ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿವೈಡಿಗೆಗಳ ಗುಟ್ಟು, ಲೂ ಎಚ್ಚರಪಡತಕ್ಕ ಸಂಗತಿಯೆಂದರೆ ನಾವು ಯಾರ ಹಾಗು ಯಾವ ವಸ್ತ್ರಗ ಇನ್ನೂ ಚನ್ನಾಗಿ ಒಗೆದ ಹೊರತು ನಮ್ಮ ಮೈಮೇಲೆ ಧರಿಸಬಾರದು. ಅಂ ದರೆ ದುಷ್ಟ ಪದಾರ್ಥದ ಸಂಸರ್ಗವಾಗುವದಿಲ್ಲ. ಜಾತಿಜಾತಿಯೊಳಗಿನ ಮಾತು ಒತ್ತಟ್ಟಿಗಿರಲಿ; ತಮ್ಮ ಕುಟುಂಬದೊಳಗಿನ ಜನರ ವಸ್ತ್ರಗಳನ್ನು ಕೂಡಾ ಉಪ ಯೋಗಿಸುವದು (ಧರಿಸುವದು) ಹಿತಕರವಾಗಿರುವದಿಲ್ಲ, ಗಜಕರ್ಣ ಮೊದಲಾದ ಚರ್ಮರೋಗಗಳು, ಈ ನಿಯಮವನ್ನು ಪಾಲಿಸದೆ ಇರುವದರಿಂದ ಪ್ರಾಪ್ತವಾಗು ಇವೆ. ಇಷ್ಟೇ ಅಲ್ಲ; ಇದರಿಂದ ದೊಡ್ಡ ದೊಡ್ಡ ರೋಗಗಳು ಪ್ರಸಾರವಾಗು ವದನ್ನಾ ದರೂ ಬಹು ಜನರು ಬಲ್ಲರು. ಒಬ್ಬನು ಸ್ನಾನ ಮಾಡಿ ಮೈ ಒರೆಯಿಸಿಕೊಂಡ ವಸ್ತ್ರವನ್ನೆ ಇನ್ನೊಬ್ಬ ನು ಸ್ನಾನಮಾಡಿ ಮೈ ಒರೆಸಿಕೊಳ್ಳಲಿಕ್ಕೆ ಮಡಿ ವಸ್ತ್ರವೆಂದು ಉಪಯೋಗಿಸಿಕೊ ಳ್ಳುತ್ತಾನೆ. ಮೊದಲು ಮೈಯೊರಸಿಕೊಂಡವನ ಮೈಯೊಳಗಿನ ಬೆವರು ಮೊದ ಲಾದ ದುಷ್ಟ ರಸಿಗೆಯ ಆ ವಸ್ತ್ರಕ್ಕೆ ಅಂಟಿಕೊಂಡಿರುವದರಿಂದ ಹಿಂದುಗಡೆ ಒರೆ ಸಿಕೊಂಡವನ ಮೈ ಮೇಲೆ ಆದ ಅನಾಯಾಸವಾಗಿ ಕೂತುಕೊಳ್ಳುತ್ತದೆ. ಮತ್ತು ನಿರೋಗಿಯಾದ ಅವನ ಶರೀರದಲ್ಲಿ ರೋಗವನ್ನುಂಟುಮಾಡುತ್ತದೆ. ಊಷ್ಣ ಮೊದಲಾದ ಭಯಂಕರ ರಸಿಕೆಯಿಂದ ದೂಷಿತವಾದ ವಸ್ತ್ರಗಳನ್ನು ಚನ್ನಾಗಿ ಒಗೆ ಯದ್ದರಿಂದ ಅವನನ್ನು ಧರಿಸಿ ಆ ದುಷ್ಟು ವಿಕಾರಕ್ಕೆ ಒಳಪಡುವ ಪ್ರಸಂಗವು ಎಷ್ಟೋ ಜನರಿಗೆ ಬಂದಿರುತ್ತದೆ. ಆದ್ದರಿಂದ ಸ್ನಾನ ಮಾಡಿದ ಮೇಲೆ ಉಪಯೋ ಗಿಸತಕ್ಕ ಬಟ್ಟೆ ಯು ತನ್ನದೇ ಆಗಿದ್ದು, ಮೊದಲು ಚನ್ನಾಗಿ ಒಗೆದು ಒಣಗಿಸಿದ್ದಿ ರಬೇಕು; ಕದಾಚಿತ್, ಮಂದಿಯ ಬಟ್ಟೆಯನ್ನು ಉಪಯೋಗಿಸುವ ಪ್ರಸಂಗಬಂ ದಲ್ಲಿ ಮೊದಲು ಅದನ್ನು ಸ್ವಚ್ಛವಾಗಿ ಒಗೆದು ನಿರ್ದುಷ್ಟವಾದ ಬಳಿಕ ಧರಿಸ ಕು. ಒಟ್ಟಿನ ಮೇಲೆ ತನ್ನ ಸರ್ವಪದಾರ್ಥಗಳು ಅನ್ಯರ ಸ್ಪರ್ಶದಿಂದ ಮತ್ತು ಆ ಶುದ್ದ ಪದಾರ್ಥಗಳ ಸ್ಪರ್ಶದಿಂದ ಸ್ವಲ್ಪಾದರೂ ದ ಸಮಿತವಾಗದಂತೆ ಎಚ್ಚರಪಡು ವದು ಬುದ್ದಿವಂತಿಕೆಯ ಕೆಲಸವಾಗಿರುವದು. ಇದರಲ್ಲಿಯೇ ಆರೋಗ್ಯ ವೆಂಬ ಬೆಲೆ ಯುಳ್ಳ ವಸ್ತುವು ೭೭ಡಗಿಕೊಂಡಿರುವದು. * ಈರೀತಿಯಾಗಿ ಶರೀರವನ್ನು ನಿರ್ಮಲವಾಗಿಡುವ ಬಾಹೋಪಾಯವಿರುವದು, ಇದಕ್ಕೆಶಾರೀರಕ ಮಡಿಯೆಂಬಸಂಜ್ಞೆಯು, ಯಾರುಯಾರುಎಷ್ಟೆಷ್ಟು ಶುದ್ಧತೆಯನ್ನು ಪಾಲಿಸುತ್ತ ಹೋಗುವರೋ ಅವರವರಿಗೆ ಅಷ್ಟಷ್ಟು ಸೂಕ್ಷ್ಮ ಅಶುದ್ಧತೆಯು ಕೂಡ ಪರಿಣಾಮವಾಗುವ ಪಾತ್ರತೆಯು ಬರುತ್ತದೆ. ಆದರೆ ಯಾರಿಗೆ ಯಾವಾಗಲೂ