ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ, ೧೯೫ ಗರ್ಭಿಣೀಪತಿಯೂ ಮಾಡಕೂಡದು || ೨l ಎಂಬ ವಚನಗಳಿರುವುದರಿಂದ ತಂದೆಯು ಸಂನ್ಯಾಸಿಯಾಗಿ, ಅಥವಾ ಜಾತಿ ಭ್ರಷ್ಟನಾಗಿರುವಾಗ ಮಗ ನು, ತಂದೆಯತಂದೆ ಮೊದಲಾದ ಎಲ್ಲಾ ಪಿತೃಗಳನ್ನು ಉದ್ದೇಶಿಸಿ, ವಿಣ್ಣ ದಾನವಿಲ್ಲದೆ ಸಂಕಲ್ಪವಿಧಿಯಿಂದ ಮಹಾಲಯವನ್ನು ಮಾಡಬೇಕು. ವಿಣ್ಣ ದಾನ ಮೊದಲಾದ ವಿಸ್ತಾರಗಳನ್ನು ಮಾಡುವುದಕ್ಕೆ ಶಕ್ತಿಯಿಲ್ಲದವರೂ ಸಂಕಲ್ಪ ವಿಧಾನದಿಂದ ಮಹಾಲಯವನ್ನು ಮಾಡಬಹುದು. ಸಂಕಲ್ಪವಿಧಿ ಯಲ್ಲಿ ಅರ್ಥೈದಾನ, ಸಮಂತ್ರಕವಾದ ಆವಾಹನೆ, ಅಕರಣ, ವಿಣ್ಣಪ್ಪ ದಾನ, ವಿಕಿರ, ಸ್ಪಧಾವಾಚನೆ, ಇವುಗಳನ್ನು ಬಿಡಬೇಕು. ಬೇಕಾದಷ್ಟು ಜನ ಬ್ರಾಹ್ಮಣರು ಸಿಕ್ಕದೆ ಹೋದರೆ ವಿಶ್ವೇದೇವಸ್ಥಾನದಲ್ಲಿ ಸಾಲಗಾ ಮಮೊದಲಾದ ದೇವತಾಮೂರ್ತಿಯನ್ನಿಟ್ಟು ಶ್ರಾದ್ಧವನ್ನು ಮಾಡಬಹುದು, ಬ್ರಾಹ್ಮಣರೊಬ್ಬರೂ ಸಿಕ್ಕದಿದ್ದರೆ ದಭ- ವಟು (ಕರ್ಚಿಕಟ್ಟಿರುವುದು) ವಿಧಿಯಿಂದ ಶ್ರಾದ್ಧವು. ತಂದೆತಾಯಿಗಳು ಸತ್ಯ ಸಂವತ್ಸರದಲ್ಲಿ ಮಹಾಲ ಯವು ವಿಕಲ್ಪವು. ಮಲಮಾಸದಲ್ಲಿ ಮಹಾಲಯವನ್ನು ಮಾಡಕೂಡದು. - ಪ್ರತಿಸಾಂವತ್ಸರಿಕ ಶಾದಿಗಳು ಬಂದರೆಪ್ರತೃಕ ಶ್ರಾದ್ಧಾದಿಗಳು ಬಂದರೆ.-ಅಪರಪಕ್ಷದಲ್ಲಿ ಪ್ರತಿಸಾಂ ವತ್ಸರಿಕ ಶ್ರಾದ್ಧವೊದಗಿದರೆ,ಮೃತತಿಥಿಯಲ್ಲಿ ವಾರ್ಷಿಕ ಶ್ರಾದ್ಧವನ್ನು ಮಾಡಿ ಬೇರೆ ದಿನದಲ್ಲಿ ಸಕೃ ಹಾಲಯವನ್ನು ಮಾಡಬೇಕು. ಪ್ರತಿ ಸತ್ತು ಮೊ ದಲಾಗಿ ಅಮಾವಾಸ್ಕಾಂತವಾದ ಪಕ್ಷಗಳಲ್ಲಿ, ಮೃತದಿನದಲ್ಲಿ - ವಾರ್ಷಿಕ ವನ್ನು ಮಾಡಿ, ಬೇರೆ ಪಾಕದಿಂದ ಮಹಾಲಯವನ್ನು ಮಾಡಬೇಕು. ಆ ಮಾವಾಸ್ಯೆಯಲ್ಲಿ ಪ್ರತಿವಾರ್ಷಿಕವೂ, ಸಹೃನ್ಮಹಾಲಯವೂ ಪ್ರಾಪ್ತವಾ ದರೆ, ಮೊದಲು ವಾರ್ಮಿಕವನ್ನೂ,ಆಮೇಲೆ ಮಹಾಲಯವನ್ನೂ, ಅನಂತರ ದಲ್ಲಿ ದರ್ಶವನ್ನೂ, ಈ ಮೂರನ್ನೂ ಕ್ರಮವಾಗಿ ಬೇರೆಬೇರೆ ಪಾಕಗಳಿ೦ ದ ಮಾಡಬೇಕು. ಅಮಾವಾಸ್ಯೆಯಲ್ಲಿ ಮಹಾಲಯಮಂತ್ರವೇ ಬಂದಾ ಗೋ, ಮೊದಲು ಮಹಾಲಯವನ್ನೂ, ತರುವಾಯ ದರ್ಶವನ್ನೂ ಮಾಡ ತಕ್ಕದ್ದು. ಮೃತತಿಥಿಯಲ್ಲಿ ಸಕೃ ಹಾಲಯವು ಬಂದ ಕಾಲದಲ್ಲಿ-ಆಯಾ ತಿಥಿಗಳನ್ನು ಗ್ರಹಿಸತಕ್ಕ ವಿಷಯದಲ್ಲಿ ಅಪರಾಸ್ಥವ್ಯಾಪ್ತಿಯೊಡನೆ ದರ್ಶ ದಂತೆಯೇ ಮಾಡತಕ್ಕದ್ದೆಂದು ತೋರುತ್ತದೆ.