ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಮಡಿ-ಮೈಲಿಗೆಗಳ ಗುಟ್ಟು ಡಲಿಕ್ಕೆ ಪ್ರಯತ್ನಿಸಿದರೆ ಆಗುವದೇನು? ಇವರಿಂದ ಸನಾತನ ಧರ್ಮವು ಸುಳ್ಳಾಗ ವದೇ? ಮಡಿ-ಮೈಲಿಗೆಯ ತ್ರಿಕಾಲಾಬಾಧಿತ ತತ್ವವು ನಷ್ಟವಾಗುವದೇ? ಎಂದಿಗೂ ಆಗದು! ಧರ್ಮಶಾಸ್ತ್ರಾಜ್ಞೆಯನ್ನು ಪಾಲಿಸದವನೊಬ್ಬನೇ ಕೆಡುವನು! ಸುಧಾರಕ-(ಸ್ವಲ್ಪ ಅಸಮಾಧಾನದಿಂದ) ರಾಯರೇ, ಎಲ್ಲ ಸುಧಾರಕರು ಶ್ವಪಚರಿರುತ್ತಾರೆಂದು ತಿಳಿಯಲಾಗದು. ಸುಧಾರಕರೆಲ್ಲ ಬಹುತರ ಸ್ವಚ್ಛತೆಯ ಪ್ರಿಯರೇ; ಈಗ ನಾನು ಸುಧಾರಕ ಪಂಥದವನಷ್ಟೇ; ನಾನು ಹೊಲಸು ಬಟ್ಟಿ ಗಳನ್ನು ಟ್ಟು ಕೊಂಡು ಎಂದೂ ಉಣ್ಣುವದಿಲ್ಲ, ಅದೇ ಇಸ್ತ್ರಿ ಮಾಡಿಸಿತಂದಕಣ್ಣು ಕುಕ್ಕುವಂಥ ಜಳಜಳ ಬಟ್ಟೆ ಯನ್ನು ಕೊಂಡು ಊಟಮಾಡುತ್ತೇನೆ, ಊಟಕ್ಕೆ ಕುಳಿತಾಗ ಚಳಿಯಾಗಬಾರದೆಂದು ಇಲ್ಲವೆ ನೊಣ ಕಡಿಯಬಾರದೆಂದು ಶುಭ್ರವಾದ ಸೈರಣವನ್ನು ಹಾಕಿರುತ್ತೇನೆ. ಆದರೂ ನಮ್ಮ ತಂದೆಯು ನನ್ನ ನ್ನು ಬಯ್ಯುವನು. ಮೈಲಿಗೆಯಿಂದ ಕೂಳು ತಿನ್ನುತ್ತೀ ಎಂದು ಹಲ್ಲು ಕಡಿಯು ವನು. ನಾನು ಅವನ ಮರ್ಖತನಕ್ಕೆ ಮನಸಿನಲ್ಲಿಯೇ ನಕ್ಕು ಸುಮ್ಮನೇ ಉಂಡು ಹೊರಗೆ ಬರುತ್ತೇನೆ. ಸ್ವಚ್ಛವಾಗಿ ಒಗೆದ ಬಟ್ಟೆಗಳು ಶುಚಿರ್ಭೂತವಾದವುಗಳೆಂ ದು ನೀವು ಹ್ಯಾಗ ಈಗ ಹೇಳಿರುತ್ತೀರಿ. ಇನ್ನು ನಮ್ಮಪ್ಪನಿಗೆ ಚನ್ನಾಗಿ ಕೈಹಚ್ಚು ತೇನೆ. ಯೂಕೆ ಸುಮ್ಮನಿರುವಿರಿ? ನನ್ನ ಈ ಮಾತಿಗೆ ನಿಮ್ಮ ಅಂಬೋಣವೇನು? ಶಾಮರಾಯ-ಛೇ, ಛೇ, ಹುಡುಗಾ ನನ್ನ ಮಾತನ್ನು ಅಪಾರ್ಥವಾಗಿ ತಿಳಿದುಕೊಂಡೆ. ಇಷ್ಟೊತ್ತಿನ ವರೆಗೆ ನಿನಗೆ ಹೇಳಿದ್ದೆಲ್ಲ ನಿರರ್ಥಕವಾಯಿತು. ಒಮ್ಮೆ ಒಗೆದ ಬಟ್ಟೆಗಳನ್ನು ಸ್ನಾನಮಾಡದಿರುವಾಗ ಮುಟ್ಟಿದರೇ, ಅದಕ್ಕೆ ಸ್ವರ್ಶ ದೋಷವು ತಟ್ಟುತ್ತಿರಲು ಅಗಸರ ಮನೆಯಿಂದ ಬಂದ ಬಟ್ಟೆಗಳು ನಿರ್ದೋಷವುಳ್ಳ ವೆಂದು ಅಂದರೆ ಮಡಿಯವೆಂದು ನೀನು ಭಾವಿಸುತ್ತೀಯಲ್ಲ? ಹೀಗೆ ಅರ್ಥ ಮಾಡಿಕೊಳ್ಳುತ್ತಿರುವದರಿಂದ ನಿಮಗೆ ಸುಧಾರಕರೆಂಬ ಬಿರುದು ಬಂದಿದೆ. ಸ್ಪ ರ್ಶದಿಂದ ಎಷ್ಟೆಷ್ಟು ಅನರ್ಥಗಳಾಗುತ್ತವೆಂಬದನ್ನು ಹೇಳುತ್ತೇನೆ ಕೇಳು. ಈ ಮೊದಲೇ ನಿನಗೆ ಸ್ಪರ್ಶನದ ಕೆಲವು ವಿಷಯಗಳನ್ನು ಹೇಳುವಾಗ ಸ್ಪ ರ್ಶದಿಂದ ಉಷ್ಣತೆಯಲ್ಲಾಗುವ ಹೆಚ್ಚು-ಕಡಿಮೆ ವಿದ್ಯುತ್‌ ಸಂಚಾರ ಇವುಗಳ ನ್ನು ಹೇಳಿರುವೆನಷ್ಟೇ. ಈ ಉಷ್ಣತೆಯ ಹೆಚ್ಚು-ಕಡಿಮೆಯು ಸ್ಪಷ್ಟವಾಗಿ ತಿಳಿ ಯಲಿಕ್ಕೆ ಒಂದು ದೊಡ್ಡ ಉದಾಹರಣಏರುವದು. ಅದೇನಂದರೆ-ಸ್ತ್ರೀಯರಿ ಗೆ ತಿಂಗಳಿಗೊಮ್ಮೆ ರಜೋದರ್ಶನವಾಗುವದಷ್ಟೇ; ಈ ಬತುಕಾಲವು ಪ್ರಾಪ್ತ ವಾದಾಗ ಅವರು ಅಸ್ಪರ್ಶರಾಗಿ' ದೂರ ಇರುವರು. ಆದರೆ ನಾಲ್ಕನೆಯ ದಿವಸ