ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

So ಮಡಿಮೈಲಿಗೆಗಳ ಗುಟ್ಟ, ಮಲದಲ್ಲಿದ್ದು ದದ್ದು ಬಿದ್ದು ಹೋಗಿರುವದೋ ಅಂಥವರಿಗೆ ಅದರ ಅನಿಷ್ಟ ಪರಿಣಾ ಮವು ಲಕ್ಷದಲ್ಲಿ ಬರುವದಿಲ್ಲ. ಯಾವವಾದರೂ ಎರಡು ಪದಾರ್ಥಗಳು ಪರಸ್ಪರ ಸ್ಪರ್ಶವನ್ನು ಹೊಂದಿದರೆ ಅವುಗಳೊಳಗೆ ಉಷ್ಣತೆ ಮತ್ತು ವಿದ್ಯುಲ್ಲತೆಯ ಅಭಿಸರಣವಾಗ ತೊಡಗುತ್ತದೆ. ಅಂದರೆ ಸ್ಪರ್ಶದಯೋಗದಿಂದ ಮಲಸ್ಥಿತಿಯಲ್ಲಿ ಹೆಚ್ಚು ಕಡಿಮೆಯಾಗಲಿಕ್ಕೆ ಪ್ರಾ ರಂಭವಾಗುತ್ತದೆ. ಈ ಹೆಚ್ಚು ಕಡಿಮೆಯು ಇಷ್ಟ ಅಥವಾ ಅನಿಷ್ಟವಾಗಿರು ವದು. ಜಡಪದಾರ್ಥಗಳಿಗಿಂತ ಚೈತನ್ಯವುಳ್ಳವುಗಳ ಸ್ಪರ್ಶ ಕ್ರಿಯೆಯಲ್ಲಿ ಮತ್ತೆ ಷ್ಟು ಚೈತನ್ಯ ವಿದ್ಯುತ್ತಿನ (ಇದಕ್ಕೆ ಹಿರಣ್ಯ ಗರ್ಭತೇಜವೆಂಬ ಸಂಜ್ಞೆಯು ನಮ್ಮ ಪ್ರಾ ಚೀನರಿಂದ ಕೊಡಲ್ಪಟ್ಟಿದೆ.) ಅಭಿಸರಣವಾಗುವದು. ಇದಾದರೂ ಮೇಲಿನಂತ ಹಿತಕರ ಅಥವಾ ಅಹಿತಕರವಾಗಿ ಪರಿಣಮಿಸುತ್ತದೆ. ಇದು ಆ ಆ ಶಾಸ್ತ್ರಗಳಿಂದ ಲೂ ಅನುಭವದಿಂದಲೂ ಸಿದ್ಧವಾಗಿರುತ್ತದೆ. ಈ ಮೇಲಿನ ನಿಯಮದಂತೆ ಯಾರೊಬ್ಬರ ಹಸ್ತ ಸ್ಪರ್ಶವಾದರೆ ಅಹಿತಕಾ ರಕ ಸ್ಥಿತಿಯುಂಟಾಗುವ ಸಂಭವವಿರುತ್ತದೆ. ಯಾಕಂದರೆ ಸ್ಪರ್ಶದ ಸಂಗಡ ಎ ದ್ಯುತ್ ಪ್ರವಾಹವು ಪ್ರವಹಿಸ ಹತ್ತುವದು, ಎಲ್ಲ ಜನರ ರಕ್ತದಲ್ಲಿಯ ಉಷ್ಣತೆ ಯು ಸಮನಾಗಿರುವದಿಲ್ಲ, ಆದ್ದರಿಂದ ಅದು ಸ್ಪರ್ಶದಿಂದ ಸಮಾನವಾಗಲಿಕ್ಕೆ ಯತ್ನಿಸುತ್ತದೆ. ಈ ಉಷ್ಣತೆಯ ಯತ್ನದಲ್ಲಿ ನಮಗೆ ಹಲವು ಸಾರೆ ಅಹಿತವಾ ಗುವ ಪ್ರಸಂಗ ಬರುತ್ತದೆ. ಇದಲ್ಲದೆ ಸ್ಪರ್ಶದಿಂದ ಜ್ಞಾನತಂತುಗಳೊಳಗಿನ ವಿದ್ಯು ಚ್ಛಕ್ತಿಯು ಸಮಾನತ್ವವನ್ನು ಸ್ವೀಕರಿಸುತ್ತದೆ. ಇದರಿಂದಲೂ ನಮಗೆ ಅಪಾಯ ಗಳು ಒದಗುತ್ತವೆ. ವಿದ್ಯುಲ್ಲತೆಯು ರಕ್ತದ ಜೀವನವಿರುತ್ತದೆ. ಅದು ರಕ್ತದಲ್ಲಿ ಕಡಿಮೆ ಕಾರ್ಯಕರ್ತೃಕವಾದರೆ ನಮಗೆ ಅಹಿತವಾಗುತ್ತದೆ. ಆದ್ದರಿಂದ ವಿದ್ಯುತ್ ಪ್ರವ ಹಣ ಪ್ರತಿಬಂಧಕ ವಸ್ತ್ರಗಳಿಗೆ ಮಡಿಯೆಂದು ತಿಳಿಯುವದುಂಟು; ಉಣ್ಣೆ ಹಾಗು ರೇಶಿಮೆಯ ವಸ್ತ್ರಗಳು ಮಡಿಯಲ್ಲಿ ಶ್ರೇಷ್ಠವಾದವುಗಳೆಂದು ತಿಳಿಯಲ್ಪಡುವವು. ಇವುಗಳಿಗೆ ಸುಹಾವಸ್ತ್ರಗಳೆಂಬ ಸಂಜ್ಞೆಯಿರುತ್ತದೆ. ನೂಲಿನ ವಸ್ತ್ರಗಳು ಒಗೆದರೆ ಮಡಿಯೆನಿಸಿಕೊಳ್ಳುತ್ತವೆ. ಯಾಕಂದರೆ ಅವುಗಳ ಮೇಲೆ ಅನ್ಯರ ಶರೀರದೊಳ ಗಿನ ವಿದ್ಯುತ್ತಿನ ಯೋಗದಿಂದ ಅಹಿತಕಾರಕ ಪರಿಣಾಮವುಂಟಾಗಿದ್ದರೆ ಅದು ನ ಮಗೆ ಬಾಧಿಸಬಾರದೆಂದು ನೀರಿಗೂ-ವಿದ್ಯುತಿಗೂ ಪರಮ ಸಖ್ಯವಿರುವದರಿಂದ ನೀರಲ್ಲಿ ಚನ್ನಾಗಿ ಒಗೆದು ಆ ಅಹಿತಕಾರಕ ಪರಿಣಾಮದಿಂದ ಆ ಬಟ್ಟೆಯನ್ನು ಶುದ್ಧ