ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ.

•worwom ನಿಪ್ಪಲವಾಗುವುದಲ್ಲದೆ ಪತೃವಾಯವು ಸಂಭವಿಸಿ ಪತಿಗೆ ಆಯುಸ್ಸು ಕ್ಷೀಣವಾಗುವುದು. ತಮಗೆನರಕ ಪ್ರಾಪ್ತಿಯಾಗುವದು. ಉಪವಾಸ ಮಾಡುವದಕ್ಕೆ ಶಕ್ತಿಯಿಲ್ಲದವರಿಗೆ ನಕ್ತಂ ಹವಿಜ್ಞಾನ ಮನ್‌ದನಂ ವಾ ಫಲಂ ತಿಲಾಃ ಹೀರ ಮ - ಥಾಂಬು ಚಾ ಜೈಂ | ಯತ್ನಂಚಗವ್ರಂ ಯದಿ ಚಾ ಪಿ ವಾಯುಃ ಪ್ರಶಸ್ತ ಮತ್ತೊತ್ರರ ಮುತ್ತರಂಚ || ೧ || ನಕ್ಕೆ ಮಾಡುವುದು, ಅನ್ನ ವಲ್ಲದ ಹವಿಸ್ಮಪದಾರ್ಥವನ್ನು ತೆಗೆದುಕೊಳ್ಳು ವುದು, ಹಣ್ಣು, ಎಳ್ಳು, ಹಾಲು, ನೀರು, ತುಪ್ಪ, ಪಂಚಗವ್ಯ, ವಾಯು ಇವುಗಳಲ್ಲೊಂದರಿಂದ ಹಸಿವನ್ನಡಗಿಸಿಕೊಳ್ಳುವುದು ಸರಿಯಾದದ್ದು. ಇವುಗಳಲ್ಲಿ ಮೊದಲಿನಿಂದ ಕ್ರಮವಾಗಿ ಒಂದಕ್ಕಿಂತ ಮತ್ತೊಂದು ಶ್ರೇಷ್ಠವಾದದ್ದು !lall ಈರೀತಿಯಾಗಿ ಯಾವುದಾದರೂ ಒಂದು ಬಗೆಯಿಂದ ಉಪವಾಸ ಮಾಡಬೇಕಲ್ಲದೆ ಏಕಾದಶಿಯನ್ನೇ ಬಿಡಕೂಡದು, ಮರೆತು ಅಥವಾ ತಿಳಿಯದೆ ಏಕಾದಶಿಯ ಉಪವಾಸವನ್ನು ಮಾಡುವುದು ತಪ್ಪಿಹೋದರೆ ದ್ವಾದಶಿಯಲ್ಲಿಯಾದರೂ ಉಪವಾಸ ಮಾಡಬೇಕು. ದ್ವಾದಶಿಯಲ್ಲಿ ಯ ಮಾಡದಿದ್ದರೆ ಯವರ್ಮ ಚಾಂದ್ರಾಯಣವನ್ನು ಪ್ರಾಯಶ್ಚಿತ್ತ ರೂಪವಾಗಿ ಮಾಡಬೇಕು. ನಾಸ್ತಿಕತೆಯಿಂದ ಮಾಡದಿದ್ದರೆ ವಿಮೀ ಲಿಕಾ ಮಧ್ಯಚಾಂದ್ರಾಯಣವೇ ಪ್ರಾಯಶ್ಚಿತ್ತವು. ಉಪವಾಸಮಾಡು ವುದಕ್ಕೆ ಶಕ್ತಿ ಯಿಲ್ಲದ ಪತಿ,ತಂದೆ,ಮೊದಲಾದವರಿಗೆ ಬದಲಾಗಿಹೆಂಡತಿ, ಮಗ, ಅತ್ತಿಗೆ, ಸಹೋದರ, ಮೊದಲಾದವರಿಂದ ಮಾಡಿಸಿದರೆ ನೂರು ಅಶ್ವಮೇಧಯಾಗವನ್ನು ಮಾಡಿದಷ್ಟು ಪುಣ್ಯವುಂಟಾಗುವುದು, (೨೦) ವ್ರತ ಮಾಡಬೇಕಾದ ದಿನದ ನಿರಯವು. (೨೦) ವ್ರತದಿನ ನಿಶ್ಚಯವು, ವ್ರತನಾಡುವದಕ್ಕೆ ವೈಸ್ಕೂವರೆಂ ತಲೂ, ಸ್ಮಾರ್ತರೆಂ, ಎರಡ ವಿಧವಾದ ಅಧಿಕಾರಿಗಳುಂಟು. ಅವ ರಲ್ಲಿ ಪ್ರಾಯಶಃ ಯಸ್ಯದೀಕ್ಷಾವೈಷ್ಣವೀ ?” ಎಂಬ ವಚನಾನು ಸಾರವಾಗಿ ವಿಷ್ಣು ದೀಕ್ಷೆಯನ್ನು ವಹಿಸಿರುವವರು ವೈಷ್ಣವರೆಂತಲೂ, ಉಳಿದವರು ಸ್ಮಾರರೆಂತಲೂ ಮಹಾ ನಿಬಂಧಗಳಲ್ಲಿ ಹೇಳಿದೆ. ಆದರೂ