ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧k ಮಡಿ-ಮೈಲಿಗೆಗಳ ಗುಟ್ಟು, ಗೂ ಸಂಬಂಧವೇನು? ಅವುಗಳ ಸ್ಪರ್ಶದಿಂದ ಪವಿತ್ರತೆಯು ಯಾಕೆ ನಷ್ಟವಾಗ ಬೇಕು? ಅದರಂತೆ ಉಪಾಸನೆಯ ಕಾಲವನ್ನು ಹೊರತುಪಡಿಸಿ ಉಳಿದವೇಳೆಯ ಲ್ಲಿ ಮಡಿಮೈಲಿಗೆಯ ನಿರ್ಬಂಧವನ್ನು ಯಾಕೆ ಪಾಲಿಸಬೇಕು? ಇವೇ ಮೊದಲಾದ ಪಶ್ನೆಗಳು ಚಿಕಿತ್ಸಕರಮನಸ್ಸಿನಲ್ಲಿ ಸಹಜವಾಗಿ ಉದ್ಭವಿಸಬಹುದು; ಈ ಪ್ರಶ್ನೆ ಮಾಲಿ ಕೆಗೆ ಕಾರ್ಯ-ಕಾರಣಯುಕ್ತ ಸಮಾಧಾನವು ಸಿಗದ್ದರಿಂದ ಎಷ್ಟೋ ಜನರು ಮೆ ಆಗ ಮಡಿಮೈಲಿಗೆಯ ಸ್ಪರ್ಶಾಸ್ಪರ್ಶತೆಯ ವಿಷಯದಲ್ಲಿ ಅನಾದರಬುದ್ದಿಯನ್ನು ತಾಳುವರು, ಇಲ್ಲವೇ ಅಂಧಶ್ರದ್ಧೆಯಿಂದ ಅದನ್ನು ಪಾಲಿಸುವರು. ಆದರೆ ಅದರ ಮರ್ಮವು ತಿಳಿಯದ್ದರಿಂದ ನಿಜವಾದ ಉನ್ನತಿಯು ಆಗತಕ್ಕಷ್ಟು ಅವರಿಂದಾ ಗುವದಿಲ್ಲ, ಈ ಅತಂತ್ರ ಸ್ಥಿತಿಯಿಂದ ಎಷ್ಟೊಸಾರೆ ಅವರ ಅವನತಿಯಾದರೂ ಆ ಗುತ್ತದೆ. ಆದ್ದರಿಂದ ಇದರಲ್ಲಿಯ ಮರ್ಮವೇನಿರಬಹುದೆಂಬದನ್ನೂ ಸಂಬಂಧವೇ ನೆಂಬದನ್ನು ನಾವು ತಿಳಿಯಲಿಕ್ಕೇ ಬೇಕು. ಈ ವಿಷಯವನ್ನು ನಾಳೆಗೆ ಚರ್ಚಿ ಸೋಣವಂತೆ? ಬಹಳಹೊತ್ತಾಯಿತು. ಇನ್ನು ನಡೆಯಿರಿ, ಸುಧಾರಕ-ಆಚಾರ್ಯನಮಸ್ಕಾರ ರಾಯರೇ, ಅಪ್ಪಣೆಯ ಪ್ರಕಾ ರ ನಾಳೆಗೆ ಬರುವೆವು. ಮುಂದಿನ ಮಹತ್ವದ ವಿಷಯವನ್ನು ಕೇಳುವ ಇಚ್ಛೆ ಯು ಬಹಳಿರುತ್ತದೆ.