ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ. ೨೦ YA=Yvv "Y // vdwvWv M ಮೃತರಾದ ಮಾತಾಪಿತೃಗಳ ಮೃತದಿನವಾಗುವ ಪಕ್ಷದಲ್ಲಿ ಚತುರ್ದಶೀ ನಿಮಿತ್ತವಾದ ಏಕೋದ್ದಿಷ್ಟ್ಯವನ್ನು ಮಾಡಿ, ಪುನಃ ಆಗಲೇ ಮೃತರಾದವರೇ ಮೊದಲ್ಗೊಂಡು ಮೂರು ಜನಗಳನ್ನು ಉದ್ದೇಶಿಸಿ ಸಾಂವತ್ಸರಿಕ ಶ್ರಾದ್ಧ ವನ್ನು ಪಾರ್ವಣ ವಿಧಿಯಿಂದ ಮಾಡಬೇಕೆಂದು ಶ್ರಾದ್ಧ ಸಾಗರದಲ್ಲಿದೆ. ಸಂವತ್ಸರಿಕ ಶ್ರಾದ್ಧದಿಂದಲೇ ಚತುರ್ದಶೀ ನಿಮಿತ್ತವಾದ ಶ್ರಾದ್ಧವು ಕೈ ತವಾಗುವುದು. ಬೇರೆಯಾಗಿ ಮಾಡಬೇಕಾದ್ದಿಲ್ಲವೆಂದು ಕೌಸ್ತುಭಾದಿ ಗ್ರಂಥಗಳಲ್ಲಿ ಹೇಳಿದೆ. ಬೇರೆ ದಿನದಲ್ಲಿ ಸಕೃನ್ಮಹಾಲಯವನ್ನು ಮಾಡ ಬೇಕು. ಇಲ್ಲಿ ಚತುರ್ದಶೀ ಶಾದಕ್ಕೆ ಕಾರಣಾಂತರದಿಂದ ವಿಘ್ನವುಂ ಟಾದರೆ ಈ ಪಕ್ಷದಿಂದಾಗಲಿ, ಮೊದಲ ಪಕ್ಷದಂತಾಗಲಿ ಬೇರೊಂದು ದಿನ ದಲ್ಲಿ ಪಾರ್ವಣ ವಿಧಿಯಿಂದಲೇ ಮಾಡಬೇಕು. ಏಕೋದ್ದಿ ಸ್ಮವನ್ನು ಮಾಡಕೂಡದು, ಈಏಕೋದ್ದಿಷ್ಯದಲ್ಲಿ ಅಪರಾಹ್ನ ವ್ಯಾಪ್ತಿಯುಳ್ಳ ಚ ತುರ್ದಶಿಯನ್ನೇ ಗ್ರಹಿಸಬೇಕು, ಇತರ ಏಕೋದ್ದಿ ಸ್ಮ ಶ್ರಾದ್ಧಗಳಂತೆ ಮಧ್ಯಾಹ್ನ ವ್ಯಾಪ್ತಿಯಲ್ಲದ್ದನ್ನು ಗ್ರಹಿಸಕೂಡದೆಂದು ಕೌಸ್ತುಭಮತ ವು. ಸೂರೈನು ಹಸ್ತ ನಕ್ಷತ್ರದಲ್ಲಿರುವಾಗ ಅಮಾವಾಸ್ಯೆಯಲ್ಲಿ ಹಸ್ತ ನಕ್ಷತ್ರವು ಬಂದರೆ,ಗಜಚ್ಛಾಯವೆಂಬ ಸಂಸ್ಥೆಯುಂಟು. ಆದಿನದಲ್ಲಿ ಶಾ ದ್ದ, ದಾನ, ಮೊದಲಾದವುಗಳನ್ನು ನೋಡಬೇಕು. ಇಂತು ಅಮವಾಸ್ಯೆ ಯಲ್ಲಿ ಗಜಚ್ಛಾಯೆಯು, -ದೌಹಿತ್ರ ಶ್ರಾದ್ಧವು. – ದೌಹಿತ್ರ ಶ್ರಾದ್ಧವು: -ದೌಹಿತ್ರ ನು (ಮಗಳ ಮಗನು) ಅನುಪಸೀತ ನಾಗಿದ್ದಾಗ, ತನ್ನ ಸೋದರವನು ಬದುಕಿದ್ದರೂ ಕೂಡ, ಆಶ ಯುಜ ಶುದ್ಧ ಪ್ರತಿಪತ್ತಿನಲ್ಲಿ ಸಪಕನಾದ ಮಾತಾಮಹನ (ತಾಯಿ ಯತಂದೆ) ಸರ್ವಣವನ್ನು ಮೂಡಬೇಕು. ಮಾತಾಮುಹಿಯು (ತಾಯಿ ಯಾಯಿ) ಬದುಕಿದ್ದರೆ ಮತಾಮಹ ಪಾರಣ ವೊಂದನ್ನೇ ಮೂಡ ಬೇಕು. ಈ ಶ್ರಾದ್ಧವನ್ನು ಜೀವಪ್ಪಿತೃಕನೇ ಮೂಡಬೇಕು. ಸಣ್ಣ ಕವಾಗಿಯದರೂ 'ಆವಿಕವಾಗಿಯೋದರೂ ಮೂಡಬಹುದು. ಇಲ್ಲಿ ಪುರೂರವಾರ್ದವ ಸಂಜ್ಞಕ ವಿಶ್ಚ ದೇವತೆಗಳನ್ನು ಹೇಳಬೇಕು,