ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಶಾ ರ ದಾ ಮಾಡಕೂಡದು. ಹೀಗೆ ಶ್ರಾದ್ದಕ್ಕೆ ಅವಕಾಶವಿಲ್ಲದೆ ಸಂಕಟವು ಪತ್ರ ಪ್ರವಾದರೆ, ಈ ಸಂದರ್ಭದಲ್ಲಿಯೂ, ಪ್ರದೋಪಾದಿ ವ್ರತಗಳಲ್ಲಿಯ ಸಹ ತೀರ್ಥ ಜಲದಿಂದ ಪಾರಣೆಯನ್ನು ಮಾಡಬೇಕು. ದ್ವಾದಶಿಯು ಹೆಚ್ಚಾಗಿದ್ದರೆ ದ್ವಾದಶಿಯ ಮೊದಲನೆಯ ಪಾದವು ಹರಿವಾಸರವೆನ್ನಿಸಿ ಕೊಳ್ಳುವುದಾದ್ದರಿಂದ ಆ ಕಾಲವು ಕಳೆದಮೇಲೆ ಪಾರಣೆಯನ್ನು ಮಾಡಬೇಕು. ದ್ವಾದಶಿಯು ಕಲಾಮಾತ್ರವೂ ಇಲ್ಲದೆ ಇದ್ದರೆ ತ ಯೋದಶಿಯಲ್ಲಿಯೇ ಮಾರಣೆಯನ್ನು ಮಾಡಬೇಕು. ದ್ವಾದಶಿಯು ಮ ಧ್ಯಾಹ್ನವು ಕಳೆದ ಮೇಲೂ ಇದ್ದರೆ ಪ್ರಾತಃಕಾಲದ ಮೂರು ಮುಹೂ ರಗಳೊಳಗಾಗಿ (೬ಗಳಿಗೆ) ಯ ಪಾರಣೆ ಮಾಡಬೇಕಲ್ಲದೆ ಮಧ್ಯಾ ಹೃಮೊದಲಾದ ಕಾಲಗಳಲ್ಲಿ ಮಾಡಕೂಡದು ಎಂದು ಬಹು ಜನಗಳು ಅಭಿಪ್ರಾಯ ಪಡುವರು. ಮೂರು ಮುಹೂರಗಳೊಳಗಾಗಿ ಪಾರ ಣೆಮಾಡುವುದರಿಂದ ಅನೇಕ ಕರ ಕಾಲಗಳಿಗೆ ಬಾಧೆಯುಂಟಾಗುವುದ ರಿಂದ ಅಪರಾಗ್ಲದಲ್ಲಿಯೇ ಪಾರಣೆ ಮಾಡಬೇಕೆಂದು ಕೆರ್ಲರು ಹೇಳು ತ್ತಾರೆ. ಎಲ್ಲಮಾಸಗಳಲ್ಲಿಯ,ಶಕ್ಕೆ ಮತ್ತು ಕೃಷ್ಣ ಪಕ್ಷಗಳ ದ್ವಾದ ಶಿಗಳಿಗೆ ಶ್ರವಣ ನಕ್ಷತ್ರ ಯೋಗವಿದ್ದರೆ ಶಕ್ತಿಯುಳ್ಳವರು, ಏಕಾದಶಿ, ದ್ವಾದಶಿ ಇವುಗಳರಡರಲ್ಲಿಯೂ ಉಪವಾಸ ಮಾಡಬೇಕು. ಅಶಕರು ಏಕಾದಶಿಯಲ್ಲಿ ಫಲಾಹಾರಮೊದಲಾದ ಅನುಕಲ್ಪ ವನ್ನಾಚರಿಸಿ ಶ್ರವಣ ದ್ವಾದಶಿಯಲ್ಲಿ ಉಪವಾಸ ಮಾಡಬೇಕು. ವಿಷ್ಣು ಶೃಂಖಲ ಯೋಗವಿ ದ್ದರೆ ಶ್ರವಣ ದ್ವಾದಶಿ ಪ್ರಯುಕ್ತವಾದ ಉಪವಾಸವನ್ನೂ ಏಕಾದ ಶಿಯಲ್ಲಿದೆ. ಮಾಡಿ ದ್ವಾದಶಿಯ ದಿವಸ ಶ್ರವಣ ನಕ್ಷತ್ರವು ಕಳೆದ ಮೈ ಲೆ ಪಾರಣೆಯನ್ನು ಮಾಡಬೇಕು. ದ್ವಾದಶಿಯು ಶ್ರವಣನಕ್ಷತ್ರಕ್ಕಿಂ ತಲೂ ಕಡಮೆಯಾದ ಕಾಲವಿರುವುದಾಗಿದ್ದರೆ, ದ್ವಾದಶಿಯು ಪಾರಣೆ ಯಕಾಲಕ್ಕೆ ಕಳೆದು ಹೋಗುವದಾದ್ದರಿಂದ ದೋಷವುಂಟಾಗವ್ರದಾ ದಕಾರಣ, ಶ್ರವಣದಿಂದ ಕೂಡಿದ್ದಾಗಿದ್ದಾಗ್ಯಾದರೂ, ದ್ವಾದಶಿಯು ಇರುವ ಕಾಲದಲ್ಲಿಯೇ ಪರಣೆ ಮಾಡಬೇಕು. ವಿಷ್ಣು ಶೃಂಖಲಯೋ ಗ ಮೊದಲಾದುವುಗಳ ನಿಗ್ಧಯವನ್ನು ಭಾದ್ರಪದ ಮಾಸದಲ್ಲಿ ಒರುವ ಶ್ರವಣದ್ವಾದಶಿಯ ವಿಚಾರವನ್ನು ತಿಳಿಸುವ ಸ್ಥಳದಲ್ಲಿ ಹೇಳುವೆವು.