ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ ಮೈಲಿಗೆಗಳ ಗುಟ್ಟು ಯಆಧಾರದ ಉತ್ತರವಿಲ್ಲ. ಇಂಥ ಅತಂತ್ರ ಉತ್ತರಗಳನ್ನು ನಿಮ್ಮಂಥ ಇನ್ನೊಬ್ಬ ವೈದಿಕ ಮರುಳನ ಮುಂದೆ ಹೇಳಿರಿ, ಸಾವಿರಾರು ಮಂದಿ ಅಂತ್ಯಜರು ಮುಟ್ಟಿದ ಒಂದು ವಸ್ತ್ರದಲ್ಲಿಯ ಮೈಲಿಗೆಯನ್ನೂ ಸಾವಿರಾರು ಮಂದಿ ಬ್ರಾಹ್ಮಣರು ಮುಟ್ಟಿ ದ ವಸ್ತ್ರದಲ್ಲಿಯ ಪವಿತ್ರತೆಯನ್ನೂ ಯಾವ ಬ್ರಾಹ್ಮಣನು ಸೂಕ್ಷ್ಮದರ್ಶಕ ಯಂ ತ್ರದಲ್ಲಿ ತೋರಿಸುವನು? ಹೀಗೆ ತೋರಿಸಲಿಕ್ಕೆ ಬಾರದಿದ್ದ ಮೇಲೆ ಮಡಿ-ಮೈಲಿ ಗೆಗಳು ನಿರರ್ಥಕವೆಂದು ಯಾಕೆ ಅನ್ನಬಾರದು? ಬರಿಯ ಅಂಧಶ್ರದ್ದೆಯ ಮೇಲೆ ಯಾರ ವಿಶ್ವಾಸವೂ ಕೂಡದು. ಇಂಥ ಅಂಧಶ್ರದ್ದೆಯನ್ನು ಜನರಿಗೆ ಬೋ ಧಿಸಿ-ಬೋಧಿಸಿಯೇ ನೀವು ಅವರನ್ನು ಇಷ್ಟು ವಿಚಾರಶೂನ್ಯರನ್ನಾಗಿ ಮಾಡಿರು ತ್ತೀರಿ, ಈ ಹಾಳು ಮಡಿ-ಮೈಲಿಗೆಗಳು ಎಂದು ನಮ್ಮ ದೇಶಬಿಟ್ಟು ಹೋಗುವ ವೋ ಅಂದೇ ನಮ್ಮ ಸುಖಕ್ಕೆ ಪ್ರಾರಂಭವಾಗುವದು. ಆಚಾರ್ಯ-ಮರ್ಖಾ, ಏನು ಮಾತಾಡುವಿ? ಮಡಿ-ಮೈಲಿಗೆಗಳ ವಿಚಾ ರವಿಲ್ಲದಿದ್ದರೆ ಧರ್ಮವೇ ಉಳಿಯುವಹಾಗಿಲ್ಲ. ಧರ್ಮವು ಮುಣುಗಿದ ಮೇಲೆ ಸುಖವೆಂತಹದು! ವಸ್ತುಸ್ಥಿತಿಯು ಹೀಗಿದ್ದು ಇದಕ್ಕೆ ವಿಪರೀತವಾಗಿ ಮಾತಾಡು ವ ನಿನ್ನ ಪಾಂಡಿತ್ಯಕ್ಕೆ ಧಿಕಾರವಿರಲಿ, ಸುಧಾರಕ (ಸಿಟ್ಟಿನಿಂದ)-ಸುಟ್ಟಿತು ನಿಮ್ಮ ಧರ್ಮವು; ಧರ್ಮ-ಧರ್ಮವೆಂ ದೇ ದೇಶದ ಸ್ಥಿತಿಯನ್ನು ಇಲ್ಲಿಗೆ ತಂದಿರುವಿರಿ! ಆಚಾರ್ಯ (ಶಾಂತನಾಗಿ) ----ಸುಧಾರಕ, ನಾನು ಶುದ್ದ ವೈದಿಕನು; ನನಗೆ ಅಷ್ಟೊಂದು ವ್ಯವಹಾರಿಕ ವಿಷಯಗಳು ತಿಳಿಯುವದಿಲ್ಲ. ನೀನು ಶುದ್ಧ ಲೌಕಿಕ ನಿದ್ದು, ಬರಿಯ ಇಂಗ್ರೇಜೆಯನ್ನೋದಿ ನಮ್ಮ ಧರ್ಮದ ವಿಷಯವಾಗಿ ಕೇವಲ ಆ ಜ್ಞಾನಿಯಿರುತ್ತೀ, ಆದ್ದರಿಂದ ನಾವಿಬ್ಬರೂ ಹೀಗೆ ಸುಮ್ಮನೆ ಬಡದಾಡುವದರಿಂದ ಯಾವದೊಂದರ ನಿರ್ಣಯವಾಗುವದಿಲ್ಲ. ಅಗೋ ಅಲ್ಲಿ ಶಾಮರಾಯರು ಬರುತ್ತಿರುವರು. ಅವರು ಸಂಸ್ಕೃತದಲ್ಲಿ ದೊಡ್ಡ ಪಂಡಿತರೂ ಧರ್ಮಜ್ಞರೂ ಇ ದ್ದು, ಇಂಗ್ರೇಜೆಯನ್ನು ಓದಿ ಎ, ಏ, ವ್ಯಾಸಾದವರೂ ಇರುತ್ತಾರೆ; ದೊಡ್ಡ ದೊಡ್ಡ ವೈದಿಕರೂ ಕೂಡಾ ಧರ್ಮ ಶಾಸ್ತ್ರದಲ್ಲಿ ಸಂಶಯ ಬಂದರೆ ಅವರನ್ನು ಕೇ ಳುತ್ತಾರೆ. ಓಹೋ! ಅವರು ಇಲ್ಲಿಗೇ ಬಂದುಬಿಟ್ಟರು; ನಮಸ್ಕಾರ, ರಾಯರೇ ನಮಸ್ಕಾರ!! ಶಾಮರಾಯ-ಇದೇನು ಆಚಾರ್ಯರೇ, ಇಲ್ಲಿ ನಿಂತುಕೊಂಡಿರುವಿರಿ? ಆಚಾರ್ಯ-ನನಗೂ ಈ ಸುಧಾರಕ ಮಹಾಶಯರಿಗೂ, ವಾದ ಬಿದ್ದಿ