ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಮಯಧರ ಸಿಂಧುಸಾರ. Jಂಗೆ M ರೊಂದು ಪಕ್ಷವನ್ನಾಶ್ರಯಿಸಿ ಮುನುತ್ರಯೋಗಶೀ ಶ್ರಾದ್ಧವನ್ನು ಮಾಡಿ ಲೇಬೇಕು. ಮಾಡದಿದ್ದರೆ ದೋಷವುಂಟೆಂದು ಹೇಳಿರುವುದರಿಂದ ಇದು ನಿತ್ಯ ಶ್ರಾದ್ಧವಾಗಿರುವದು. ಸೂರೈನು ಹಸ್ತ ನಕ್ಷತ್ರದಲ್ಲಿರುವಾಗ ತ್ರ ಯೋದಶಿಯು ಮುಘಾ ನಕ್ಷತ್ರದಲ್ಲಿ ಬಂದರೆ ಗಜಚ್ಛಾಯಾ, ಎಂಬ ಹ ಸರು ಉಂಟಾಗುವುದು. ಈದಿನದಲ್ಲಿ ಶ್ರಾದ್ಧ ಮಾಡಿದರೆ ಬಹಳ ಫಲ. ಇಲ್ಲಿ ಮಹಾಲಯವೂ ಯುಗಾದಿಯ ಎರಡೂ ಪ್ರಸ್ತವಾದರೆ, ಮಘಾ ತುಯೋದಶಿ, ಮಹಾಲಯ, ಯುಗಾದಿ, ಈ ಶ್ರಾದ್ಧಗಳನ್ನು ತಂ ತ್ರದಿಂದ ಮಾಡುತ್ತೇನೆಂದು ಸಂಕಲ್ಪ ಮಾಡಿ ಮೂರನ್ನೂ ತಂತ್ರದಿಂದ ಮಾಡಬೇಕು. ದರ್ಶದಿಂದ ನಿತ್ಯ ಶ್ರಾದ್ಧದಂತೆಯೇ ಮತ್ತೊಂದು ಶ್ರಾದ್ಧದ ಪ್ರಸಂಗ ಸಿದ್ದಿಯುಂಟಾಗಲಾರದು. (ಮತ್ತೊಂದು ಶ್ರಾದ್ಧವು ಕೃತವಾಗುವುದಿಲ್ಲ) ಅಂಗಗಳಿಗೆ ಐಕ್ಯವೂ, ಪ್ರಧಾನವು ಮಾತ್ರ ಭಿನ್ನವೂ ಆಗುವುದೇ ತಂತ್ರವೆನ್ನುವುದು. ಆದ್ದರಿಂದ ವಿಚ್ಛೇ ದೇವತೆಗಳು, ಪಾಕ (ಅಡಿಗೆ) ಮೊದಲಾದ ಅಂಗಗಳಿಗೆ ಐಕ್ಯವೂ, ಬ್ರಾಹ್ಮಣ, ಅರ್ಫ್, ವಿಣ್ಣ ಮೊದಲಾದ ಪ್ರಧಾನಗಳಿಗೆ ಭೇದವೂ (ಬೇರೆಬೇರೆ) ಇರಬೇಕು. ಪ). ಸಂಗ ಸಿದ್ದಿಯುಂಟಾಗುವ ಸ್ಥಳಗಳಲ್ಲಿ ಪ್ರಧಾನಗಳಿಗೂ ಭೇದವಾಗಬೇ ಕಾದದ್ದಿಲ್ಲವೆಂದು ತೋರುವುದು. ತ್ರಯೋದಶೀ ಶ್ರಾದ್ಧ ವು ಅಪರ ಪಕ್ಷ ದಲ್ಲಾಗುವುದರಿಂದ ಧರಿಲೋಚನರೆಂಬ ವಿಚ್ಛೇ ದೇವತೆಗಳಿರಬೇಕೆಂದು ಶ್ರಾದ್ದ ಸಾಗರದಲ್ಲಿ ಹೇಳಿದೆ. ವಿಭಕ್ತರಾಗದಿರುವ ಸಹೋದರರೂ ಕೂ ಡ ಮಘಾ ತ್ರಯೋದಶಿ ಶಾದ್ಧವನ್ನು ಬೇರೆಬೇರೆಯಾಗಿ ಮಾಡಬೇಕೆಂ ದುಸಿಂಧು, ಕೌಸ್ತುಭಾದಿ ಗೊಸ್ಥಿಗಳಲ್ಲಿ ಹೇಳಿದೆ. ವಿಭಕ್ತರಾದವರಾದರೂ ಕೂಡ ಒಟ್ಟಿಗೆ ಮಾಡಬೇಕೆಂದು ಶ್ರಾದ್ಧ ಸಾಗರದಲ್ಲಿದೆ. - ಚತುರ್ದಶಿಯಲ್ಲಿ ಶಸ್ತ್ರಾದಿಗಳಿಂದ ಹತರಾದವರಿಗೆ ಶ್ರಾದ್ಧವು. - ಚತುರ್ದಶಿಯಲ್ಲಿ ಶಸ್ತ್ರಾದಿಗಳಿಂದ ಹತರಾದವರ ಶ್ರಾದ್ಧವು:-ಈ ಚತುರ್ದಶಿಯಲ್ಲಿ, ಪಿತೃಮೊದಲಾದ ಮೂವರಲ್ಲಿ ಯೂರಾದರೂ ಆಯು ಧ, ವಿಷ, ಅಗ್ನಿ, ಜಲ ಮೊದಲಾದವುಗಳಿಂದಾಗಲಿ, (ಮರವನ್ನು ಹತ್ತಿ ಬೀಳುವುದು, ಸಿಡಿಲು ಬಡಿವುದು) ಕೃಜ್ಜಿ (ಕೊಂಬುಳ್ಳ ಎತ್ತುಮೋದಳು 26