ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಶಾ ರ ದಾ. ಳನ್ನೂ, ಬಿಟ್ಟ ಮೇಲೆ (ಮೋಕ್ಷವಾದಮೇಲೆ) ಸ್ನಾನವನ್ನೂ ಕ್ರಮವಾಗಿ ಮಾಡಬೇಕು. ಸ್ನಾನಮಾಡುವ ಜಲಗಳಲ್ಲಿ ತಾರತಮ್ಯವುಂಟು. ಹೇಗಂದರೆ ಶೀತ ಮುಖ್ಯೋದಕಪ್ಪು ಮಚಾರಕ್ಕಂ ಪರೋದಕಾತ್|| ಭೂಮಿ ಮುದ್ದತಾ ತುಂ ತತಃ ಪ್ರಪ್ರವಣೋದಕಂ ||೧|| ತತೋಪಿಸಾರಸಂ ಪುಣ್ಯಂ ತತಃ ಪುಂನದೀ ಜಲಂ || ತತರ್ಥನದೀಗಂಗಾ ಪುಣ್ಯಾ ಪುಣ್ಯಸ್ತತೋಂಬುಧಿಃ ||೨|| ಅಂದರೆ-ಬಿಸಿನೀರಿಗಿಂತಲೂ ತಣ್ಣೀರು ಗ್ರಹಣಸ್ತಾನಕ್ಕೆ ಉತ್ತ ಮವಾದದ್ದು, ಬೇರೊಬ್ಬರ ಮನೆಯ ನೀರಿಗಿಂತಲೂ ತಮ್ಮ ತಮ್ಮ ಮನೆ ಯ ನೀರು ಶ್ರೇಷ್ಠವಾದದ್ದು. ಪಾತ್ರೆಯಲ್ಲಿ ತುಂಬಿಕೊಂಡು ಸ್ನಾನಮಾ ಡುವುದಕ್ಕಿಂತಲೂ ನೆಲದಲ್ಲಿ ನಿಂತಿರುವುದರಲ್ಲಿ ಸ್ನಾನವು ಪ್ರಶಸ್ತವಾದದ್ದು. ಅದಕ್ಕಿಂತಲೂ ಹರಿವನೀರು ಯೋಗ್ಯವಾದದ್ದು || ೧ || ಅದಕ್ಕಿಂತಲೂ ಸರೋವರದ (ಕೆರೆ) ನೀರುಶುದ್ದ ವಾದದ್ದು, ಅದಕ್ಕಿಂತಲೂ ನದಿಯ ನೀರು ಪುಣ್ಯತಮವಾದದ್ದು. ಅದರಲ್ಲಿಯೂ (ನದಿಗಳಲ್ಲಿ) ಗಂಗಾನದಿಯ ಜಲವು ಅತ್ಯುತ್ತಮವಾದದ್ದು. ಅದಕ್ಕಿಂತಲೂ ಸಮುದ್ರೋದಕವು ಅತ್ಯಂತ ಶ್ರೇಷ್ಠವಾದದ್ದು. ||೨|| ಸ್ನಾನನಿಲ್ಲಯವು. ಗ್ರಹಣಕಾಲದಲ್ಲಿ ಸಚೈಲಸ್ನಾನವನ್ನು (ಉಟ್ಟ ಹೊದೆದ ಬಟ್ಟೆ ಗಳನ್ನು ತೆಗೆದು ಬೇರೆಬಟ್ಟೆಗಳನ್ನು ಸುತ್ತಿಕೊಳ್ಳದೆ) ಮಾಡಬೇಕು. ಸ ಚೇಲನವು ಮೋಕ್ಷ ಕಾಲದಲ್ಲಿ ಮಾಡಬೇಕಾದದ್ದೆಂದು ಕೆಲವರು. ಮೋಕ್ಷಸ್ನಾನವನ್ನು ಮಾಡದಿದ್ದರೆ ಸೂತಕಿತವು (ಮೈಲಿಗೆ) ಹೋಗು ವುದಿಲ್ಲ. ಗ್ರಹಣದಲ್ಲಿ ಅನಂತಕವಾಗಿ (ವಾರುಣಾದಿ ಮಂತ್ರೋಚ್ಛಾರ ಸಮಾಡದೆ) ಸ್ನಾನಮಾಡಬೇಕು. ಸುವಾಸಿನಿಯರು ಶಿರಸಾನಮಾಡ ಬೇಕಾದ್ದಿಲ್ಲ ಕಂಠ ಸ್ಥಾನಮಾಡಿದರೂ ಮಾಡಬಹುದು, ಆದರೆ ಯೋಗ್ಯ ರಾದ ಸ್ತ್ರೀಯರು ಗ್ರಹಣಕಾಲದಲ್ಲಿ ಶಿರಸನವನ್ನು ಮಾಡುತ್ತಾರೆ. ಜಾತಾಶೌಚಮೃತಾ ಶೌಚಗಳಲ್ಲಿ ಗ್ರಹಣ ನಿಮಿತ್ತವಾದ ಸ್ಥಾನ, ದಾನ, ಕ್ರಾದ್ಧಾದಿಗಳನ್ನು ಮಾಡಲೇ ಬೇಕು.