ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸನ್ನು ಸಾರ. ೨೫ ಪೂಜೆ, ಹೋಮ ಮುಂತಾದ್ದನ್ನು ಮಾಡಬೇಕು. ಉಪವಾಸವೂ ಅಕ ಭಕ್ತವೂ ಒಂದೇ ದಿನದಲ್ಲಿ ಮಾಡಬೇಕಾದದ್ದಾದರೆ, ಆ ದಿನಕ್ಕೆ ಎರ ಡು ತಿಥಿಗಳ ವ್ಯಾಪ್ತಿ ಇದ್ದಲ್ಲಿ, ಉದಯತಿಥಿವ್ಯಾಪ್ತಿ ಕಾಲದಲ್ಲೊಂದ ನ್ಯೂ, ಎರಡನೆಯ ತಿಥಿವ್ಯಾಪ್ತಿ ಕಾಲದಲ್ಲಿ ಮತ್ತೊಂದನ್ನೂ, ಮಾಡ ಬೇಕು, ಹಾಗಿಲ್ಲದೆ ಅಖಂಡ ತಿಥಿಯಾಗಿದ್ದರೆ ಒಂದನ್ನು ತಾನು ಮಾಡಿ ಮತ್ತೊಂದನ್ನು ಮಗನೊದಲಾದವರಿಂದ ಮಾಡಿಸಬೇಕು. ಕಾಮೃ ನಿತ್ಯಸ್ಥಬಾಧಕಂ” ಇತ್ಯಾದಿವಾಕ್ಯಗಳಿಂದ ಕಾಮೃತವು ನಿತ್ಯಕ್ಕೆ ಬಾಧಕವಾದದ್ದು, ಎಂದರೆ ನಿತ್ಯಕ್ಕಿಂತ ಲೂ ಮುಖ್ಯವಾದದ್ದು, ಕಾವ್ಯ, ನಿತ್ಯ ಮೊದಲಾದವುಗಳಿಗೊಂದಕ್ಕೊಂ ದಕ್ಕಿರುವ ಬಲಾಬಲಗಳನ್ನು, ಒಂದು ಪ್ರಬಲವಾಗಿ ಮತ್ತೊಂದು ದುರ್ಬಲವಾಗುವದರಿಂದುಂಟಾಗುವ ಬಾಧೆ ಅಬಾಧೆಗಳನ್ನೂ ಅದರಿಂದ ಯಾವದು ಆಚರಿಸತಕ್ಕದ್ದು ? ಯಾವದು ಬಿಡತಕ್ಕದ್ದು ಎಂಬುದನ್ನೂ ವಿ ಚಾರ ಮಾಡಿ ಮಾಡಬೇಕಾದದ್ದನ್ನು, ಊಹಿಸಿಕೊಳ್ಳಬೇಕು. ಇಂತು ಸಾಮಾನ್ಯ ವ್ರತ ಪರಿಭಾವೆ, ಎಂಬ ಆರನೆಯ ಉದ್ದೇಶವು. (f) ಪುತಿಪದಾದಿ ತಿಥಿನಿಶ್ಚಯವು. (f) ಪ್ರತಿ ಸಥಿನಿಶ್ಚಯವು-ಪೂಜಾವತ ಮೊದಲಾದ ಶುಭ ಕರಗಳಲ್ಲಿ ಶುಕ್ಲ ಪ್ರತಿಪತ್ತಿಗೆ ಅಪರಾಹ್ವ್ಯಾಪ್ತಿ ಇದ್ದಲ್ಲಿ ಅಮಾವಾಸ್ಯೆ ಯ ವೇಧೆಯುಳ್ಳ ಪ್ರತಿಪತ್ತನ್ನು ಗ್ರಹಿಸಬೇಕು, ಸಾಯಾಹ್ನ ವ್ಯಾಪ್ತಿ ಇದ್ದರೂ ಅಮಾವಾಸ್ಯಾವಿದ್ದವಾದದ್ದೇ ಪ್ರಶಸ್ತವಾದದ್ದೆಂದು ಮಾಧವಾ ಚಾರೈರು ಹೇಳಿರುವರು. ಅದಕ್ಕಿಂತಲೂ ಹೆಚ್ಚು ವ್ಯಾಪನೆ ಇದ್ದರೆ ಅಂದರೆ ಆ ದಿನರಾತ್ರಿಗೂ ಪ್ರತಿಪಾಸ್ತಿ ಇದ್ದರೆ ದ್ವಿತೀಯೆಯಿಂದ ಕೂಡಿದ ಪ್ರತಿಪತ್ತನ್ನು ಗ್ರಹಿಸಬೇಕು. ಕೃಷ್ಮ ಪಕ್ಷ ಪ್ರತಿಪತ್ತು (ಸಾಡೇವು) ಯಾವಾಗಲೂ ದ್ವಿತೀಯೆಯಿಂದ ಕೂಡಿದ್ದೇ ಗ್ರಾಹ್ಯವು ಉಪವಾಸ ವಿಷಯದಲ್ಲಿ ಮಾತ್ರ ಅಮಾವಾಸ್ಟಾಯುಕ್ತವಾದ ಪ್ರತಿಪ ತನ್ನೇ ಶುಕ್ಲ ಪಕ್ಷದಲ್ಲಿಯೂ, ಕೃಷ್ಣ ಪಕ್ಷದಲ್ಲಿಯೂ ಸಹ ಅಂಗೀಕರಿ ಸಬೇಕು. ಅಪರಾಹ್ನ ವ್ಯಾಪ್ತಿ ಇರುವ ಪ್ರತಿಪತ್ತಿನಲ್ಲಿ ಮಾಡಬೇಕಾದ ಉಪವಾಸ ಮೊದಲಾದವುಗಳಿಗೆ ಪ್ರಾತಃ ಕಾಲದಲ್ಲಿಯೇ ಸಂಕಲ್ಪವನ್ನು