ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ಒ•• ದಾನಕ್ಕೆ ಮಂತ್ರಗಳು :-ಸಮಸ್ತ ಪಾಪವನ್ನೂ ಪರಿಹಾರಮಾಡು ವ, ವಿಷ್ಣುರೂಪನಾದ ಸೂರೈನು ಈ ಭಹ್ನದಾನದಿಂದ ನನ್ನ ಪಾಪ ವನ್ನು ಹೋಗಲಾಡಿಸಲಿ || ೪ || ಸೂರರೂಪನಾಗಿಯೂ, ಲೋಕಕ್ಕೆ ಮಲಕಾರಣನಾಗಿಯೂ, ಇರುವ ನಾರಾಯಣ ಮೂರ್ತಿಯೇ! ಈ ವತದಿಂದ ನನಗೆ ಪುತ್ರರನ್ನೂ, ಐಶ್ವರವನ್ನೂ ಅನುಗ್ರಹಿಸು ||೫|| ಶಂಖಚಕ್ರಗದಾಪಾಣಿಯಾಗಿಯೂ, ಗರುಡವಾಹನನಾಗಿಯ, ಇರುವ ವಿಷ್ಣುವು ನನಗೆ ಪ್ರಸನ್ನನಾಗಲಿ ||೬|| ಕಲಾ, ಕಾಪ್ಪಾ, ನಿಮೆಪ, ಘಟಕಾ, ವೆ.ದಲಾದ ಕಾಲರೂಪನಾಗಿಯೂ ತಾನೇ ಇದ್ದುಕೊಂಡು ಸರಪ್ರಾಣಿಗಳಿಗೂ, ಭ್ರಾಂತಿಯನ್ನುಂಟುಮಾಡುತ್ತಿರುವ ವಿಷ್ಣುವಿಗೆ ನಮಸ್ಕಾರವು ||೭|| ಈ ಸ್ಥಳವೇ ಕುರುಕ್ಷೇತ್ರವು ಈ ಕಾಲವೇ ಚತು ರ್ದಶೀ ಪಾರ್ಣವಾಸೈಯ ಮಧ್ಯದಲ್ಲಿರುವ ಪುಣ್ಯ ಕಾಲವು ( ಸರಕಾ ಲವು) ಈ ಭಕ್ಷದಾನವು ಭೂದಾನಕ್ಕೆ ಸಮಾನವಾದದ್ದು , ಮಹಾ ವಿಷ್ಣುವೇ ! ತೆಗೆದುಕೊಂಡು ನನ್ನನ್ನು ಉದ್ದಾರವಾಡು || v || ಎಲೈ ಸೂರನೇ ! ಮಾಲಿನ್ಯವನ್ನೂ, ಪಾಪವನ್ನೂ ಹೋಗಲಾಡಿಸಿ ಕೊಳ್ಳುವು ದಕ, ಪುತ್ರ, ಪಾತ್ರರ ಅಭಿವೃದ್ಧಿಗೂ ನಿನಗೆ ಇದನ್ನು ದಾನವಾಗಿ ಕೊಡುತ್ತೇನೆ ||೯|| ಈ ಮಂತ್ರಗಳಿಂದ ತಿಳಿ ಭಕ್ಷಗಳನ್ನು ಅಧಿಕ ಮಾಸದಲ್ಲಿ ಪ್ರತಿದಿನವೂ ಯಾರು ದಾನಮಾಡುತ್ತಾರೆಯೋ ಅವರು ಅಪಾ ರವಾದ ಐಶ್ವವನ್ನೂ, ಪುತ್ರ ಪಾತ್ರಾಭಿವೃದ್ದಿ ಯನ್ನೂ ಹೊಂದುವರು.) ಏಕಾದಶೀ ಭೇದ ಮತ್ತು ಅವುಗಳ ನಿಲ್ಲಯದ ಪಟ್ಟಿ :- ಇಲ್ಲಿ 'ನ್ಯೂನ, ಎಂದರೆ ಸೂರೋದಯ ಕಾಲಕ್ಕಿಂತ ಮುಂಚಿತ ವಾಗಿ ಮುಗಿಯುವುದೆಂತಲೂ, 'ಸವ, ಎಂದರೆ ಸೂರೋದಯ ಕಾ ಲಕ್ಕೆ ಸರಿಯಾಗಿ ಮುಗಿಯತಕ್ಕದ್ದೆಂತಲೂ, ಎಂದರೆ ೬೦ ಘಳಿಗೆಯು ಳದ್ದೆಂತಲೂ, ಅಧಿಕ, ಎಂದರೆ ಸೂರೋದಯವಾದಮೇಲೂ ಇರತ ಕದ್ದೆಂತಲೂ ತಿಳಿಯಬೇಕು. ಮತ್ತು ಉದಾಹರಣೆಯಲ್ಲಿ ತೋರಿಸಿ ರುವ ಘಳಿಗೆಗಳ ಸಂಖ್ಯೆಯಲ್ಲಿ ಮೊದಲನೆಯದನ್ನು ಈ ಗ್ರಂಥಕಾರನು ಉದಹರಿಸಿದ್ದೆಂತಲೂ, ಎರಡನೆಯದು ಧಾಬಿ ಸರಕಾರನುಹೇಳಿರುವು ದೆಂತಲೂ, ತಿಳಿಯಬೇಕು.