ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಶಾ ರ ದಾ. ಮಾಡಿಗ್ರಹಣದಿನದಲ್ಲಿ ಸ್ಪರ್ಶವಾದದ್ದು (ಹಿಡಿವುದಕ್ಕೆ ಪ್ರಾರಂಭವಾದದ್ದು ) ಮೊದಲು ಮೋಕ್ಷವಾಗುವ (ಬಿಡುವ)ವರೆಗೂ ಶಾಂತಚಿತ್ತನಾಗಿ ಯಥಾ ಶಕ್ತಿ ಮಂತ್ರ ಜಪವನ್ನು ಮಾಡಬೇಕು. !lol! ಜಪವು ಪೂರೈಸಿದ ಮೇಲೆ ಜನಸಂಖ್ಯೆಯ ಹತ್ತರಷ್ಟು ಹೋಮಗಳನ್ನೂ ಹೋಮದ ಹತ್ತರಷ್ಟು ತರ್ಪಣವನ್ನೂ ಮಾಡಬೇಕು. ಹೋಮಮಾಡುವ ಶಕ್ತಿ ಇಲ್ಲದಿದ್ದರೆ ಹೋಮಸಂಖ್ಯೆಯ ನಾಲ್ಕರಷ್ಟ ಜಪವನ್ನು ಮಾಡಬೇಕು. ೨li ಮಲ ಮಂತ್ರವನ್ನು ಉಚ್ಛಾರಣೆ ಮಾಡಿ, ಆ ಮಂತ್ರದ ಕೊನೆಯಲ್ಲಿ ದ್ವಿತೀಯಾಧಿ ತವಾಗಿ ಮಂತ್ರದೇವತೆಯ ನಾಮವನ್ನು ಉಚ್ಚರಿಸಿ (ಅಮುಕಾಂ ದೇವತಾಮಹಂತರ್ಪಯಾಮಿನಮಃ)ಈ ದೇವತೆಯನ್ನು ಕುರಿತುನಾನು ತರ್ಪಣಮಾಡುತ್ತೇನೆ, ನಮಸ್ಕಾರವು ಎಂಬದಾಗಿ ಯವಾಕ್ಷತೆಮೊದಲಾ ದವುಗಳಿಂದ ಕೂಡಿದ ಜಲಾಂಜಲಿಗಳಿಂದ, ಹೋಮದ ದಶಗುಣವಾಗಿ ತರ್ಪಣಮಾಡಬೇಕು. ಹೀಗೆ ನಮಶ್ಚಬ್ಬವು ಕೊನೆಯಲ್ಲಿ ಬರುವಂತೆ ಮೂಲಮಂತ್ರೋಚ್ಚಾರಣೆ ಮಾಡಿ ( ಅಮುಕಾಂ ದೇವತಾಮಹಮಭಿಪ್ರಿಂ ಚಾಮೃನೇನ) ಈ ಉದಕದಿಂದ ಈ ದೇವತೆಯನ್ನು ನಾನು ಅಭಿಪೇ ಕಮಾಡುತ್ತೇನೆ ಎಂದು ಹೇಳಿ ನೀರನ್ನು ತನ್ನ ತಲೆಯಮೇಲೆ ಪ್ರೋಕ್ಷಿಸಿ ಕೊಳ್ಳಬೇಕು ಈ ಮಾರ್ಜನೆಯನ್ನು ತರ್ಪಣದ ಹತ್ತರಷ್ಟು ಮಾಡಿಕೊ ಳ್ಳಬೇಕು. ಮಾರ್ಜನ ಸಂಖ್ಯೆಯ ಹತ್ತರಷ್ಟು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. ಅಂತು ಮಂತ್ರ ಪುರಶ್ಚರಣೆಯು, ಜಪ, ಹೋಮ, ತ ರ್ಪಣ, ಮಾರ್ಜನ, ಬ್ರಾಹ್ಮಣಭೋಜನಗಳೆಂಬ ಐದು ಕರಗಳಿಂದ ಕೂಡಿದ್ದು, ತರ್ಪಣಮೊದಲಾದವುಗಳನ್ನು ನಡೆಯಿಸುವುದಕ್ಕಾಗದ ಪಕ್ಷ ದಲ್ಲಿ ಆಯಾಕರಗಳ ನಾಲ್ಕರಷ್ಯ ಜಪವನ್ನೇ ಮಾಡಬೇಕು ಗ್ರಹಣಕಾ ಲದಲ್ಲಿ ಮಾಡಬೇಕಾದ ಈ ಮಂತ್ರ ಪುರಶ್ಚರಣಕಮವು ಗ್ರಸ್ತೋದಯ ಗ್ರಸ್ತಾಸ್ತ್ರಗ್ರಹಣಗಳಲ್ಲಿ ನಡೆಯಲಾಗದು, ಪುರಶ್ಚರಣಾಂಗವಾದ ಉಪ ವಾಸವನ್ನು ಪುತ್ರವಂತರಾದ ಗೃಹಸ್ಥರೂ ಸಹ ಮಾಡಬೇಕು. ಪುರಶ್ಚರಣೆ ಮಾಡುವವನು ಗ್ರಹಣನಿಮಿತ್ತವಾದ ಸ್ಥಾನ, ದಾನ, ಮೊದಲಾದುವನ್ನು ಬಿಡುವುದರಿಂದಲೂ ಪ್ರತೃವಾಯುವುಂಟಾಗುವುದರಿಂದ ತನ್ನ ಹೆಂಡತಿ, ಮಗ, ಮೊದಲಾದ ಪ್ರತಿನಿಧಿಗಳಿಂದ (ಬದಲು) ಈ ನೈಮಿತ್ತಿಕಕರ್ಮಗ ಳನ್ನು ಮಾಡಿಸಬೇಕು.