಚವಿಶಾವರಿಗಿರುವ ಗೌಣಕಾಲದಲ್ಲಿ ಮಹಾ ಲಯವನ್ನು ಮಾಡಬಹುದು. ಪ್ರತಿಪತ್ತು ಮೊದಲಾದ ಇತರ ಪಕ್ಷಗಳ ಲ್ಲಿ ಪ್ರಾರಂಭದಿನದಲ್ಲಿ, ಅಡಿಗೆಗೆ ಪ್ರಾರಂಭಮಾಡುವುದಕ್ಕಿಂತ ವಂಚೆ ಪತ್ನಿಯು ರಜಸ್ವಲೆಯದರೆ ಮುಂದು ಮುಂದಿನ ಸಕಗಳನ್ನು ನಿಕರಿ ಸಬೇಕು. ಅಡಿಗೆಗೆ ಪ್ರಾರಂಭವಾದ ಮೇಲಾದರೆ ಆಕೆಯನ್ನು, ಬೇರೆ ದು ಮನೆಗೆ ಕಳುಹಿಸಿ ಮಹಾಲಯವನ್ನು ಮಾಡಬೇಕು (ಇಲ್ಲಿ ಸೂ ತಕಾದಿಗಳು ಪ್ರಾಪ್ತವಾದರೆ ಮಾಡಬೇಕಾದದ್ದನ್ನೂ, ಸಹೋದರ ಮೊ ದಲಾದವಶ ಮಹಾಲಯ ನಿಶ್ಚಯವನ್ನೂ ಮೂರನೆಯ ಪರಿಚ್ಛೇದದ ಉ ತರಾರ್ಧದಲ್ಲಿ ಹೇಳಿದೆ), ವಿಧವೆಯುಮಾಡಬೇಕಾದ ಶಾದ ದಲ್ಲಿಯೂ ಹೀಗೆಯೇ ಮಾಡಬೇಕು. 25
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೪
ಗೋಚರ