ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಶಾ ರ ಡಾ . • + AhAvv 2 NAAYAKAMMA ದಶಮಿ ಇದ್ದರೆ 'ಮಹಾಪಲಯ' ಎಂತಲೂ ; ೫೯ ರವರಿಗೂ ಇದ್ದರೆ ಘೋರ' ವೆಂತಲ ೬೦ ಘಳಿಗೆ ಯವರಿಗಿದ್ದರೆ 'ರಾಕ್ಷಸ' ಎಂತಲೂ ನಾರದರು ವೇದಗಳಲ್ಲಿ ಭೇದವನ್ನು ಹೇಳಿರುವರು. ಮಾಧರೇ ಮೊದ ಲಾದ ಕೆಲವು ಮತಗಳ ಜನರಲ್ಲಿ ಕೆಲವರು ಮಾತ್ರ ಈ ಭೇದಗಳನ್ನು ಅನುಸರಿಸುವರು, ೫೬ ಘಳಿಗೆಯಲ್ಲಿರುವ ವಧೆಯನ್ನೇ, ಮಾಧವಾಚಾ ರ್ಯನೇ ಮೊದಲಾದ ಸರ್ವರೂ ಸಮ್ಮತಿಸಿರುವರೆಂದು ತಿಳಿಯಬೇಕು. ಉಪವಾಸವನ್ನುಳಿದ ಏಕಾದಶೀವ್ರತ ವಿಷಯದಲ್ಲಿಯೂ, ವತಾಂಗ ವಾದ ಸಂಕಲ್ಪ, ಪೂಜೆ, ಇವುಗಳ ವಿಷಯದಲ್ಲಿಯೂ, ೧೫ ಘಳಿಗೆಯ ವರಿಗೆ ದಶಮಿ ಇದ್ದು ಅನಂತರದಲ್ಲಿ ಬರುವ ಏಕಾದಶಿಯನ್ನು ಬಿಡ ಬೇಕು ; ಎಂದು ಹೇಳಿರುವುದು. ಅವುಗಳಲ್ಲಿಯೂ ಅಂತಹ ಏಕಾದ ಶಿಯನ್ನೇ ಸಂಪೂರ್ಣವಾಗಿ ಈ ದೋಷದಿಂದ ಬಿಡಬೇಕೆಂದು ಅರ್ಥವಲ್ಲ. ಆದರೆ ಬೆಳಗ್ಗೆ ಮಾಡಬೇಕಾದ ಸಂಕಲ್ಪ, ಪೂಜೆ, ಮೊದಲಾದದ್ದನ್ನು ಮಧ್ಯಾಹ್ನದ ಮೇಲೆ ಮಾಡಬೇಕೆಂದು ತಿಳಿಯಬೇಕು. (೨೭) ವುತಪ್ರಯೋಗ (ವಿಧಿ) (೨೭) ವುತಪ್ರಯೋಗ-ಉಪವಾಸ ದಿನದ ಪೂರ್ವದಿನದಲ್ಲಿ ಪ್ರ ತಃಕಾಲದಲ್ಲಿ ಉಪವಾಸ ಮಾಡುವವರು, ಸ್ವಾನಾದಿ ನಿತ್ಯಕರ್ಮವನ್ನು ಮಾಡಿ ಅನಂತರದಲ್ಲಿ, ದಶಮಿ ದಿನಮಾರಭ್ಯ ಕರಿಷ್ಮೆಹಂ ವುತಂತವ | ತಿದಿನಂ ದೇವದೇವೇಶ ನಿರಿಘ್ನಂ ಕುರು ಕೇಶವ !lall ಅಂದರೆ ಎಲೈ ಮಹಾವಿಷ್ಣುವೇ ನಾನು ದಶಮಿ ಮಾದಲು ಮಾಡಿ ಕೊಂಡು ಮೂರು ದಿನಗಳ ವರೆಗೂ ನಿನ್ನ ವುತವನ್ನು ಮಾಡುವೆನು,ನಿರಿ ಘ್ರವಾಗಿ ಈ ವ್ರತವನ್ನು ನೆರವೇರಿಸುವಂತೆ ಮಾಡು flol! ಎಂದು ಸಂಕ ಮಾಡಿಕೊಂಡು, ಮಧ್ಯಾಹ್ನ ದಲ್ಲಿ ಏಕಭಕ್ತವನ್ನು ಮಾಡಬೇಕು. ಏಕಭಕ್ತ ವಿಷಯದಲ್ಲಿ ನಿಯಮವೇನಂದರೆ-ಕಂಚಿನ ಪಾತ್ರೆ, ಮಾಂಸ, ಕಿರುಗಡಲೆ, ಹಗಲು ನಿದ್ರಿಸುವದು, ಮಿತಿಮೀರಿ ಊಟಮಾಡುವುದು, ಹೆಚ್ಚಾಗಿ ನೀರನ್ನು ಕುಡಿಯುವುದು, ಪುನಃ(ಎರಡನೆಯಸಾರಿ) ಊಟ ಮಾಡುವುದು, ಸ್ತ್ರೀಸಂಗ, ಜೇನುತುಪ್ಪ, ಸುಳ್ಳು, ಕಡಲೆ, ಹಾರಕ,