ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಬೇಕೆಂಬದು, ಈ ಎರಡು ಉದ್ದೇಶಗಳು ಸಫಲವಾಗಬೇಕೆಂದೇ ಧರ್ಮಶಾಸ್ತ್ರವು ವಿಧಿನಿಷೇಧಗಳನ್ನು ಕಲ್ಪಿಸಿರುತ್ತದೆ. ಮತ್ತು 9ನ: 'ನುಗಳನ್ನು ಹಾಕಿಕೊ ಟ್ಟಿರುತ್ತದೆ. ದೇಹದಾರ್ಡ್ಯವನ್ನೂ ಮನಸ್ಸಿನ ಪ್ರಸನ್ನತೆಯನ್ನು ಬಯಸುವ ನಾವು ಆ ನಿಯಮಗಳನ್ನು ಪಾಲಿಸಲಿಕ್ಕೇ ಬೇಕು. ನೀತಿ ಶಾಸ್ತ್ರವು ಮಡಿ-ಮೈಲಿಗೆಗಳ ಕೆಲವಂಶವನ್ನು ರೂಪಾಂತರದಿಂದ ಒಳಗೊಂಡಿರುತ್ತದೆ, ಧರ್ಮಶಾಸ್ತ್ರವಾಗಲಿನೀತಿಶಾಸ್ತ್ರವಾಗಲಿ, ಮುಖ್ಯವಾಗಿ ಜನಾಂಗದ ಹಿತವನ್ನೇ ಮುಂದಿಟ್ಟು ಕೊಂಡಿರುವ ವಾದ್ದರಿಂದ ಅವು ಸರಪಣಿಯ ಕೊಂಡಿಗಳಂತೆ ಪರಸ್ಪರಸಂಬಂಧದಿಂದಬದ್ದಿಸಲ್ಪಟ್ಟಿ ರುತ್ತವೆ. ಮನುಷ್ಯನ ಕೊನೆಯ ಉದ್ದೇಶವು ಶುದ್ಧ ಸತ್ವವನ್ನು ಕಾಯ್ದುಕೊಳ್ಳು ವದಿರುವದರಿಂದ, ಆ ಶುದ್ಧ ಸತ್ವವನ್ನು ಸಂಪಾದಿಸುವ ಹಂಬಲವುಳ್ಳವನು ಅಂತ್ಯಜ ರನ್ನ ಷ್ಟೇ ಯಾಕೆ ತಮೋಗುಣಿಯಾದ ಬ್ರಾಹ್ಮಣನನ್ನು ಸಹ ಮುಟ್ಟಿಸಿಕೊಳ್ಳಲಾ ರನು, ಕ್ರೋಧವು ಚಾಂಡಾಲ ಸ್ವರೂಪವೆಂಬದು ಸರ್ವರಿಗೂ ವಿದಿತವಿದ್ದ ಸಂಗ ತಿಯಷ್ಟೇ; ಆದ್ದರಿಂದ ಕ್ರೋಧವುಳ್ಳವನು ಅರ್ಥಾತ್ ಕಠೋರನು ಅ೦ದರೆ ತಾವು ಸಪ್ರಿಯನು ಚಾಂಡಾಲ ಸ್ವರೂಪನೆಂದೇ ತಿಳಿಯಬೇಕಾಗುತ್ತದೆ. ಆಚಾರ್ಯರೇ, ಸ್ಪರ್ಶಾಸ್ಪರ್ಶತೆಯ ವಿಷಯವು ಬಹು ಮಹತ್ವದ್ದಿರುತ್ತದೆ. ಮಡಿ-ಮೈಲಿಗೆಗಳ ವಿಚಾರಕ್ಕೆ ಇದೇ ತಳಹದಿಯು; ಇದರ ಪೂರ್ಣರಹಸ್ಯವನ್ನು ತಿಳಿಯದೆ ಜನರು ಸುಮ್ಮನೆ ದುರಭಿಮಾನಕ್ಕೆ ಬಿದ್ದು ಬಡಿದಾಡುತ್ತಾರೆ; ಇದು ಸರಿ ಯಲ್ಲ. ಉಚ್ಚವರ್ಣದವರು ಅಂತ್ಯಜರನ್ನು ಮುಟ್ಟಿಸಿಕೊಳ್ಳದ್ದರಿಂದ ಅವರು ಅತಿ ಶೂದ್ರರನ್ನು ದ್ವೇಷಿಸುತ್ತಾರೆಂತಲ್ಲ; ಇದನ್ನು ನಮ್ಮ ಸುಧಾರಕ ಬಂಧುಗಳು ಲಕ್ಷ ದಲ್ಲಿಯೇ ತರುವದಿಲ್ಲ, ಆಚಾರ್ಯ-ಸುಧಾರಕರು ಅಂತ್ಯಜರನ್ನು ಸಂಗೈಯಲ್ಲಿ ತಕೊಳ್ಳಲೇಬೇ ಕೆಂದು ಯಾಕೆ ಆಗ್ರಹ ಪಡುತ್ತಾರೆ? ಶಾಮರಾಯರು-ಒಂದು ವಿಶಿಷ್ಟ ಪದ್ಧತಿಯಿಂದ ನಡೆಯುವದು ಬೇಸರ ಬಂದದ್ದರಿಂದ ಅವರು ಹೀಗೆ ಕುಣಿದಾಡುತ್ತಾರೆ. ಇದರಲ್ಲೇನೂ ತಥ್ಯಾಂಶ ವಿಲ್ಲ, ಸ್ಪರ್ಶಾಸ್ಪರ್ಶತೆಯಗೊಂದಲವು ಬರಿಯ ನಮ್ಮ ಹಿಂದೂ ಜನರಲ್ಲಿದೆ. ಇ ರುದೆಂತಲ್ಲ; ಸುಧಾರಿಸಿದ ಎಲ್ಲ ಜನಾಂಗಗಳಲ್ಲಿ ಒಂದಿಲ್ಲೊಂದು ಪರ್ಯಾಯದಿಂ ದ ಇದ್ದೇ ಇರುತ್ತದೆ. ಸಕೃದ್ದರ್ಶನಕ್ಕೆ ಹಿಂದೂ ಜನರ ಹೊರತು ಮಿಕ್ಕ ಜನರಲ್ಲಿ ಈ ತೊಂದರೆಯಿಲ್ಲೆಂದು ಕಂಡರೂ ಅದು ಭ್ರಮವೆಂದು ವಿಚಾರಾಂತದಲ್ಲಿ ತಿಳಿಯ ಧೆ ಇರದು! ಅತಿ ಶೂದ್ರರನ್ನೂ ಕೂಡಾ ತಮ್ಮ ಜಾತಿಯಲ್ಲಿ ಸಮಾವೇಶ ಮಾಡಿ