ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಆ ತಂದಿರುತ್ತೇವೆ. ಅಂತ್ಯಜರ ಕೂಡ ವ್ಯವಹಾರಮಾಡಹತ್ತಿದ್ದೇವೆ, ಮೊನ್ನೆ ನಮ್ಮ ಮಾಜೇ ನಾ, ಪಟೇಲರವರು ಕೌನ್ಸಿಲದಲ್ಲಿ ತಂದ ಬಿಲ್ಲು ಪಾಸಾಗಿದ್ದರೆ, ನಿಮ್ಮ ವೈದಿಕ ಧರ್ಮವು ಇಷ್ಟೊತ್ತಿಗೆ ಗುಡಿಚಾಪೆ ಕಟ್ಟುತ್ತಿತ್ತು. ಇರಲಿ, ತಗಾದ ರೂ ಏನಾಯಿತು? ಮುಂದಾದರೂ ಆ ಪ್ರಸಂಗವು ಬಂದೀತು. ಆಚಾರ್ಯ-ಸುಧಾರಕರಾದ ನಿಮ್ಮ ಆಕ್ಷೇಪಣೆಗಳು ಇಲ್ಲಿಗೇ ತೀರಿದ ನೋ, ಅಥವಾ ಇನ್ನೂ ಇರುವವೋ? | - ಸುಧಾರಕ.ಎಲೈ ಬ್ರಾಹ್ಮಣ, ತಿಂಗಳಗಟ್ಟಲೆ ಕೇಳು, ನಿಮ್ಮ ಹುಳುಕು ಗಳನ್ನು ಬೇಸರಿಯದೆ ಹೇಳುತ್ತೇನೆ. ಆದರೆ ಎಷ್ಟು ಹೇಳಿದರೂ ಅವೇನೂ ಮು ಗಿಯುವ ಹಾಗಿಲ್ಲ. ಹೀಗೆ ಯಾಕೆ ಮಾಡಬೇಕೆಂದು ಕೇಳಿದರೆ, ಸಮರ್ಪಕವಾ ಗಿ ಉತ್ತರವನ್ನು ಕೂಡಾ ಹೇಳಲಿಕ್ಕೆ ನಿಮಗೆ ಬರುವದಿಲ್ಲ. ಆಚಾರ್ಯ (ಅಭಿಮಾನದಿಂದ)-ಯಾಕೆ ಉತ್ರ ವನ್ನು ಹೇಳಲಿಕ್ಕೆ ಬರು ವದಿಲ್ಲ? ಸುಧಾರಕ-ಹಾಗಾದರೆ ಹೇಳಿರಿ ನೋಡೋಣ. ಆಚಾರ್ಯ...ಏನು ಹೇಳಬೇಕು? ಸುಧಾರಕ-ಮಡಿ-ಮೈಲಿಗೆಗಳ ಪ್ರತ್ಯಕ್ಷ ಕಾರಣಗಳನ್ನು? ಆಚಾರ್ಯ ಇದಕ್ಕೆ ನಿಮಗೆ ನಾಸ್ತಿಕರೆಂದೆನ್ನ ಬೇಕಾಗುತ್ತದೆ. ಯಾಕಂ ದರೆ ನೀವು ಎಲ್ಲ ಸಂಗತಿಗಳಿಗೆ ಪ್ರತ್ಯಕ್ಷ ಪ್ರಮಾಣಗಳನ್ನೇ ಬೇಡುವಿರಿ, ಮಹಾ ರಾಷ್ಟ್ರ ಭಾಷೆಯನ್ನು ಅಧ್ಯಯನ ಮಾಡುವ ಅನ್ಯ ಭಾಷೆಯ ಮನುಷ್ಯನಿಗೆ ಪ ದಾರ್ಥ ಮಾತ್ರಗಳ ನಾಮ-ಲಿಂಗಗಳನ್ನು ಗೊತ್ತು ಹಚ್ಚುವದು ಕಠಿಣವಾಗುವಂ ತಿಳು, ಮತ್ತು ಆ ಆ ವಸ್ತುಗಳಲ್ಲಿ ಸ್ತ್ರೀತ್ವ-ದರ್ಶಕ ಇಲ್ಲವೆ ಪುರುಷತ್ವ-ದರ್ಶಕ ಸೂಕ್ಷ್ಮ ಬಿಚ್ಚು-ಕಡಿಮೆಯು ಲಕ್ಷ ದಲ್ಲಿ ಬಾರದ್ದರಿಂದ ಲಿಂಗಗಳನ್ನು ಗೊತ್ತು ಹಚ್ಚುವದರಲ್ಲಿ ಅವನು ಮೋಸಹೋಗುವಂತೆಯ ಮಡಿ-ಮೈಲಿಗೆಗಳ ವಿಷಯ ದಲ್ಲಿ ನಿಮ್ಮ ಲವಸ್ಯೆಯಾಗುತ್ತದೆ. ನೀವು ಮಡಿ-ಮೈಲಿಗೆಗಳನ್ನು ಮನಮುಟ ಪಾಲಿಸಿದ ಹೊರತು ನಿಮಗೆ ಅದರ ಸೂಕ್ಷ್ಮ ಕಾರಣಗಳು ತಿಳಿಯಲಾರವು, ಅವು ತಿಳಿಯುವ ವರೆಗೆ ಖುಷಿವಚನದ ಮೇಲೆ ನಂಬಿಗೆಯನ್ನಿಟ್ಟು ಸುಮ್ಮನೆ ಆಚರಿಸುತ್ತ ಹೋಗಬೇಕು. ಅದರಲ್ಲಿ ತಪ್ಪಿ ನಡೆದರೆ ಮನುಷ್ಯನಿಗೆ ಪಾಪವು ತಟ್ಟುತ್ತದೆ. ಸುಧಾರಕ-ನಿಮ್ಮ ಶಾಸ್ತ್ರಗಳೆಲ್ಲ ಬಹುಶಃ ಪಾಪಪುಣ್ಯಗಳ ಮೇಲೆಯೇ ಅವಲಂಬಿಸಿಕೊಂಡಿರುವಂತೆ ಕಾಣುತ್ತವೆ. ಯಾಕಂದರೆ ಒಂದಕ್ಕೂ ಭೌತಿಕಶಾಸ್ತ್ರೀ