ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಮೈಲಿಗೆಗಳ ಗುಟ್ಟು. ಲೇಖಾಂಕ ೩, Gk ಶಾಮರಾಯ-ಆಚಾರ್ಯ, ಹಾಗು ಸುಧಾರಕಬಂಧುಗಳೇ, ೩ ನ್ನೆಯ ದಿವಸ ಅಪೂರ್ಣವಾದ ವಿಷಯವನ್ನು ಇದಿವಸ ಹೇಳುವೆನು ಕೇಳಿರಿ, ನಮ್ಮ ೪ ಪವಿತ್ರಾಪವಿತ್ರಗಳ ಪರಿಣಾಮವಾಗುವಂಥ ಎರಡುಸ್ಥಾನಗಳಿರುತ್ತವೆ. ಒಂದನೆ ಯದು ಮನಸ್ಸು; ಎರಡನೆಯದು 'ಶರೀರ, ಇವುಗಳಲ್ಲಿ ಶರೀರದಮೇಲೆ ಹಿತ ಅಥವಾ ಅಹಿತಗಳನ್ನು ಮಾಡುವಂಥ ಪದಾರ್ಥಗಳ ವಿಷಯವಾಗಿ ಮಡಿ-ಮೈಲಿಗೆಯನಿಯ ಮವನ್ನು ಪಾಲಿಸುವದು ವ್ಯವಹಾರಿಕ ಅಥವಾ ಸ್ಕೂಲವಿಚಾರವೆನಿಸುವದು, ಮ ತ್ತು ಮನಸ್ಸಿನಮೇಲೆ ಹಿತ ಅಥವಾ ಅಹಿತವನ್ನುಂಟುಮಾಡುವಂಥ ಪದಾರ್ಥಗಳ ವಿಷಯವಾಗಿ ವಿಚಾರಮಾಡುವದು ಆತ್ಮಿಕ ಇಲ್ಲವೆ ಪಾರಮಾರ್ಥಿಕವೆನಿಸುವದು, ಈ ಎರಡುಬಗೆಯ ವಿಚಾರಗಳಲ್ಲಿ ಮೊದಲು ಸ್ಕೂಲವಿಚಾರವನ್ನು ಅಂದರೆ ವ್ಯಾವ ಹಾರಿಕ ವಿಚಾರವನ್ನು ಹೇಳುವೆನು; ಯಾಕಂದರೆ ಈ ವಿಚಾರದಸಹಾಯದಿಂದ ಮನಸ್ಸಿಗೆ ಸಂಬಂಧಿಸಿದ ವಿಷಯವು ಸುಲಭವಾಗಿ ತಿಳಿಯುವುದು. ಶಾರೀರಿಕ ಮಡಿ ಮೈಲಿಗೆಯ ವಿಚಾರವನ್ನು ಪ್ರಾರಂಭಿಸುವಮೊದಲು ನಮ್ಮ ಶರೀರದಲ್ಲಿ ಹುಟ್ಟುವ ಆದರೆ ಶರೀರದ ಮೇಲೆ ಅಹಿತಪರಿಣಾಮವನ್ನುಂಟುಮಾಡುವಂಥ ಮೈಲಿಗೆಯ ಪ ದಾರ್ಥವನ್ನು ಕುರಿತು ವಿಚಾರಿಸೋಣ. ದೇಹದೊಳಗಿಂದ ಅಂತರ್ಜಾಹ್ಯ ತ್ವಚೆಯ ಮೇಲೆ ಬರುವ ಮಲವು ಆ ಸ್ಥಳದಲ್ಲಿ ಬಹಳ ಹೊತ್ತಿನ ವರೆಗೆ ಉಳಿದರೆ ಶರೀರಕ್ಕೆ ಅಪಾಯ ಮಾಡುವದೆಂಬದು ಅನುಭವ ಸಿದ್ದವಾದ ಸಂಗತಿಯಷ್ಟೇ? ಆ ಮಲವು ಶರೀರಕ್ಕೆ ಬೇಡಾದ್ದರಿಂದಲೇ ಅದನ್ನು ಅಂತಃಪ್ರಕೃತಿಯು ಹೊರದೂಡಿರುತ್ತದೆ. ಆದ್ದರಿಂದ ಆ ಮಲವನ್ನು ಶರೀರದಿಂದ ಹೊರಗೆ ಹಾಕುವದು ಮೊದಲನೆಯ ಕೆಲಸವು ಬಹಿರ್ದೆಶೆಗೆ ಹೋಗಿ ಬರುವದು, ಮುಖಮಾರ್ಜನ ಮಾಡಿಕೊಳ್ಳುವದು, ಹಲ್ಲು ನಾಲಿಗೆಗಳನ್ನು ಸ್ವಚ್ಛ ವಾಗಿ ತಿಕ್ಕಿಕೊಳ್ಳುವದು ಇವೆಲ್ಲ ಕ್ರಿಯೆಗಳು ಆ೦ತಯಳ ತ್ವಚೆಯ ಸ್ವಚ್ಛತೆಗೆ ಸಂಬಂಧಿಸುತ್ತವೆ. ಕಣ್ಣುಗಳನ್ನು ಚನ್ನಾಗಿ ತೊಳೆದುಕೊಂಡು ಸರ್ವಾಂಗದಲ್ಲಿ ಯ ಬೆವರಿನಿಂದುಂಟಾದ ವಿಷಯುಕ್ತ ಮಲವನ್ನು ಸ್ನಾನದಿಂದ ಹೋಗಲಾಡಿಸಿ ಮೈಯನ್ನು ಜಳಜಳ ಇಟ್ಟು ಕೊಳ್ಳಬೇಕು; ಇದರಿಂದ ಬಾಹ್ಯತ್ವಚೆಯು ಸಂಪೂ ರ್ಣವಾಗಿ ನಿರ್ಮಲವಾಗುವದು. ಈ ಪ್ರಕಾರ ತ್ವಚೆಯನ್ನು ಶುಚಿಗೊಳಿಸಿದ ಮೇಲೆ ಜಳಜಳ ಒಗೆದ ಬಟ್ಟೆಗಳನ್ನು ಸರಿಧಾನ ಮಾಡಬೇಕು. ಇಷ್ಟಾದ ಬಳಿಕ