ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು. ಆಚಾರ್ಯ-ರಾಮರಾಯರೇ ನೀವು ನನಗೆ ಋಣಿಯಾಗುವದಕ್ಕೆ ಕಾರ ಣವೇನು? ನಾನೂ ನನ್ನ ಕರ್ತವ್ಯವನ್ನೇ ಮಾಡಿರುವೆನಲ್ಲವೆ? (ಸುಧಾರಕನಕಡೆಗೆ ತಿ ರುಗಿ) ಸುಧಾರಕರೇ, ಯಾಕೆ ಸುಮ್ಮನಕುಳಿತಿರಿ? ರಾಯರಮುಂದೆ ನಿಮ್ಮ ಆಕ್ಷೆ ಪಣೆಗಳನ್ನು ತಿಳಿಸಿ. ಸುಧಾರಕ-ನಿಮಗೆ ತಿಳಕೊಳ್ಳುವ ಇಚ್ಚೆಯಿದ್ದರೆ ನೀವೇ ಕೇಳಿರಿ; ಇಲ್ಲ ದಿದ್ದರೆ ಬಿಡಿರಿ; ನಾನು ಸುಮ್ಮನೆ ಕುಳಿತುಕೇಳತಕ್ಕವನು. ಮಧ್ಯದಲ್ಲಿ ಏನಾದರೂ ಕೇಳುವಪ್ರಸಂಗಬಂದರೆ ಮಾತ್ರ ಮಾತಾಡುವೆನು, ಆಚಾರ್ಯ-ರಾಯರೇ, ಈ ಸುಧಾರಕರು ನಾವು ಮಾಡುವ ಮಡಿ ಮೈಲಿಗೆಗಳಿಗೆ ಅಲ್ಲಗಳೆಯುತ್ತಾರೆ. ವಿಧವೆಯರಾದ ಸಕೇಶಿ ಸ್ತ್ರೀಯರನ್ನು ವಿಧಿ ನಿಷೇಧವಿಲ್ಲದೆ ಮುಟ್ಟಬೇಕಂತೆ! ಅಂತ್ಯಜರನ್ನು ಸಜ್ಜಿಗೆ ಕರಕೊಳ್ಳಬೇಕಂತೆ! ಅಂತೂ ಧರ್ಮ ಸಂಕರಕ್ಕೆ ಎಷ್ಟು ಬೇಕೋ ಅಷ್ಟನ್ನು ಗಂಟಿಕ್ಕಿ ಬಾಯ್ಲಿಡುತ್ತ ಲಿದ್ದಾರೆ. ಅವರ ಪ್ರಶ್ನೆಗಳ ರಭಸಕ್ಕೆ ಕೇವಲ ವೈದಿಕರಾದ ನಮ್ಮಿಂದ ನಿಲ್ಲುವ ದಾಗುವದಿಲ್ಲ. ಈಗ ನಾವು ಆಚರಿಸುತ್ತಿರುವ ಮಡಿ-ಮೈಲಿಗೆಯ ಪದ್ಧತಿಯಲ್ಲಿ ಗುಣವೇನು? ದೋಷವೇನು? ಎಂಬದನ್ನು ನೀವು ಸುಧಾರಕರ ಮನಸ್ಸು ಸಮಾ ಧಾನವಾಗುವ ಹಾಗೆ ಹೇಳಬೇಕು. ಕಾಮರಾಯ-ಆಚಾರ್ಯರೇ, ನಮ್ಮ ಪೂರ್ವಜರು ಬಹು ದೂರ ಲಕ್ಷ ಗೊಟ್ಟು ಧರ್ಮಶಾಸ್ತ್ರವನ್ನು ರಚಿಸಿರುತ್ತಾರೆ. ಅವರಷ್ಟು ಸೂಕ್ಷ್ಮ ಸಂಗತಿಗಳ ಜ್ಞಾನವು ನಮ್ಮಲ್ಲಿ ಇಲ್ಲದಂತಾದ್ದರಿಂದ ಅಜ್ಞಾನದ ಮೂಲಕ ನಾವು ಬಾಯಿಗೆ ಬಂದಂತೆ ಬಡಬಡಿಸಬೇಕಾಗುತ್ತದೆ. ಇರಲಿ; ಈಗ ನಾವು ಪಾಲಿಸುತ್ತಿದ್ದ ಮಡಿ ಮೈಲಿಗೆಗಳಲ್ಲಿ ಕೆಲವು ಪದ್ಧತಿಗಳು ಸಶಾಸ್ತ್ರವಿರುತ್ತವೆ; ಕೆಲವು ನಿಯಮೇಲಿಂದ ಉಂಟಾಗಿರುತ್ತವೆ. ಶಾಸ್ತ್ರ ಸಮ್ಮತವಾದ ಪರಿಶುದ್ಧ ಮಡಿ-ಮೈಲಿಗೆಗಳ ಪದ್ಧತಿಯಲ್ಲಿ ನಾವೀಗ ಎಷ್ಟೊ ಸಿಥಿಲ ಮಾಡಿಕೊಂಡಿರುತ್ತೇವೆ; ಮತ್ತು ಕೆಲವನ್ನು ಅತಿ ಪ್ರಸಂಗ ರೂಪದಿಂದ ಬರಮಾಡಿಕೊಂಡಿರುತ್ತೇವೆ. ಮಡಿ-ಮೈಲಿಗೆಗಳ ವಿಷಯದಲ್ಲಿ ಧರ್ಮ ಶಾಸ್ತ್ರವು ಮುಖ್ಯವಾಗಿ ಎರಡು ಉದ್ದೇಶಗಳನ್ನಿಟ್ಟು ಕೊಂಡಿರುತ್ತದೆ. ಒಂದು ನೆಯದು ಜಡಶರೀರಕ್ಕೆ ಯಾವ ಬಗೆಯ ಸಾಂಸರ್ಗಿಕ ರೋಗಗಳಿಂದ ಮತ್ತು ರೋಗ ದಸೂಕ್ಷ್ಮ ಜಂತುಗಳಿಂದ ತೊಂದರೆಯಾಗದೆ, ಅದು ಸರ್ವದಾ ನಿರೋಗಿಯಾಗಿರ ಬೇಕೆಂಬದು; ಎರಡನೆಯದು ಕಾರಣ ದೇಹವು ಅಂದರೆ ಲಿಂಗಶರೀರ ಅಥವಾ ಮನಸ್ಸು ಬಹಿರುಪಾಧಿಗಳ ಸಂಸರ್ಗದಿಂದ ಚಾಂಚಲ್ಯವನ್ನು ಹೊಂದದೆ, ಪ್ರಶಾಂತವಾಗಿರ