ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V4 ಶಾ ರ ದಾ. YYY #•••••••••N VyY #2 f++++v vv | 11 Ivy2 /// '/ (ವೀರವತ್ತಾಗಿರುವುದಿಲ್ಲ) ಗ್ರಹಣಕಾಲದಲ್ಲಿ ಮಲಗುವವನು ರೋಗ ಗಸ್ತನಾಗುವನು. ಮೂತೊ ತ್ಸರ್ಜನ ಮಾಡುವವನು, ದರಿದ್ರನಾಗು ವನು, ಪುರೀಪೋತ್ಸರ್ಗಮಾಡಿದವನು ಕಿವಿ:ಯಾಗಿ ಹುಟ್ಟುವನು. ಸಂ ಭೋಗಮಾಡಿದವನು ಊರಹಂದಿಯಾಗುವನು. ಅಭ್ಯಂಜನಸ್ನಾನಮಾ ಡುವವನು ಕುಷ್ಟರೋಗಿ ಯಾಗುವನು, ಭೋಜನಮಾಡುವವನು ನರಕ ಭಾಜನನಾಗುವನು. ಗ್ರಹಣಕಾಲದಲ್ಲಿ ಬಿಡಬೇಕಾದವುಗಳು. ಗ್ರಹಣಕ್ಕೆ ಪೂರದಲ್ಲಿ ಅಟ್ಟ ಅನ್ನವನ್ನು ಗ್ರಹಣಾನಂತರದಲ್ಲಿ ಬಿಟ್ಟು ಬಿಡಬೇಕು. ಹೀಗೆ ಗ್ರಹಣ ಕಾಲದಲ್ಲಿ ತಂದಿಟ್ಟ ನೀರನ್ನು ಕುಡಿದರೆ ಪಾದಕೃಚ್ಛ ) (ಕೃಘ್ನ ದ + ಭಾಗ) ವನ್ನು ಪ್ರಾಯಶ್ಚಿತ್ತವಾಗಿ ಹೇಳಿ ರುವುದರಿಂದ ಅಂತಹ ನೀರನ್ನೂ ಬಿಡಬೇಕು. ಗಂಜಿ, ಮಜ್ಜಿಗೆ, ಎಣ್ಣೆ ತಪ್ಪ ಇವುಗಳಿಂದ ಪಕ್ಷ ಮಾಡಿದ್ದ ಅನ್ನ, ಹಾಲು; ಇವುಗಳನ್ನು ಗ್ರಹಣ ಕ್ಕಿಂತ ಪೂರದಲ್ಲಿ ಮಾಡಿಟ್ಟಿದ್ದಾಗ್ಯೂ ಗ್ರಹಣಾನಂತರದಲ್ಲಿ ಸ್ವೀಕರಿಸಬ ಹದ, ಹಾಲು, ಮೊಸರು, ಮಜ್ಜಿಗೆ, ಮೊದಲಾದ ಗೋರಸಗಳಿಗೆ ಸ್ವಲ್ಪ ತುಪ್ಪವನ್ನು ಹಾಕಿ, ಗ್ರಹಣಕಾಲದಲ್ಲಿ ದರ್ಭೆಯಿಂದ ಮುಚ್ಚಿ ಟ್ಟು ಅನಂತರದಲ್ಲಿ ಉಪಯೋಗಿಸಬಹುದು.

  • ಗ್ರಹಣವೇಧ ವಿಚಾರವು. ಸೂರಗ್ರಹಣವಾದರೆ ಗ್ರಹಣಕಾಲದ ಹಿಂದಣ ನಾಲ್ಕು ಯಾವ ಗಳಿಗೆ ವೇಧೆಯುಂಟಾಗುವುದು, ಚಂದ್ರಗ್ರಹಣದಲ್ಲಿ ಹಿಂದಿನ ಮೂರು ಯಾಮಗಳಿಗೆ ವೇಧೆಯುಂಟು. ಅಂದರೆ ಹಗಲಿನ ಮೊದಲನೆಯ ಯಾವ ದಲ್ಲಿ ಸೂರಗ್ರಹಣವಾದರೆ ಹಿಂದಣ ರಾತ್ರಿಯ ನಾಲ್ಕು ಯಾಮಗಳಲ್ಲಿ ಊಟಮಾಡಕೂಡದು. ಎರಡನೆಯ ಯಾವದಲ್ಲಿ ಗ್ರಹಣವಾದರೆ ಹಿಂದಣ ರಾತ್ರಿಯ ಎರಡನೆಯ ಯಾವ ಮೊದಲಾದುವುಗಳಲ್ಲಿ ಭೋಜನವಾಡ ಕೂಡದು. ಹೀಗೆಯೇ ರಾತ್ರಿಯ ಮೊದಲ ಯಾಮದಲ್ಲಿ ಗ್ರಹಣವಾದರೆ ಹಗಲ ಎರಡನೆಯ ಯಾಮಾದಿಗಳಲ್ಲಿ ಭೋಜನವು ಕೂಡದು. ರಾತ್ರಿಯ ಎರಡನೆಯ ಯಾಮಾದಿಗಳಲ್ಲಿ ಗ್ರಹಣವಾದರೆ ಹಗಲಿನಮೂರನೆಯ ಯಾ ಮಾದಿಗಳಲ್ಲಿ ಭೋಜನವನ್ನು ಬಿಡಬೇಕು. ಬಾಲರು, ವೃದ್ಧರು, ರೋಗಿ