ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(. ಮಡಿಲಿಗೆಗಳು ಗಳಿಂದ ಏನು ಅನರ್ಥವಾಗಿರುತ್ತದೆ? - ಸುಧಾರಕ-ನಮ್ಮ ದೇಶವು ಬಹು ದಿವಸಗಳಿಂದ ಪತಿಗತಂತ್ರವನ್ನು ಅನು ಭವಿಸಹತ್ತಿದ್ದು ಸಾಕಾಗದೇ? ಇದಕ ಹೆಚ್ಚಿನ ಅನರ್ಥವು ಇನ್ನೇನಾಗಬೇಕು? ಆಚಾರ್ಯ-ಒಳ್ಳೇ ಉದಾಹರಣೆಯನ್ನು ಹೇಳಿದೆ; ದೇಶವು ಪಾರತಂತ್ರ್ಯ ದಲ್ಲಿ ಸಿಗುವದಕ ನವ ಮಡಿ-ಮೈಲಿಗೆಗಳಿಗೂ ಸಂಬಂಧವೇನು? : ಸುಧಾರಕ-ನಿಮ್ಮ ಈ ಹಾಳು ಗೊಂದಲವಿಲ್ಲದಿದ್ದರೆ ನಮ್ಮ ದೇಶವು ಬಹು ಸುಖಿಯಾಗಿರುತ್ತಿತ್ತು; ೬೦ತೇ ನಮ್ಮ ಸುಧಾರಕರು ಜಾತಿಭೇದವನ್ನು ಮುರಿದೆ ಗಿದು ಜಗತ್ತಿನಲ್ಲಿ ಅಖಂಡಸೌಖ್ಯವನ್ನುಂಟು ಮಾಡಬೇಕೆಂದು ನಿಶ್ಚಯಿಸಿದ್ದಾರೆ. ಆಚಾರ್ಯ- ನಾನು ಇದನ್ನು 1: ಒ೦ ನ್ನು ಸಧಾರಕರ ಪೌರುಷವನ್ನೇಕೊಚ್ಚಹತ್ತಿದೆ? ಸುಧಾರಕ-ತಾತಿಭೇದಕ ನಿಮ್ಮ ಮಡಿ-ಮೈಲಿಗೆಗಳಿಗೂ ಬಹಳ ಸಂಬಂ ಧವಿರುತ್ತದೆ. ಹ್ಯಾಗಂದರೆ ನೀವು ಪಂಚಮರನ್ನು (ಅತಿಶೂದ್ರ) ಮುಟ್ಟಿಸಿಕೊಳ್ಳು ನದಿ. ಇದು ನಿಮ್ಮ ವ.ಡಿ-ಮೈಲಿಗೆಯ ಗೊ೦ದಲದ ಪರಿಣಾಮವಲ್ಲವೇ? ಒಬ್ಬ ಅತಿ ತದ್ರನ ದೂತರದ ಒಂದು ತುಣುಕು ಸಾವಿರಾರು ಜನ ಬ್ರಾಹ್ಮಣರನ್ನು ಮೈಲಿಗೆ ಮಾಡಿಬಿಡುತ್ತದೆ. ಅಷ್ಟು ಮೈಲಿಗೆಯ ರಾಶಿಗೆ-ರಾಶಿಯೇ ಆ ತುಣುಕಿ ನಲ್ಲಿ ಅಡಕವಾಗಿರುವದಲ್ಲವೇ? ಇದರಿಂದ ಆ ಅತಿಶೂದ್ರರ ಸಮಾಜದಲ್ಲಿ ಎಷ್ಟು ಏತುಷ್ಟತೆಯುಂಟಾಗಿದೆ ಎಂಬದರ ಕಲ್ಪನೆಯು ನಿಮಗೇನಾದರೂ ಉಂಟೋ? ನಮ್ಮ ಅಂತ್ಯ ಬಿದ್ದಾರವೆಂಬ ಸಾಪ್ತಾಹಿಕ ಪತ್ರವನ್ನು ಓದಿ ನೋಡಿರಿ; ಅ೦ದರೆ ನಿಮ್ಮ ಕಣ್ಣುಗಳು ನಿಚ್ಚಳವಾಗಿ ತೆರೆಯುವವು. ಈ ಅತಿಶೂದ್ರರ ಮಾತು ಒತ್ತ ಟ್ಟಿಗಿರಲಿ, ನಿಮ್ಮ ಜಾತಿಯಲ್ಲಿ ಹುಟ್ಟಿ ಸಿಮ್ಮ ವಂಶವನ್ನು ಬೆಳೆಸುವದಕ್ಕೆ ಬದ್ಧರಾದ ಸ್ತ್ರೀಯರ ವಿಷಯವಾಗಿಯಾದರೂ ಯಾವಾಗಲೂ ನೀವೆಲ್ಲಿ ಕೃತಜ್ಞತೆಯನ್ನು ತಾಳು ತೀರಿ? ವಿಧಿವಶಾತ್ ಅವರಿಗೆ ವೈಧವ್ಯವು ಬರಲು, ಅವರು ಕೂದಲು ತೆಗೆಯಿಸದಿ ದ್ದರೆ, ಅವರನ್ನು ಮಡಿ-ಮೈಲಿಗೆಯ ಶುಷ್ಕ ಕಾಷ್ಠವು ಬೆನ್ನಟ್ಟುವದು, ಅದರಕಾಟವ ನ್ನು ತಾಳಲಾರದೆ ಎಷ್ಟೋ ಜನ ಕೋಮಲೆಯರು ಗೋಳಾಡುತ್ತ ತಮ್ಮ ಮನೋಹ ರವಾದ ಕೂದಲುಗಳ ಭಾರವನ್ನಿಳಿಸಿ ಸೌಂದರ್ಯ ವಿಹೀನರಾಗುವರು. ಪಾಯ! ಹಾಯ!! ಈ ದುಷ್ಟ ಪದ್ಧತಿಗಾಗಿ ಅವರು ನಿಮ್ಮನ್ನೆಷ್ಟು ಶಪಿಸುತ್ತಿರುವರೆಂಬದನ್ನು ಯಾರುಹೇಳಬೇಕು? ಇವೆಲ್ಲಸಮಾಜದಲ್ಲಿ ನಡೆದ ಅನರ್ಥಗಳಲ್ಲವೆ? ಇಂಥ ಅನರ್ಥಗ ಇನ್ನು ನಾಶಗೊಳಿಸುವದಕ್ಕೆ ನಾವು (ಸುಧಾರಕರು) ಪುನರ್ವಿವಾಹವನ್ನು ಬಳಿಕೆಯ