ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯಾಧರ ಸಿಂಧುಸಾರ, M ಅಧ್ಯಾಯದ ಪ್ರತ್ಯಕ್ಷ ವಚನಕ್ಕೆ ವಿರೋಧವುಂಟಾಗುವುದು. ಆದರೆ ಆ ಪಾಢಮಾಸ ಪ್ರಕರಣದಲ್ಲಿ ಆಷಾಢ ಶುದ್ಧ ದ್ವಾದಶಿಯಲ್ಲಿ ಅನೂರಾಧಾ ನ ಕತ್ರಯೋಗ ವಿಲ್ಲದಿರುವಾಗ ಪರಣೆಯನ್ನು ಮಾಡಬೇಕು ಎಂದು ಹೇ ೪, ಅದಕ್ಕೆ ಆಧಾರವಾಗಿ 'ಆ ಭಾಕಾಸಿತ ಪಕ್ಷೇಪು, ಮೈತ್ರಾದ್ಧ ಪದೇ ಸವಿತೀಹ ವಿಷ್ಟು, ಅಂದರೆ-ಆಸಾಢ, ಭಾದ್ರಪದ, ಕಾರಿಕ, ಈ ಮಾ ಸಗಳ ಶುಕ್ಲ ಪಕ್ಷಗಳಲ್ಲಿ, ಅನೂರಾಧಾ ನಕ್ಷತ್ರದ ಮೊದಲ ಪಾದದಲ್ಲಿ, ವಿ ಷ್ಣು ಶಯನ ಮಾಡಿರುವನು, ಎಂಬುದೇ ಮೊದಲಾದ ಭವಿಷೋತ್ತರ ಪುರಾಣದಲ್ಲಿರುವ ವಿಷ್ಣುಧರ್ಮದ ವಾಕ್ಯಗಳನ್ನು ಹೇಳಿ, ಕೊನೆಯ ಲ್ಲಿ (ಇದಂ ನಿರಲಂ' ಇದಕ್ಕೆ ಆಧಾರವಿಲ್ಲ, ಎಂದು ಹೇಳಿರುವಂತೆಯೇ ಎಲ್ಲಾ ಪ್ರಕರಣಗಳಲ್ಲಿಯೂ ತಿಳಿಯಬೇಕು. ಅದಕ್ಕೆ ಮಾಧವಾದಿಮೂ ಲಗ್ರಂಥಗಳಲ್ಲಿ ಈ ವಿಷಯವನ್ನು ಹೇಳಿಲ್ಲವೆಂಬುದೇ ಅರ್ಥವಲ್ಲದೆ ವಿಷ ಯವು ಪ್ರಾಮಾಣ್ಯವಲ್ಲವೆಂಬರ್ಥವಲ್ಲ. ಹಾಗಾದರೆ-ಭಾದ್ರಪದ ಕಾರ್ತಿ ಕಗಳಲ್ಲಿ ಆ ವಾಕ್ಯವನ್ನನುಸರಿಸಿಯೇ ಮಾರಣ ನಿರ್ಣಯವನ್ನು ಬರ ದದ್ದು ಅಸಂಗತವಾಗುವುದು. ಕುಭಾದಿ ಎಲ್ಲಾ ಹೊಸಗ್ರಂಥಗಳು ಅದನ್ನೇ ಅನುಸರಿಸಿ ನಿರ್ಣಯವನ್ನು ಮಾಡಿರುವುದೂ, ಅಸಂಗತವಾಗಬೇ ಕಾಗಿ ಬರುತ್ತದೆ. ಶಿಷ್ಯರೆಲ್ಲರೂ ಅದನ್ನನುಸರಿಸಿ ಮಾರಣೆಯನ್ನು ಮಾ ಸುತ್ತಿರುವ ಆಚರಣೆಯನ್ನು ನಂಬದೆ ಇರಬೇಕಾಗುತ್ತದೆ. ಇದರಿಂದ ಮಾಧವಾದಿ ಗ್ರಂಥಗಳಲ್ಲಿ ಸಿಕ್ಕದಿರುವ ಮಾತ್ರಕ್ಕೆ ಆ ವಚನಗಳಿಗೆ ಅಪ ಮಾಣ್ಯವುಂಟಾಗುವುದೆಂಬುದು ತೊಲಗಿತು. ಇಲ್ಲದಿದ್ದರೆ ಮಾಧವಾದಿ ಗ್ರಂಥಗಳಲ್ಲಿಲ್ಲದ ವಾಕ್ಯಗಳಿಗೂ, ಅದರಂತೆ ನಡೆಯುತ್ತಿರುವ ಆಚಾರ ಕ್ಯ, ಪ್ರಯೋಜನವಿಲ್ಲದಂತಾದೀತು ! ಆದರೆ-'ಯತ್ತು' (ಯಾವ ಕಾರ ಣದಿಂದ) ಎಂಬ ಯತ್ನದ ಪ್ರಾರಂಭದಿಂದ ಹೇಳಿರುವ ವಾಕ್ಯಗಳನ್ನು ತಾನಿ ನಿಮ್ಮಲಾನಿ, ( ಅವುಗಳಿಗೆ ಆಧಾರವಿಲ್ಲ) ಎಂಬ ಮಾತುಗಳಿಂದ ದೂಷಿಸಿರುವ 'ಶ್ರವಣ ದ್ವಾದಶೀ ಪುಕರಣದಲ್ಲಿ, ಶ್ರವಣಕ್ಕೆ ಉತ್ತರಿಸಿ ಪಾಢಾ ನಕ್ಷತ್ರವೇಧೆಯ ನಿಷೇಧವಾಕ್ಯಗಳೇ ಮೊದಲಾದುವು ಮಾತ್ರ ಸರ್ವಥಾ ಅಪ್ರಮಾಣಗಳೆಂದೇ ಬುದ್ಧಿಶಾಲಿಗಳು ತಿಳಿಯಬೇಕು. ಮಾಧವಾದಿ ಗ್ರಂಥಗಳಲ್ಲಿ ಹೇಳದಿರುವುದರಿಂದ ಈ ವಿಷಯಕ್ಕೆ (ಕಾಷ್ಯ 3)