ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. 2 ಇಾನೇ ನೈಮಿತ್ತಿಕೇ ಪ್ರಾಪ್ತ ನಾರೀ ಯದಿರಜಸ್ವಲಾ | ಪಾತ್ರಾನ್ನರಿತತೋಯೇನ ಸ್ನಾನಂ ಕೃತ್ರಾವತಂಚರೇತ್ ||೧|| ನವಸ್ತ್ರವೀಡನಂಕುರಾನ್ನಾ ನೃದಾಸಶ್ಚಧಾರಯೇತ್ | ಎಂದರೆ-ಗ್ರಹಣಮೊದಲಾದ ನಿಮಿತ್ತ (ಕಾರಣ)ಗಳಿಂದ ಸ್ನಾನ ಮಾಡಬೇಕಾಗಿ ಬಂದ ಕಾಲಗಳಲ್ಲಿ ಸ್ತ್ರೀಯು ರಜಸ್ವಲೆಯಾಗಿದ್ದರೆ ಪಾ ತ್ರೆಯಲ್ಲಿ ತುಂಬಿದ ನೀರಿನಲ್ಲಿ ಸ್ನಾನಮಾಡಿ (ಭೂಸ್ಪರ್ಶವುಳ್ಳ ನೀರಿನಲ್ಲಿ ಸ್ನಾನಮಾಡದೆ) ಉಪವಾಸಾದಿ ವ್ರತಗಳನ್ನು ಮಾಡಬೇಕು ||೧|| ತನ್ನ ಬಟ್ಟೆಗಳನ್ನು ಹಿಂಡಲೂ ಕೂಡದು, ಬೇರೆ ಬಟ್ಟೆಗಳನ್ನು ಧರಿಸಲೂ ಕೂ ಡದು || ಮರುರಾತ್ರಿಗಳು ಅಥವಾ ಒಂದುರಾತ್ರಿ ಉಪವಾಸಮಾಡಿ ಗ್ರಹಣದಲ್ಲಿ ಸ್ವಾನದಾನಾದಿಗಳನ್ನು ಆಚರಿಸಿದರೆ ಮಹಾಫಲವು ಪ್ರಾಪ್ತ ವಾಗುವುದು. ಒಂದುರಾತ್ರಿ ಉಪವಾಸಮಾಡಬೇಕಾದರೆ ಗ್ರಹಣವಾಗು ವ ದಿನದ ಪೂರ ದಿನದಲ್ಲಿ ಮಾಡಬೇಕೆಂದು ಕೆಲವರು ಅಭಿಪ್ರಾಯಪಡು ತ್ತಾರೆ. ಗ್ರಹಣಕ್ಕೆ ಸೇರಿದ ಒಂದು ಹಗಲುರಾತ್ರಿಗಳಲ್ಲಿ ಉಪವಾಸವೆಂ ದು ಮತ್ತೆ ಕೆಲವರು ಹೇಳುವರು. ಪುತ್ರವಂತನಾದ ಗೃಹಸ್ಥನಿಗೆ ಗ್ರಹಣ ಸಂಕ್ರಾನಿ ಮೊದಲಾದುವುಗಳಲ್ಲಿ ಉಪವಾಸವಿಲ್ಲ. ಪುತ್ರವಂತನೆಂಬುದರಿಂ ದ ಹೆಣ್ಣು ಮಕ್ಕಳುಳ್ಳವನೂ ಉಪವಾಸಮಾಡಕೂಡದೆಂದು ಕೆಲವರು, ಗ್ರ ಹಣಕಾಲದಲ್ಲಿ ದೇವತರ್ಪಣ, ಪಿತೃತರ್ಪಣಗಳನ್ನು ಮಾಡಬೇಕೆಂಬು ದು ಕೆಲವರ ಮತವು. 'ಸರೋಷಾವೆವವರಾನಾಂ ಸೂತಕಂ ರಾಹು ದರ್ಶನೆ” ಎಂದರೆ-ಗ್ರಹಣವನ್ನು ನೋಡುವುದರಿಂದ ಎಲ್ಲಜಾತಿಯವರಿಗೂ ಅಶುಚಿತ್ರವು (ಮೈಲಿಗೆ) ಉಂಟು, ಆದ್ದರಿಂದ ಗ್ರಹಣ ಕಾಲದಲ್ಲಿ ತಾವು ಮುಟ್ಟಿಕೊಂಡಿದ್ದ ಬಟ್ಟೆ ಮೊದಲಾದವನ್ನು ಬಗೆವುದು ಮೊದಲಾದ್ದರಿಂದ ಶುದ್ದಿ ಮಾಡಬೇಕು, ಗ್ರಹಣದಲ್ಲಿ ಗೋದಾನ, ಭೂದಾನ, ಸುವರ್ಣದಾನ ಮೊದಲಾದ ದಾನಗಳನ್ನು ಮಾಡಿದರೆ ಬಹಳ ಪುಣ್ಯವುಂಟು. ತಪಸ್ಟ, ಜ್ಞಾನವೂ,ಇವೆರಡೂ ಉಳ್ಳ ಪಾತ್ರವು ದಾನಕ್ಕೆ ಯೋಗ್ಯವಾದದ್ದು ಸತ್ಪಾ ತ್ರದಲ್ಲಿ ಮಾಡಿದ ದಾನವು ಅತಿಶಯವಾದ ಪುಣ್ಯವನ್ನುಂಟುಮಾಡುವುದು. ಸರಂಗಂಗಾಸಮಂತೋಯಂ ಸರೆವಾಸಸಮಾದಿಜಾಃ || ಸಂಭೂಮಿಸನಂದನಂ ಗ್ರಹಣೇಚಂದ್ರಸೂರ್ಯಯೋllol