ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಶಾ ರ ದಾ. wwwwwwwwwwww

  • ವಂಶಪಾರಂ ಪರವಾಗಿ ಯಾರು ವೈಷ್ಣವರೆಂತಲೂ, ಸ್ಮಾರ್ತರೆಂ ತಲೂ, ಆಚರಣೆ ಬಂದಿದೆಯೋ ಅವರೇ ವೈವರೆಂತಲೂ,ಸ್ಪಾರ್ತರೆಂ ತಲೂ ಹೇಳಿಸಿಕೊಳ್ಳುವರೆಂದು ದೊಡ್ಡವರು ಹೇಳುತ್ತಾರೆ ” ಎಂದು ಹೇಳುವ “ಸಿಂಧು' ಕಾರನ ಅಭಿಪ್ರಾಯವನ್ನೇ ಎಲ್ಲಾದೇಶಗಳಲ್ಲಿಯೂ, ಶಿಪರು ಪರಿಗ್ರಹಿಸಿರುವರು. ವೇಧೆಯ ಸಹ ಸೂರೋದಯ ಕಾಲದವರೆಗೂ ದಶಮಿ ಇರುವುದೆಂತಲೂ, ಅರುಣೋದಯದವರೆಗೂ ದಶಮಿ ಇರುವದೆಂತಲೂ, ಎರಡು ವಿಧವಾಗಿದೆ. ಸೂರೋದಯಕ್ಕಿಂತ ನಾಲ್ಕುಗಳಿಗೆ ಮುಂಚೆ ಅರುಣೋದಯಕಾಲವು, ಹಿಂದಣದಿವಸವು ಸಂಪೂರ್ಣವಾಗಿ ಮುಗಿದಮೇಲೆ ಎಂದರೆ ೬೦ ಗಳಿಗೆಯಾದಮೇಲೆ ಬರುವ ಕಾಲವೇ ಸೂರೋದಯ ಕಾಲವು. (ಎಂದರೆ ಸೂರೇನು ಕಾಣಿಸುವಿಕೆ) ಆದ್ದರಿಂದ ಹಿಂದಣ ದಿವಸದಲ್ಲಿ ೫೬ ಗಳಿಗೆ ಕಳೆದಮೇಲೆ ದಶಮಿಯು ೧ ವಿಘಳಿಗೆ ಇದ್ದಾಗ ಆದಿವಸದಲ್ಲಿ ಅರುಣೋದಯವೇಧೆ ಯು ಏಕಾದಶಿಗೆ ಬರುವುದು. ಇದು ವೈಸ್ನವರ ವಿಷಯದಲ್ಲಿ ಮಾತ್ರ ಎಣಿಸಲ್ಪಡತಕ್ಕದ್ದು. ೬೧ ಗಳಿಗೆ ಕಳೆದ ಮೇಲಿನ ಸೂರೋದಯ ಕಾಲದಲ್ಲಿ ೧ ವಿಘಳಿಗೆಯ ಕಾಲ ದಶಮಿ ಇದ್ದಾಗ್ಯೂ ಸೂರೋದಯ ವೇಧೆ ಯೆನಿಸುವುದು. ಇದು ಸ್ವಾರ್ತಸಂಪ್ರದಾಯಕ್ಕೆ ಸಂಬಂಧಪ ಟ್ಟದ್ದು. ಜೋಯಿಸರುಗಳ ಚರ್ಚೆಯಿಂದ ವೇಧೆಯಲ್ಲಿ ಸಂದೇಹವುಂ ಟಾದರೆ

- ಬಹುವಾಕೃವಿರೋಧೀನ ಬ್ರಾಹ್ಮಣೇಷು ವಿವಾದಿಸು | - ಏಕಾದಶೀಂ ಪರಿತ್ಯಜ್ಞ ದ್ವಾದಶೀಂ ಸಮುಪೊಪ್ರಯೇತ್ ॥lol ಎಂಬ ವಚನಪ್ರಕಾರವಾಗಿ ದಶಮಿಯ ವೇಧೆಯ ವಿಷಯವು ಅನುಮಾ ನಾಸ್ಪದವಾಗಿದ್ದರೆ ಅಂತಹ ಏಕಾದಶಿಯನ್ನು ಬಿಟ್ಟು ದ್ವಾದಶಿಯ ದಿನವೇ ಉಪವಾಸ ಮಾಡಬಹುದು!lol! ಹೀಗೆ ಏಕಾದಶಿ, ಶುದ್ಧವಾದದ್ದೆಂತಲೂ, ವಿದ್ಧವಾದದ್ದೆಂತಲೂ, ಎರಡುವಿಧವಾಗಿದೆ. ಅರುಣೋದಯ ಕಾಲಕ್ಕೆ ದಶ ಏ'ಇದ್ದರೆಆ ಏಕಾದಶಿಯುವಿದ್ದವೆನಿಸುವದು. ವೈಷ್ಣವರು ಆ ಏಕಾ ದಶಿಯನ್ನು ಬಿಟ್ಟು ದ್ವಾದಶಿಯಲ್ಲಿ ಉಪವಾಸ ಮಾಡಬೇಕು. ಅರುಣೋ ದಯವೇಧೆಯಿಲ್ಲದ್ದು ಶುದ್ಧವೆನಿಸುವುದು. ಈ ಶುಕಾದಶಿಯು