ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸಾ ರ ದಾ . ಕಟ ಚತುರ್ಥಿ ವ್ರತವು ಬಂದರೆ ರಾತ್ರಿಯಲ್ಲಿ ಭೋಜನವಾಡಬೇ ಕು. ಸಾಮಾನ್ಯವಾಗಿ ಭಾನುವಾರ ರಾತ್ರಿ ಭೋಜನಮಾಡಕೂಡದೆಂ ಬ ನಿಷೇಧವು ಈ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ. ಹೀಗೆ ಅಪ್ಪಾ ಮೊದಲಾದುವುಗಳಿಂದ ಭೋಜನಕ್ಕೂ, ಭಾನುವಾರ ಮೊದಲಾ ದವುಗಳಿಂದ ರಾತ್ರಿ ಭೋಜನಕ್ಕೂ, ನಿಷೇಧವು. ಒಂದೇ ದಿನದಲ್ಲಿ ಉಂ ಟಾದರೆ ಆದಿವಸ ಉಪವಾಸವನ್ನೇ ಮಾಡಬೇಕು. ಪುತ್ತವಂತನಾದ ಗೃಹ ಸ್ಥನಿಗೆ ಸಂಕ್ರಮಣಾದಿಗಳಲ್ಲಿ ಉಪವಾಸಕ್ಕೂ, ಅದೇ ದಿನದಲ್ಲಿ ಅಪ್ಪಾ ಮೊದಲಾದವುಗಳಿಂದ ಹಗಲು ಭೋಜನಕ್ಕೂ, ಅವಕಾಶವಿಲ್ಲದಂತಾದರೆ, ಏನಾದರೂಸಲ್ಪ ಆಹಾರವನ್ನು ತೆಗೆದುಕೊಂಡು, ಉಪವಾಸವನ್ನೇ ನಾ ಡಬೇಕು, ಚಾಂದ್ರಾಯಣ ವ್ರತದಮಧ್ಯದಲ್ಲಿ ಏಕಾದಶೀ ವುತವುಬಂದರೆ. ಆದಿನದಲ್ಲಿ ಕ್ಲುಪ್ತವಾದ ಸಂಖ್ಯೆಗೆ ತಕ್ಕಷ್ಟು ತುತ್ತುಗಳನ್ನು ತೆಗೆದುಕೊಂ ಡು ಊಟವನ್ನೇ ಮಾಡಬೇಕು. ಕೃಚ್ಛ) ಮೊದಲಾದ ವುತಗಳಲ್ಲಿ ಹೀಗೆಯೇ ನಡೆಯಬೇಕು. ಏಕಾದಶೀ ದಿನದಲ್ಲಿ, ಹಿಂದಣ ದಿನಮಾ ಡಿದ್ದ ಉಪವಾಸಕ್ಕಾಗಿ ಪಾರಣೆಯನ್ನು ಮಾಡಬೇಕಾಗಿ ಬಂದರೆ ನೀರಿ ನಿಂದ ಪಾರಣೆಯನ್ನು ಮಾಡಿ ಉಪವಾಸಮಾಡಬೇಕು. ಮತ್ತು ದ್ವಾದ ಶಿಯದಿವಸಮಾಡಬೇಕಾದ ಪಾರಣೆಗೆ, ಮಾಸೋಪವಾಸ, ಶ್ರಾದ್ಧ, ಪ್ರದೋಷ, ಇವುಗಳಿಂದ ತೊಂದರೆಯುಂಟಾದರೂ ಜಲವಾರಣೆಯ ನ್ನು ಮಾಡಬೇಕು. ಏಕಾದಶಿ ಮೊದಲಾದ ಉಪವಾಸ ದಿನಗಳಲ್ಲಿ ಸಂಕ್ರಮಣವು ಬಂ ದರೆ ಪುತ್ರವಂತನಾದ ಗೃಹಸ್ಥನಿಗೆ (ಉಪವಾಸ ನಿಷೇಧವೂ, ಏಕಾದ ಶಿಯ ಉಪವಾಸವೂ, ಎರಡೂ ಪ್ರಾಪ್ತವಾಗುವುವು. ಆದ್ದರಿಂದ ನೀರು, ಗೆಡ್ಡೆಗೆಣಸು, ಹಣ್ಣು, ಹಾಲು, ಇವುಗಳನ್ನು ಆಹಾರವಾಗಿ ಉಪಯೋ ಗಿಸಿಕೊಂಡು, ಉಪವಾಸ ಮಾಡಜೇಕು. ಒಂದೇ ದಿನದಲ್ಲಿ, ಎರಡೆರ ಡು ಉಪವಾಸಗಳನ್ನೂ, ನಕ್ಕೆಗಳನ್ನೂ, ಏಕ ಭಕ್ಷ್ಯಗಳನ್ನೂ ಮಾಡ ಬೇಕಾಗಿ ಬಂದರೆ ಆ ಎರಡೂ ಯಾವ ಯಾವ ವಿಷಯಕ್ಕೆ ಸಂಬಂಧ ಪಟ್ಟ ವೆಯೋ, ಆ ಎರಡು ವಿಷಯಗಳನ್ನೂ ಉದ್ದೇಶಿಸಿ ಒಟ್ಟಿಗೆ ಉಪವಾಸ ಮೊದಲಾದುವನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿಕೊಂಡು ಒಟ್ಟಿಗೆ