ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ. M ಗಿ ಮಹಾನೈವೇದ್ಯ ಮಾಡಬೇಕು. ಅನಂತರದಲ್ಲಿ ಅದರ ಅಂಗವಾಗಿ ಪ್ರತ್ಯಕ್ಷ ಗೋವನ್ನಾಗಲಿ, ಮಣ್ಣಿನ ಹಸುವನ್ನಾಗಲಿ, ಮೇಲ್ಕಂಡ ಮಂ ತ್ರಗಳಿಂದ ಪೂಜಿಸಿ “ಆಗಾವೋ ಆರ್ಗ, ಪೆ ತೇವಂದತು' ಎಂಬ ಯ *ುಗಳಿಂದ ಮನೆಯಲ್ಲಿ ಮಾಡಿರುವ ಅನ್ನದಿಂದ (ಸಿದ್ದ ಚರು) ಹೋ ಮಮಾಡಬೇಕು. ತರುವಾಯ ಬ್ರಾಹ್ಮಣರಿಗೆ ಅನ್ನದಾನವನ್ನೂ, ಗೋ. ದಾನವನ್ನೂ, ಗೋವುಗಳಿಗೆ ತೃಣಧಾನವನ್ನೂ, ಗಿರಿಗೆ [ಬೆಟ್ಟ] ಬಲಿದಾ ನವನ್ನೂ ಮಾಡಬೇಕು. ಮನೆಯಲ್ಲಿರುವ ಗೋವುಗಳೊಡನೆ ಗೋವು ಬ್ರಾಹ್ಮಣರು, ಹೋವಾಗಿ, ಗೋವರ್ಧನ, ಇವುಗಳನ್ನು ಪ್ರದಕ್ಷಿಣೆ ಮಾಡಬೇಕು. ಮಾರ್ಗವಾ೪ಬಂಧನೆಮಾರ್ಗವಾ೪ ಬಂಧನ-ಇದನ್ನು ಅಪರಾಹ್ನದಲ್ಲಿ ಮಾಡಬೇಕು ಊರಿಗೆ ಪೂರದಿಕ್ಕಿನಲ್ಲಿ ದರ್ಭೆ- ಕಾಚಿಹುಲ್ಲು, ಇವುಗಳಿಂದ ಹೊಸ ದ ಹಗ್ಗ ಗಳಲ್ಲೊಂದನ್ನು ತಮ್ಮ ತಮ್ಮ ಪೂರಾಚಾರದಂತೆ ತೆಗೆದುಕೊಂ ಡು ದೊಡ್ಡ ಕಂಭಕ, ನರಕ ಕಟ್ಟಬೇಕು. 'ಮಾರ್ಗ ಪಾ೪ ನಮಸ್ತೇಸ್ತು ಸಕ್ಷಲೋಕಸುಖಪ್ರದೇ | ವಿಧೇಯತಿ ಪುತ್ರದಾರಾದ್ಧತಿ ಪುನರೇವತಸ್ಯಮೇ ||oll'ಸುರಲೋಕಗಳಿಗೂ ಸ, ಖಪ್ರದವಾದ ಮಾ ರ್ಗ ಪಾಳಯೆ ! (ದಾರಿಯಲ್ಲಿ ಕಟ್ಟಿದ ತೋ ರಣ) ಪುತ್ರ ದಾರಾದಿಗಳೂ ಡನೆ ನನ್ನ ವೃತಾರ್ಥವಾಗಿ ಪುನಃ ಬರುವವನಾಗು holl ಎಂದು ಪ್ರಾ ರ್ಥಿಸಿ, ನಮಸ್ಕಾರಮಾಡಬೇಕು. ಅದರ ಕೆಳಗೆ ದಾರಿಯಲ್ಲಿ ಹಸುಗಳು, ಆನೆಗಳು ಮೊದಲಾದವುಗಳೊಡನೆ ಬ್ರಾಹ್ಮಣರು, ರಾಜರು ಮೊದಲಾ ದವರು ಎಲ್ಲರೂ ಹೋಗಬೇಕು. ಹೀಗೆಯೇ ಕಾಚಿಹುಲ್ಲು ಮೊದಲಾ ದವುಗಳಿಂದ ಗಟ್ಟಿಯಾಗಿ ದೊಡ್ಡ ಹಗ್ಗವನ್ನು ಹೊಸೆದು, ಗೆಲುವನ್ನು ತಿಳಿದುಕೊಳ್ಳುವುದಕ್ಕಾಗಿ ಒಂದು ಕಡೆಯಲ್ಲಿ ರಾಜಪುತ್ರರೂ, ಮತ್ತೊ೦ ದುಕಡೆ ಅಲ್ಪಜಾತಿಯವರೂ, ಹಿಡಿದುಕೊಂಡು ಎಳೆಯಬೇಕು. ಇದರ ಲ್ಲಿ ಹೀನಜಾತಿಯವರು ಗೆದ್ದರೆ ರಾಜನಿಗೆ ಜಯವುಂಟಾಗುವುದೆಂದು ತಿ ೪ಯಬೇಕು. ಪ್ರಾತಃಕಾಲದಲ್ಲಿ ಜೀಜಾಡಬೇಕೆಂದು ಹಿಂದೆಯೇ ಹೇ ಇದೆ. ಸುವಾಸಿನಿಯರು ಆರತಿಯನ್ನೂ ಬೆಳಗಿನಲ್ಲಿಯೇ ಮಾಡಬೇಕು,